ಆದಿತ್ಯ ಆಳ್ವ ಮನೆಯಲ್ಲಿ ಡ್ರಗ್ಸ್, ಗಾಂಜಾ ಸಿಕ್ಕಿವೆ: ಹೈಕೋರ್ಟ್ ಗೆ ಹೇಳಿಕೆ ಸಲ್ಲಿಸಿದ ಸಿಸಿಬಿ

ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ವಿರುದ್ಧ ಡ್ರಗ್ ಕೇಸಿನಲ್ಲಿ ಎಫ್ ಐಆರ್ ದಾಖಲಿಸಲು ಸಾಕಷ್ಟು ಪುರಾವೆಗಳು ಸಿಕ್ಕಿವೆ ಎಂದು ಕೇಂದ್ರ ಅಪರಾಧ ದಳ(ಸಿಸಿಬಿ) ಹೈಕೋರ್ಟ್ ಗೆ ತಿಳಿಸಿದೆ.
ಸಿಸಿಬಿ
ಸಿಸಿಬಿ

ಬೆಂಗಳೂರು: ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ವಿರುದ್ಧ ಡ್ರಗ್ ಕೇಸಿನಲ್ಲಿ ಎಫ್ ಐಆರ್ ದಾಖಲಿಸಲು ಸಾಕಷ್ಟು ಪುರಾವೆಗಳು ಸಿಕ್ಕಿವೆ ಎಂದು ಕೇಂದ್ರ ಅಪರಾಧ ದಳ(ಸಿಸಿಬಿ) ಹೈಕೋರ್ಟ್ ಗೆ ತಿಳಿಸಿದೆ.

ತನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದಕ್ಕೆ ಆದಿತ್ಯ ಆಳ್ವ ಆಕ್ಷೇಪ ಸಲ್ಲಿಸಿದ್ದಕ್ಕೆ ಸಿಸಿಬಿ ಹೈಕೋರ್ಟ್ ಗೆ ಈ ಪ್ರತಿಕ್ರಿಯೆ ನೀಡಿದೆ.
ಬೆಂಗಳೂರಿನ ಹೆಬ್ಬಾಳದಲ್ಲಿರುವ ಆದಿತ್ಯ ಆಳ್ವ ರೆಸಾರ್ಟ್ ಮತ್ತು ನಿವಾಸದಿಂದ ಗಾಂಜಾ ಮತ್ತು ನಾರ್ಕೊಟಿಕ್ ಟ್ಯಾಬ್ಲೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು ರೆಸಾರ್ಟ್ ನಲ್ಲಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಆದಿತ್ಯ ಆಳ್ವ ಡ್ರಗ್ ಕೇಸಿನಲ್ಲಿ ಸಿಕ್ಕಿಹಾಕಿಕೊಂಡಿರುವ ಓರ್ವ ಆರೋಪಿ ಕೂಡ ಆದಿತ್ಯ ಆಳ್ವ ಹೆಸರು ಹೇಳಿದ್ದಾನೆ ಎಂದು ಸಿಸಿಬಿ ಹೈಕೋರ್ಟ್ ಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದೆ.

ನಿನ್ನೆ ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿದರು.
ಆದಿತ್ಯ ಆಳ್ವ ತನ್ನ ಆಕ್ಷೇಪ ಅರ್ಜಿಯಲ್ಲಿ, ಕಳೆದ ಸೆಪ್ಟೆಂಬರ್ 4ರಂದು ಕಾಟನ್ ಪೇಟೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಕೇಸನ್ನು ಪ್ರಶ್ನಿಸಿದ್ದರು. ಪೊಲೀಸರು ದಾಖಲಿಸಿರುವ ಕೇಸಿನಲ್ಲಿ ತಾನು ಯಾವುದೇ ಅರಿವಿನ ಅಪರಾಧ ಮಾಡಿರುವ ಬಗ್ಗೆ ದಾಖಲಿಸಿಲ್ಲ, ಹೀಗಾಗಿ ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸಬೇಕೆಂದು ಕೋರಿದ್ದನು.

ವಿದೇಶದಲ್ಲಿ ಕಾನೂನು ಮತ್ತು ರಾಜಕೀಯ ಶಾಸ್ತ್ರದಲ್ಲಿ ಪದವಿ ಗಳಿಸಿರುವ ತಾನು ರಿಯಾಲ್ಟಿ ಉದ್ಯಮ ನಡೆಸುತ್ತಿದ್ದು ಗೌರವಯುತ ಕುಟುಂಬದಿಂದ ಬಂದವನು, ತಮ್ಮ ತಂದೆ ರಾಜ್ಯಕ್ಕೆ ಸಚಿವನಾಗಿ ಕೊಡುಗೆಗಳನ್ನು ನೀಡಿದ್ದರು, ತಾನು ಇಂಥ ತಪ್ಪು ಕೆಲಸ ಮಾಡುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com