ಡಿಜಿಟಲ್ ಪ್ರಕ್ರಿಯೆ ಆರಂಭಿಸಿದ ಶಿಕ್ಷಣ ಇಲಾಖೆ: ಇನ್ನು ಮುಂದೆ 5 ದಿನಗಳಲ್ಲೇ ಸಿಗಲಿದೆ ಎಸ್ಎಸ್ಎಲ್'ಸಿ ನಕಲಿ ಅಂಕಪಟ್ಟಿ!

ಎಸ್ಎಸ್ಎಲ್'ಸಿ ನಕಲಿ ಅಂಕಪಟ್ಟಿ ಪಡೆಯಲು ಇನ್ನುಮುಂದೆ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ನೇರವಾಗಿ ತೆರಳಿ ಅರ್ಜಿ ಸಲ್ಲಿಸಿ, ತಿಂಗಳಾನುಗಟ್ಟಲೇ ಕಾಯಬೇಕಿಲ್ಲ. ಐದು ದಿನಗಳಲ್ಲೇ ನಕಲಿ ಅಂಕಪಟ್ಟಿ ನೀಡಲು ಶಿಕ್ಷಣ ಇಲಾಖೆ ಕ್ರಮಗಳನ್ನು ಕೈಗೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಎಸ್ಎಸ್ಎಲ್'ಸಿ ನಕಲಿ ಅಂಕಪಟ್ಟಿ ಪಡೆಯಲು ಇನ್ನುಮುಂದೆ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ನೇರವಾಗಿ ತೆರಳಿ ಅರ್ಜಿ ಸಲ್ಲಿಸಿ, ತಿಂಗಳಾನುಗಟ್ಟಲೇ ಕಾಯಬೇಕಿಲ್ಲ. ಐದು ದಿನಗಳಲ್ಲೇ ನಕಲಿ ಅಂಕಪಟ್ಟಿ ನೀಡಲು ಶಿಕ್ಷಣ ಇಲಾಖೆ ಕ್ರಮಗಳನ್ನು ಕೈಗೊಂಡಿದೆ. 

ಇದಕ್ಕಾಗಿ ಶಿಕ್ಷಣ ಇಲಾಖೆ ಡಿಜಿಟಲ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಆನ್'ಲೈನ್ ಮೂಲಕವೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ದಾಖಲೆಗಳನ್ನು ನೀಡಬಹುದಾಗಿದೆ. ಅರ್ಜಿ ಸಲ್ಲಿಸಿದ ಕೇವಲ 5 ದಿನಗಳಲ್ಲೇ ವಿದ್ಯಾರ್ಥಿಗೆ ನಕಲಿ ಅಂಕಪಟ್ಟಿ ಸಿಗಲಿದೆ. 

ಈ ಮೊದಲು ಜನರು ಸ್ವತಃ ಶಿಕ್ಷಣ ಮಂಡಳಿಗೆ ತೆರಳಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಿತ್ತು. ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಈ ಅರ್ಜಿಗಳು ತಲುಪಲು ತಿಂಗಳಾನುಗಟ್ಟಲೆ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ತತ್ಕಾಲ್ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಆನ್'ಲೈನ್ ಮೂಲಕವೇ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಆನ್'ಲೈನ್ ಮೂಲಕ ಅಥವಾ ಬ್ಯಾಂಕ್ ಇನ್ನಿತರೆ ವ್ಯವಸ್ಥೆಗಳ ಮೂಲಕ ಹಣವನ್ನು ಪಾವತಿ ಮಾಡಬಹುದಾಗಿದೆ. ಬಳಿಕ ವಿದ್ಯಾರ್ಥಿಗಳು ತಾವು ಸಲ್ಲಿಸಿದ ಅರ್ಜಿಯ ಪ್ರತಿಯನ್ನು ತಮ್ಮ ಶಾಲೆಗಳ ಮುಖ್ಯಸ್ಥರಿಗೆ ಸಲ್ಲಿಸಬೇಕಿದೆ. ಇದಾದ ಬಳಿಕ ಐದು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಿಗಲಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಆನ್'ಲೈನ್ ಮೂಲಕವೇ ಶಾಲಾ ಮುಖ್ಯಸ್ಥರು, ಬಿಇಒ ಹಾಗೂ ಡಿಡಿಪಿಐ ಹಂತದಲ್ಲಿ ಪರಿಶೀಲನೆಗಳು ನಡೆಯಲಿವೆ. ಅರ್ಜಿ ಸಲ್ಲಿಸಿದ ಐದು ದಿನಗಳಲ್ಲಿ ಅಂಕಪಟ್ಟಿಯನ್ನು ಶಾಲೆಯ ಮುಖ್ಯಸ್ಥರ ಕಚೇರಿಗೆ ತಲುಪಲಿದೆ. ಒಂದು ವೇಳೆ ತುರ್ತಾಗಿ ಬೇಕಿರದವರಿಗೆ ಅಂಕಪಟ್ಟಿಗಳು 30 ದಿನಗಳಲ್ಲಿ ಸಿಗಲಿದೆ. ಒಬ್ಬ ವಿದ್ಯಾರ್ಥಿ ನಾಲ್ಕು ಬಾಕಿ ನಕಲಿ ಅಂಕಪಟ್ಟಿಯನ್ನು ಪಡೆಬಹುದಾಗಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com