ಕೋವಿಡ್-19: ಕೊರೋನಾ ಪರೀಕ್ಷೆ ದರವನ್ನು ಮತ್ತಷ್ಟು ಇಳಿಸಿದ ರಾಜ್ಯ ಸರ್ಕಾರ

ಕೊರೋನಾ ಸೋಂಕು ಪತ್ತೆಗೆ ನಡೆಸುವ ಆರ್'ಟಿ-ಪಿಸಿಆರ್ ಪರೀಕ್ಷೆಯ ದರವನ್ನು ಮತ್ತಷ್ಟು ಕಡಿಮೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಪ್ರಯೋಗಾಲಯ ಪರೀಕ್ಷಾ ಶುಲ್ಕವನ್ನು ರೂ.400ಗಳಷ್ಟು ಕಡಿತಗೊಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸೋಂಕು ಪತ್ತೆಗೆ ನಡೆಸುವ ಆರ್'ಟಿ-ಪಿಸಿಆರ್ ಪರೀಕ್ಷೆಯ ದರವನ್ನು ಮತ್ತಷ್ಟು ಕಡಿಮೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಪ್ರಯೋಗಾಲಯ ಪರೀಕ್ಷಾ ಶುಲ್ಕವನ್ನು ರೂ.400ಗಳಷ್ಟು ಕಡಿತಗೊಳಿಸಿದೆ. 

ಸರ್ಕಾರದಿಂದ ಖಾಸಗಿ ಲ್ಯಾಬ್'ಗೆ ಶಿಫಾರಸು ಮಾಡುವ ವ್ಯಕ್ತಿಗಳ ಪರೀಕ್ಷೆಗೆ ರೂ.1,200ಗಳಿದ್ದ ಶುಲ್ಕವನ್ನು ರೂ,800ಕ್ಕೆ ಹಾಗೂ ನೇರವಾಗಿ ಖಾಸಗಿ ಪ್ರಯೋಗಾಲಯಗಳಿಗೆ ತೆರಳಿ ಮಾಡಿಸಿಕೊಳ್ಳುವ ಆರ್'ಟಿ-ಪಿಸಿಆರ್ ಪರೀಕ್ಷೆಗೆ ರೂ.1,600ಗಳಷ್ಟಿದ್ದ ಶುಲ್ಕವನ್ನು ರೂ.1,200ಗೆ ಇಳಿಸಿದೆ. 

ಉಳಿದಂತೆ ಖಾಸಗಿ ಲ್ಯಾಬ್'ಗಳು ಮನೆಯಿಂದ ಸಂಗ್ರಹಿಸುವ ಆರ್'ಟಿ-ಪಿಸಿಆರ್ ಮಾದರಿಗಳಿಗೆ ರೂ.2 ಸಾವಿರಗಳಿಂದ ರೂ.1,600ಗೆ ಇಳಿಕೆ ಮಾಡಲಾಗಿದೆ. ಟ್ರು-ನಾಟ್, ಸಿ.ಬಿ-ನಾಟ್ ಪರೀಕ್ಷೆಗಳಿಗೂ ಕ್ರಮವಾಗಿ ಹಾಲಿ ದರಗಳಿಗಿಂತ ರೂ.400 ಕಡಿಮೆ ಮಾಡಲಾಗಿದೆ. 

ಸರ್ಕಾರದಿಂದ ಶಿಫಾರಸು ಮಾಡುವ ವ್ಯಕ್ತಿಗಳ ರ್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆ ದರವನ್ನು ರೂ.500ಗೆ ಹಾಗೂ ಖಾಸಗಿ ಲ್ಯಾಬ್ ಗಳಲ್ಲಿ ಖಾಸಗಿಯಾಗಿ ಮಾಡಿಸುವ ಆ್ಯಂಡಿಬಾಡಿ ಪರೀಕ್ಷೆಗೆ ರೂ.700ಗಳನ್ನು ನಿಗದಿ ಮಾಡಲಾಗಿದೆ. ಮಾದರಿ ಸಂಗ್ರಹ, ಪ್ರಯೋಗಾಲಯಕ್ಕೆ ಸಾಗಿಸಲು ರೂ.400ಗಿಂತ ಹೆಚ್ಚು ಸ್ವೀಕರಿಸದಂತೆ ಸೂಚಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com