ಕೊರೋನಾ ಆತಂಕ ನಡುವಲ್ಲೂ ಸಾಮಾನ್ಯದತ್ತ ಜನಜೀವನ: ಆನ್‌ಲೈನ್‌ ಬಸ್ ಟಿಕೆಟ್ ಬುಕಿಂಗ್ ಸಂಖ್ಯೆಯಲ್ಲಿ ಗಣನೀಯ ಏರಿಕೆ!

ಕೊರೋನಾ ವೈರಸ್ ಆತಂಕದ ನಡುವಲ್ಲೂ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕೊರೋನಾ ಸೋಂಕಿಗೆ ಹೆದರಿ ಇಷ್ಟು ದಿನ ಬಸ್ ಗಳಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿದ್ದ ಜನರು ನಿಧಾನಗತಿಯಲ್ಲಿ ಮತ್ತೆ ಬಸ್ ಪ್ರಯಾಣದತ್ತ ಮುಖ ಮಾಡುತ್ತಿದ್ದು, ಆನ್'ಲೈನ್ ಟಿಕೆಟ್ ಬುಕಿಂಗ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಆತಂಕದ ನಡುವಲ್ಲೂ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕೊರೋನಾ ಸೋಂಕಿಗೆ ಹೆದರಿ ಇಷ್ಟು ದಿನ ಬಸ್ ಗಳಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿದ್ದ ಜನರು ನಿಧಾನಗತಿಯಲ್ಲಿ ಮತ್ತೆ ಬಸ್ ಪ್ರಯಾಣದತ್ತ ಮುಖ ಮಾಡುತ್ತಿದ್ದು, ಆನ್'ಲೈನ್ ಟಿಕೆಟ್ ಬುಕಿಂಗ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. 
    
ಟಿಕೆಟ್ ಬುಕಿಂಗ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂಡು ರೆಡ್ ಬಸ್ ಸಂಸ್ಥೆ ತಿಳಿಸಿದೆ. ಅಕ್ಟೋಬರ್ 2ರವರೆಗೂ ವಾರಾಂತ್ಯದ ದಿನಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ, ಕೋಲ್ಕತಾ, ಮುಂಬೈ ಹಾಗೂ ಅಹ್ಮದಾಬಾದ್'ಗೆ ಹೆಚ್ಚು ಟಿಕೆಟ್ ಗಳು ಬುಕ್ ಆಗುತ್ತಿವೆ. 

ಬೆಂಗಳೂರು-ಹೈದರಾಬಾದ್, ದೆಹಲಿ-ಚಂಡೀಗಢ, ಹೈದರಾಬಾದ್- ವಿಜಯವಾಡ, ಅಸನ್ಸೋಲ್- ಕೋಲ್ಕತಾ ಮತ್ತು ಗೋರಖ್‌ಪುರ- ದೆಹಲಿಗೆ ರೆಡ್‌ಬಸ್ ಬುಕಿಂಗ್‌ನಲ್ಲಿ ಗಮನಾರ್ಹ ಏರಿಕೆ ಕಾಣುತ್ತಿರುವ ಪ್ರಮುಖ ಐದು ಮಾರ್ಗಗಳಾಗಿವೆ. 

ಆನ್‌ಲೈನ್ ಪ್ಲಾಟ್‌ಫಾರ್ಮ್ನಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಟಿಕೆಟ್ ಗಳು ಬುಕ್ ಆಗಿವೆ. ಕೊರೋನಾ ಲಾಕ್ಡೌನ್'ಗೂ ಮುನ್ನ ಶೇ.11ರಷ್ಟಿದ್ದ ಆನ್'ಲೈನ್ ಟಿಕೆಟ್ ಬುಕಿಂಗ್ ಪ್ರಮಾಣ ಇದೀಗ ಶೇ.21ಕ್ಕೆ ಏರಿಕೆಯಾಗಿದೆ ಎಂದು ರೆಡ್ ಬಸ್ ಸಂಸ್ಥೆ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com