ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ, ಹೆಚ್ಚಿದ ಆತಂಕ!

ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆಗಾಗಿ ಸಮಿತಿಯೊಂದನ್ನು ರಚಿಸುವುದಾಗಿ ರಾಜ್ಯ ಸರ್ಕಾರ ಹೇಳಿದ ಬೆನ್ನಲ್ಲೇ ನಾಗರಿಕ ಗುಂಪುಗಳು, ಮಾಜಿ ಕಾರ್ಪೋರೇಟರ್ ಗಳು  ಆತಂಕವನ್ನು ವ್ಯಕ್ತಪಡಿಸಿದ್ದಾರೆ.

Published: 17th October 2020 02:17 PM  |   Last Updated: 17th October 2020 02:41 PM   |  A+A-


BBMP1

ಬಿಬಿಎಂಪಿ

Posted By : Nagaraja AB
Source : The New Indian Express

ಬೆಂಗಳೂರು: ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆಗಾಗಿ ಸಮಿತಿಯೊಂದನ್ನು ರಚಿಸುವುದಾಗಿ ರಾಜ್ಯ ಸರ್ಕಾರ ಹೇಳಿದ ಬೆನ್ನಲ್ಲೇ ನಾಗರಿಕ ಗುಂಪುಗಳು, ಮಾಜಿ ಕಾರ್ಪೋರೇಟರ್ ಗಳು  ಆತಂಕವನ್ನು ವ್ಯಕ್ತಪಡಿಸಿದ್ದಾರೆ.

59 ವಾರ್ಡ್ ಗಳು 1 ಚದರ ಕಿಲೋ ಮೀಟರ್ ಗಿಂತಲೂ ಕಡಿಮೆಯಲ್ಲಿವೆ. ಅವರು ಪಟ್ಟಿಯನ್ನು ಬಿಬಿಎಂಪಿ ಪ್ರಧಾನ ಕಚೇರಿ ಮತ್ತು ಪುನರ್ ರಚನಾ ಸಮಿತಿಗೆ ಸಲ್ಲಿಸಲಿದ್ದಾರೆ ಎಂದು ಮಾಜಿ ಕಾರ್ಪೋರೇಟರ್ ಗಳು ಹೇಳುತ್ತಾರೆ.

ಈ ಪಟ್ಟಿಯಲ್ಲಿ 0.4 ಚದರ ಕಿ.ಮೀ ವಿಸ್ತಾರವಾದ ಶಿವಾಜಿನಗರ, 0.3 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಪಾದರಾಯನಪುರ, ಟಿ ದಾಸರಹಳ್ಳಿ, ಯಶವಂತಪುರ, ಮತಿಕೆರೆ ಇತ್ಯಾದಿ ವಾರ್ಡ್‌ಗಳಿವೆ.

ಕ್ಷೇತ್ರದಲ್ಲಿ ಸರಾಸರಿ 14 ಚದರ ಕಿ.ಮೀ ಗಾತ್ರದ ಎಂಟು ವಾರ್ಡ್‌ಗಳಿವೆ ಎಂದು ಮಹಾದೇವಪುರ ವಾರ್ಡ್ ಸಮಿತಿಗಳ ಸದಸ್ಯರು ಹೇಳುತ್ತಾರೆ. ಇಲ್ಲಿ 8 ರಿಂದ 12 ವಾರ್ಡ್ ಗಳಿಗೆ ಹೆಚ್ಚಿಸಲು ಸರ್ಕಾರ ಬಯಸಿದೆ. ಆದರೆ ಇದು 2021ರ ಜನ ಗಣತಿಯಂತೆ ಇನ್ನೂ 59 ವಾರ್ಡ್‌ಗಳಿಗೆ ಸಮನಾಗಿರುವುದಿಲ್ಲ. ಈ ಕ್ಷೇತ್ರ ವಿಸ್ತೀರ್ಣದಲ್ಲಿ ಚಿಕ್ಕದಾಗಿರುವುದಾಗಿ ಮಹಾದೇವಪುರದ ನಿವಾಸಿ ಮುರಳಿ ಹೇಳಿದರು.

ಸರ್ಕಾರವು ವೈಜ್ಞಾನಿಕ ವಿಧಾನವನ್ನು ಅನುಸರಿಸುತ್ತಿಲ್ಲ, ವಾರ್ಡ್ ಅನ್ನು ವಿಭಜಿಸುವ ವಿಧಾನ ಇನ್ನೂ ದೃಢಪಟ್ಟಿಲ್ಲ. ಸರ್ಕಾರದಿಂದ ಈ ಬಗ್ಗೆ ಯಾವುದೇ  ಸ್ಪಷ್ಟತೆ ಸಿಕ್ಕಿಲ್ಲ ಎಂದು ಮಾಜಿ ಕಾರ್ಪೊರೇಟರ್ ಒಬ್ಬರು ತಿಳಿಸಿದರು.
 
ಇದು ಸ್ಪಷ್ಟವಾಗಿ ಬಿಬಿಎಂಪಿ ಚುನಾವಣೆಯನ್ನು ವಿಳಂಬಗೊಳಿಸುವ ತಂತ್ರವಾಗಿದೆ ಎಂದು ಆರೋಪಿಸಿದ ಅವರು, ವಾರ್ಡ್ ಪುನರ್ ವಿಂಗಡಣೆ ಪ್ರಕ್ರಿಯೆ ಮುಗಿಯುವ ಹೊತ್ತಿಗೆ   2011 ರ ಜನಗಣತಿಯ ಅಂಕಿಅಂಶಗಳು ಇನ್ನು ಮುಂದೆ ಅನ್ವಯಿಸುವುದಿಲ್ಲ ಎಂದರು.

ವಾರ್ಡ್ ಪುನರ್ ವಿಂಗಡಣೆ ಸಂಬಂಧ ಇಲ್ಲಿಯವರೆಗೂ ಯಾವುದೇ ಸಭೆ ನಡೆದಿಲ್ಲ, ಕೆಲಸವೂ ಕೂಡಾ ಆರಂಭವಾಗಿಲ್ಲ ಎಂದು ಬಿಬಿಎಂಪಿ ಪುನರ್ ರಚನೆ ಜಂಟಿ ಶಾಸಕಾಂಗ ಸಮಿತಿ ಮುಖ್ಯಸ್ಥ ಶಾಸಕ ಎಸ್ ರಘು ಹೇಳಿದ್ದಾರೆ.

Stay up to date on all the latest ರಾಜ್ಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp