ಹಾಸನ: ಬೆಳಂಬೆಳಿಗ್ಗೆ ಜನವಸತಿ ಪ್ರದೇಶಕ್ಕೆ ಆನೆ ಹಿಂಡು ಲಗ್ಗೆ, ಕಾಡಿಗಟ್ಟಲು ಅರಣ್ಯಾಧಿಕಾರಿಗಳ ಹರಸಾಹಸ

ಹಾಸನ ಜಿಲ್ಲೆಯ ಬೇಲೂರು ಪಟ್ಣಣದ ಬಿಕ್ಕೋಡು ರಸ್ತೆಯ ಜನವಸತಿ ಪ್ರದೇಶಕ್ಕೆ ಇಂದು ಬೆಳಗ್ಗೆ 6 ಕಾಡಾನೆಗಳ ಹಿಂಡು ದಾಳಿ ಇಟ್ಟಿದ್ದು ಜನ ಭಯಭೀತರಾಗಿದ್ದಾರೆ. ಆನೆಯನ್ನು ಕಾಡಿಗಟ್ಟಲು ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾಸನ: ಜಿಲ್ಲೆಯ ಬೇಲೂರು ಪಟ್ಣಣದ ಬಿಕ್ಕೋಡು ರಸ್ತೆಯ ಜನವಸತಿ ಪ್ರದೇಶಕ್ಕೆ ಇಂದು ಬೆಳಗ್ಗೆ 6 ಕಾಡಾನೆಗಳ ಹಿಂಡು ದಾಳಿ ಇಟ್ಟಿದ್ದು ಜನ ಭಯಭೀತರಾಗಿದ್ದಾರೆ. ಆನೆಯನ್ನು ಕಾಡಿಗಟ್ಟಲು ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಇಂದು ಬೆಳಿಗ್ಗೆ ಸಕಲೇಶಪುರ ರಸ್ತೆಯ ಬಿಟ್ರುವಳ್ಳಿ ಗ್ರಾಮದ ಮೂಲಕ ಪುರಸಭೆಯ 8ನೇ ವಾರ್ಡಿನ ಚನ್ನಕೇಶವನಗರದ ಮೂಲಕ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಬಳಿಗೆ ಆನೆಗಳು ಆಗಮಿಸಿವೆ. ಇದೆ ಮೊದಲ ಬಾರಿಗೆ ಪಟ್ಟಣದೊಳಕ್ಕೆ ಆಗಮಿಸಿದ್ದು, ನಿವಾಸಿಗಳು ಮನೆಯಿಂದ ಹೂರಬಾರದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

 ಆರ್ ಎಫ್ ಒ ಯಾಸ್ಮಾಮಾಚಮ್ಮ ಹಾಗೂ ಸಿಬ್ಬಂದಿ ಪಟಾಕಿ ಸಿಡಿಸಿ, ಗಾಳಿಯಲ್ಲಿ ಹಾರಿಸಿ ಹಿಂಡನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆನೆಗಳನ್ನು ಕಾಡಿಗಟ್ಟಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com