ಸತತ ಮಳೆ: ಸೊನ್ನಾ ಬ್ಯಾರೇಜ್ ನಿಂದ ಭೀಮಾ ನದಿಗೆ 8.10 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ಮಹಾರಾಷ್ಟ್ರದ ಭೀಮಾದ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ  8.10 ಲಕ್ಷ ಕ್ಯೂಸೆಕ್ ಭಾರೀ ಪ್ರಮಾಣ ನೀರನ್ನು ಸೊನ್ನಾ ಬ್ಯಾರೇಜ್‍ ನಿಂದ ಭೀಮಾ ನದಿಗೆ ಶನಿವಾರ ಬಿಡುಗಡೆ ಮಾಡಲಾಗಿದೆ.  
ಸೊನ್ನಾ ಬ್ಯಾರೇಜ್‍
ಸೊನ್ನಾ ಬ್ಯಾರೇಜ್‍

ಕಲಬುರಗಿ: ಮಹಾರಾಷ್ಟ್ರದ ಭೀಮಾದ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ  8.10 ಲಕ್ಷ ಕ್ಯೂಸೆಕ್ ಭಾರೀ ಪ್ರಮಾಣ ನೀರನ್ನು ಸೊನ್ನಾ ಬ್ಯಾರೇಜ್‍ ನಿಂದ ಭೀಮಾ ನದಿಗೆ ಶನಿವಾರ ಬಿಡುಗಡೆ ಮಾಡಲಾಗಿದೆ.  

 ಇದರಿಂದಾಗಿ, ಉಕ್ಕಿ ಹರಿಯುತ್ತಿರುವ ಭೀಮಾ ನದಿಯು ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮನೆಗಳು, ರಸ್ತೆ ಮೂಲಸೌಕರ್ಯ ಮತ್ತು ವಿದ್ಯುತ್ ಮಾರ್ಗಗಳನ್ನು ಹಾನಿಗೊಳಿಸಿದೆ.

ಕಲ್ಯಾಣ ಕರ್ನಾಟಕ ಮತ್ತು ಅವಿಭಜಿತ ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ, ಈ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿಯೇ ಮುಂದುವರೆದಿದೆ.

ಮಹಾರಾಷ್ಟ್ರದ ವೀರ್ ಮತ್ತು ಉಜ್ಜನಿ ಅಣೆಕಟ್ಟುಗಳು ಮತ್ತು ಅಫ್ಜಲ್‌ಪುರ ತಾಲ್ಲೂಕಿನ ಸೊನ್ನಾ ಬ್ಯಾರೇಜ್‍ ನಿಂದ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿರುವುದರಿಂದ ಚಿತ್ತಾಪುರ, ಅಫ್ಜಲ್‌ಪುರ, ಜೇವರ್ಗಿ ಮತ್ತು ಶಹಾಬಾದ್ ತಾಲ್ಲೂಕುಗಳ 100 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com