ನಮ್ಮ ಮೆಟ್ರೊ 2ನೇ ಹಂತದಲ್ಲಿ ಎಲ್ಲಾ ನಿಲ್ದಾಣಗಳಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ

ಎರಡನೇ ಹಂತದ ಮೆಟ್ರೊ ಕಾಮಗಾರಿಯಲ್ಲಿ 61 ಮೆಟ್ರೊ ನಿಲ್ದಾಣಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಪ್ರಯಾಣಿಕರಿಗೆ ಒದಗಿಸಿಕೊಡಲು ನಮ್ಮ ಮೆಟ್ರೊ ಸಜ್ಜಾಗಿದೆ.
ವಜ್ರಹಳ್ಳಿ ಮೆಟ್ರೊ ನಿಲ್ದಾಣ
ವಜ್ರಹಳ್ಳಿ ಮೆಟ್ರೊ ನಿಲ್ದಾಣ

ಬೆಂಗಳೂರು: ಎರಡನೇ ಹಂತದ ಮೆಟ್ರೊ ಕಾಮಗಾರಿಯಲ್ಲಿ 61 ಮೆಟ್ರೊ ನಿಲ್ದಾಣಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಪ್ರಯಾಣಿಕರಿಗೆ ಒದಗಿಸಿಕೊಡಲು ನಮ್ಮ ಮೆಟ್ರೊ ಸಜ್ಜಾಗಿದೆ. ಎಲ್ಲಾ ಮೆಟ್ರೊ ನಿಲ್ದಾಣಗಳ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಸ್ಥಾಪಿಸಲು ಮುಂದಾಗಿದ್ದು, ಇದರಿಂದ ಮೆಟ್ರೊ ನಿಲ್ದಾಣಕ್ಕೆ ಪ್ರವೇಶವಾದ ತಕ್ಷಣ ಪ್ರಯಾಣಿಕರಿಗೆ ಸೌಲಭ್ಯವಾಗಲಿದೆ.

ರಸ್ತೆಗಳ ಮಧ್ಯೆ ದಾಟಲು ಎಲೆವೇಟೆಡ್ ಮೆಟ್ರೊ ನಿಲ್ದಾಣಗಳು, ಸರ್ವಿಸ್ ಮಾರ್ಗಗಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಿಂದ ನಾಗರಿಕರಿಗೆ ಅನುಕೂಲವಾಗಲಿದೆ. ಇಂತಹ ಸೌಕರ್ಯ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರಗಳಲ್ಲಿ ಸಿದ್ದವಾಗಲಿದ್ದು ಮೆಟ್ರೊ ರೈಲು ಸುರಕ್ಷತಾ ಆಯುಕ್ತರಿಂದ ಹಸಿರುನಿಶಾನೆಗಾಗಿ ಕಾಯುತ್ತಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಥ್, ಮೊದಲ ಹಂತದ ಮೆಟ್ರೊದಲ್ಲಿ ಸಿಬ್ಬಂದಿಗೆಂದು ನಿರ್ಮಿಸಲಾಗಿದ್ದ ಶೌಚಾಲಯಗಳನ್ನು ಪ್ರಯಾಣಿಕರಿಗೆ ನೀಡಲಾಗಿದೆ. ಎರಡನೇ ಹಂತದ ಕಾಮಗಾರಿಯಲ್ಲಿ ಪ್ರಯಾಣಿಕರಿಗೆ ನಿರ್ಮಿಸಲಾಗುತ್ತಿದ್ದು ಅದನ್ನು ಸಿಬ್ಬಂದಿಗಳು ಕೂಡ ಬಳಸಬಹುದು. ಇದರಿಂದಾಗಿ ಶೌಚಾಲಯಗಳನ್ನು ನಗದು ಪಾವತಿಸಿ ಪ್ರಯಾಣಿಕರು ಬಳಸಬೇಕಾಗಿದ್ದು ಅವರಿಗೆ ಸುಲಭವಾಗಿ ಸಿಗುವಂತೆ ಮಾಡಲಾಗಿದೆ ಎಂದರು.

ಪ್ರತಿ ಮೆಟ್ರೊ ನಿಲ್ದಾಣಗಳಲ್ಲಿ ಪುರುಷರಿಗೆ, ಮಹಿಳೆಯರಿಗೆ ಮತ್ತು ವಿಶೇಷಚೇತನರಿಗೆ ಪ್ರತ್ಯೇಕ ಶೌಚಾಲಯಗಳಿರುತ್ತದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ ಎಲ್ ಯಶವಂತ್ ಚವನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com