ನೀಟ್ ಪರೀಕ್ಷೆ: 720 ಕ್ಕೆ 710 ಅಂಕ ಗಳಿಸಿ ಬೀದರ್ ನ ಕಾರ್ತಿಕ್ ರೆಡ್ಡಿ ರಾಜ್ಯಕ್ಕೆ ಟಾಪರ್

ವೈದ್ಯಕೀಯ ಕೋರ್ಸ್‌ ಪ್ರವೇಶಾತಿಗೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 9ನೇ ರ‍್ಯಾಂಕ್ ಪಡೆದಿರುವ ಬೀದರ್ ಮೂಲದ ಕಾರ್ತಿಕ್ ರೆಡ್ಡಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವೈದ್ಯಕೀಯ ಕೋರ್ಸ್‌ ಪ್ರವೇಶಾತಿಗೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 9ನೇ ರ‍್ಯಾಂಕ್ ಪಡೆದಿರುವ ಬೀದರ್ ಮೂಲದ ಕಾರ್ತಿಕ್ ರೆಡ್ಡಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ಬೀದರ್ ನ ಕಾರ್ತಿಕ್ ರೆಡ್ಡಿ 720 ಕ್ಕೆ 710 ಅಂಕ ಪಡೆದು ಶೇ.99.99 ಮಾರ್ಕ್ಸ್ ಪಡೆದಿದ್ದಾರೆ, ಆಲ್ ಇಂಡಿಯಾ ರ್ಯಾಂಕಿಂಗ್ ನಲ್ಲಿ ಪುರುಷರಲ್ಲಿ 5ನೇ ಸ್ಥಾನ ಪಡೆದಿದ್ದಾರೆ.

ಕಾರ್ತಿಕ್ ಶಾಹೀನ್ ಐ ಎಂಡ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.  ಪಶು ವೈದ್ಯ ವಿಜ್ಞಾನದಲ್ಲಿ 9ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.  ಮೊದಲ 50 ಅಗ್ರ ಶ್ರೇಯಾಂಕದಲ್ಲಿ ರಾಜ್ಯದಿಂದ ಮೊದಲ ರ್ಯಾಂಕ್ ಪಡೆದ ಏಕೈಕ ವಿದ್ಯಾರ್ಥಿಯಾಗಿದ್ದಾರೆ.

11ನೇ ತರಗತಿಯಲ್ಲಿದ್ದಾಗಲೇ ನಾನು ನೀಟ್ ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ, ಎಂದು ಹೇಳಿರುವ  ಕಾರ್ತಿಕ್ ರೆಡ್ಡಿ ದೆಹಲಿ ಏಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ನಡೆಸಲು ಬಯಸಿದ್ದಾರೆ.

ಕ್ರಿಕೆಟ್ ಆಡಲು  ಕ್ರಿಕೆಟ್ ತುಂಬಾ ಇಷ್ಟ ಪಡುವ ಕಾರ್ತಿಕ್ ಲಾಕ್ ಡೌನ್ ಸಮಯದಲ್ಲಿ ಪರೀಕ್ಷೆಗಾಗಿ ಸಿದ್ಧತೆ ನಡೆಸಿದರಂತೆ, ಲಾಕ್ ಡೌನ್ ನನಗೆ ಸಹಾಯ ಮಾಡಿತು, ಹಲವು ವಿದ್ಯಾರ್ಥಿಗಳು ಲಾಕ್ ಡೌನ್ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದಿಲ್ಲ, ಪ್ರತಿದಿನ ಸುಮಾರು 100 ಟೆಸ್ಟ್ ಪೇಪರ್ ಗಳನ್ನು ಅಭ್ಯಾಸ ಮಾಡುತ್ತಿದ್ದೆ, ಇದು ನನಗೆ ಸಹಾಯ ಮಾಡಿತು.

ಶೇ. 99.99 ರಷ್ಟು ಅಂಕ ಪಡೆದು 55 ನೇ ರ್ಯಾಂಕ್ ಪಡೆದಿರುವ ನಿಸರ್ಗ 720 ಕ್ಕೆ 703 ಅಂಕ ಪಡೆದಿದ್ದಾರೆ, ಭಾರತದ ಹೆಣ್ಣು ಮಕ್ಕಳ 20 ಟಾಪರ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ.  ಇನ್ನೂ ವಿಕಲಾಂಗ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಅವಣ್ಣ ಎಸ್ ಜಲವಾಡಿ 24,804 ರ್ಯಾಂಕ್ ಪಡೆದ ಏಕೈಕ ಕನ್ನಡಿಗ ವಿದ್ಯಾರ್ಥಿಯಾಗಿದ್ದಾರೆ. 720 ಕ್ಕೆ 590 ಅಂಕ ಪಡೆದು ಶೇ.98. 16 ಮಾರ್ಕ್ಸ್ ಪಡೆದಿದ್ದಾರೆ.

ಬೆಂಗಳೂರಿನ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ ವಿವಿ ಅನುರಾಗ್ ವೀರಮಾಚೇನೇನಿ 147 ನೇ ರ್ಯಾಂಕ್, ಆಶೀಶ್ 399, ಚಿರಾಗ್ ಎಸ್ ರಾವ್ 450, ಮೊಹಮದ್ 491, ತಿರುಮಾವಾಸಂ 677 ಮತ್ತು ವಿಗ್ನೇಶ್ 763 ರ್ಯಾಂಕ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com