ಮೈಸೂರು: ಕವಿ, ಕತೆಗಾರ ಎನ್. ಪ್ರಕಾಶ್ ನಿಧನ

ಕವಿ, ಕತೆಗಾರ ಎನ್ ಪ್ರಕಾಶ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಪ್ರಕಾಶ್
ಪ್ರಕಾಶ್

ಮೈಸೂರು: ಕವಿ, ಕತೆಗಾರ ಎನ್ ಪ್ರಕಾಶ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಪ್ರಕಾಸ್ ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಎಂಟು ಜನ ಸಹೋದರ-ಸಹೋದರಿಯರನ್ನು ಅಗಲಿದ್ದಾರೆ.

ಮೂಲತಃ ದಾವಣಗೆರೆಯವರಾದ ಪ್ರಕಾಶ್ ಅಲ್ಲಿನ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡ ನಂತರ ಕೆಪಿಟಿಸಿಎಲ್ ನಲ್ಲಿ ಎಕ್ಸಿ ಕ್ಯೂಟಿವ್ ಎಂಜಿನಿಯರಾಗಿ ರಾಜ್ಯದ ವಿವಿಧ ನಗರಗಳಲ್ಲಿ ಕಾರ್ಯನಿರ್ವಹಿಸಿದ್ದರು. ನಿವೃತ್ತಿಯ ನಂತರ ಮೈಸೂರಿನ ರಾಮಕೃಷ್ಣನಗರದ ಎಚ್ ಬ್ಲಾಕ್ ನಲ್ಲಿ ನೆಲೆಸಿದ್ದರು.

ದಾವಣಗೆರೆ ಹೊಸ ಸಂವೇದನೆಯ ಸಾಹಿತ್ಯ, ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಂದ ಕೀರ್ತಿಗೆ ಹೆಸರಾಗಿರುವ ಪ್ರತಿಭಾ ಸಭಾ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಸ್ಥಾಪಿಸಿದವರಲ್ಲಿ ಎನ್.ಪ್ರಕಾಶ್ ಮುಖ್ಯರಾದವರು.

1970 ಮತ್ತು 1980ರ ದಶಕಗಳಲ್ಲಿ ಪ್ರತಿಮಾ ಸಭಾ ಬಹಳ ಕ್ರಿಯಾಶೀಲವಾಗಿತ್ತು. ಸ್ವತಃ ಕವಿ ಮನಸ್ಸಿನ ಪ್ರಕಾಶ್ ಕವಿತೆಗಳನ್ನ ಮತ್ತು ಕತೆಗಳನ್ನು ಬರೆದು ಪ್ರಕಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com