ಕಲಬುರಗಿ: ಮೊಬೈಲ್ ಸಂದೇಶ ಆಧರಿಸಿ ಮಗು ಸೇರಿ 7 ಮಂದಿ ರಕ್ಷಿಸಿದ ಎನ್'ಡಿಆರ್'ಎಫ್ ಪಡೆ

ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಪ್ರವಾಹಕ್ಕೆ ಸಿಲುಕಿ ರಕ್ಷಣೆಗಾಗಿ ಪರದಾಡುತ್ತಿದ್ದ ಸಂತ್ರಸ್ತರು ರವಾನಿಸಿದ ಮೊಬೈಲ್ ಆಡಿಯೋ ಸಂದೇಶವೊಂದು ರಕ್ಷಣಾ ಕಾರ್ಯ ಯಶಸ್ವಿಯಾಗಿ ನಡೆಸಲು ಕಾರಣವಾಗಿದೆ.
ಸಂತ್ರಸ್ತರನ್ನು ರಕ್ಷಣೆ ಮಾಡುತ್ತಿರುವ ಎನ್'ಡಿಆರ್'ಎಫ್ ಪಡೆ
ಸಂತ್ರಸ್ತರನ್ನು ರಕ್ಷಣೆ ಮಾಡುತ್ತಿರುವ ಎನ್'ಡಿಆರ್'ಎಫ್ ಪಡೆ

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಪ್ರವಾಹಕ್ಕೆ ಸಿಲುಕಿ ರಕ್ಷಣೆಗಾಗಿ ಪರದಾಡುತ್ತಿದ್ದ ಸಂತ್ರಸ್ತರು ರವಾನಿಸಿದ ಮೊಬೈಲ್ ಆಡಿಯೋ ಸಂದೇಶವೊಂದು ರಕ್ಷಣಾ ಕಾರ್ಯ ಯಶಸ್ವಿಯಾಗಿ ನಡೆಸಲು ಕಾರಣವಾಗಿದೆ. 

ಆಡಿಯೋ ಸಂದೇಶ ಆಧರಿಸಿಯೇ ಮಳಖೇಡ ಮೊರಾರ್ಜಿ ಶಾಲೆಯಲ್ಲಿ ಸಿಲುಕಿದ್ದ 9 ಮಂದಿಯನ್ನು ನಡುರಾತ್ರಿಯಲ್ಲಿ ಎನ್'ಡಿಆರ್'ಎಫ್ ಹಾಗೂ ಪೊಲೀಸರು ರಕ್ಷಣೆ ಮಾಡಿದ್ದಾರೆ. 

ಕಾಗಿಣಾ ದಂಡೆಯ ಮಳಖೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಂಪೌಂಡ್ ಒಡೆದು ಮಳೆ ನೀರು ಒಳನುಗ್ಗಿದ ಪರಿಣಾಮವಾಗಿ ಶಾಲೆಯಲ್ಲಿ 9 ಮಂದಿ ಸಿಲುಕಿಕೊಂಡಿದ್ದರು. ಎಷ್ಟೇ ಪ್ರಯಾಸಪಟ್ಟರೂ ಹೊರಬರಲಾಗದ ಪರಿಸ್ಥಿತಿಯಲ್ಲಿದ್ದಾಗ ಒಬ್ಬ ಮಹಿಳೆ ತಮ್ಮ ಸಹಾಯಕ್ಕಾಗಿ ಧ್ವನಿ ಸಂದೇಶ ಕಳುಹಿಸಿ ಸಹಾಯಕ್ಕೆ ಅಂಗಲಾಚಿದ್ದಾರೆ. ಇದನ್ನರಿತ ಸಾಮಾಜಿಕ ಕಾರ್ಯಕರ್ತ ರಾಜು ಕಟ್ಟಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಿದ ಸೇಡಂ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ ರಕ್ಷಣಾ ಪಡೆ ಮೂಲಕ ಕಾರ್ಯಾಚರಣೆಗೆ ಇಳಿರು ರಕ್ಷಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com