ಕೊರೋನಾ ಎಫೆಕ್ಟ್: ಭರ್ತಿಯಾಗದ 20,000 ಹುದ್ದೆ, ಸಿಬ್ಬಂದಿಗಳ ಕೊರತೆಯಿಂದ ರಾಜ್ಯ ಪೊಲೀಸ್ ಇಲಾಖೆ ದುರ್ಬಲ?

ಕೊರೋನಾ ವೈರಸ್ ಪರಿಣಾಮ ರಾಜ್ಯದ ಎಲ್ಲಾ ಇಲಾಖೆಗಳ ನೇಮಕಾತಿಗಳನ್ನು ತಡೆಹಿಡಿಯಲಾಗಿದ್ದು, ಪರಿಣಾಮ ಹುದ್ದೆಗಳು ಭರ್ತಿಯಾಗದೆ ಸಿಬ್ಬಂದಿಗಳ ಕೊರತೆಯಿಂದಾಗಿ ರಾಜ್ಯ ಪೊಲೀಸ್ ಇಲಾಕೆ ದುರ್ಬಲಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಪರಿಣಾಮ ರಾಜ್ಯದ ಎಲ್ಲಾ ಇಲಾಖೆಗಳ ನೇಮಕಾತಿಗಳನ್ನು ತಡೆಹಿಡಿಯಲಾಗಿದ್ದು, ಪರಿಣಾಮ ಹುದ್ದೆಗಳು ಭರ್ತಿಯಾಗದೆ ಸಿಬ್ಬಂದಿಗಳ ಕೊರತೆಯಿಂದಾಗಿ ರಾಜ್ಯ ಪೊಲೀಸ್ ಇಲಾಕೆ ದುರ್ಬಲಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. 

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ವಿವಿಧ ಶ್ರೇಣಿಯ 20,203 ಹುದ್ದೆಗಳು ಖಾಲಿ ಇವೆ. 2,094 ಸಬ್‌ ಇನ್‌ಸ್ಪೆಕ್ಟರ್‌, 1,024 ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌, 1,525 ಹೆಡ್‌ ಕಾನ್‌ಸ್ಟೆಬಲ್‌ ಮತ್ತು 15,560 ಕಾನ್‌ಸ್ಟೆಬಲ್‌ಗಳ ಹುದ್ದೆಗಳು ಖಾಲಿ ಇವೆ ಎಂದು ತಿಳಿದುಬಂದಿದೆ. 

ನೇಮಕಾತಿಯನ್ನು ಸಾಮಾನ್ಯವಾಗಿ ಕಾನ್‌ಸ್ಟೆಬಲ್, ಸಬ್ ಇನ್ಸ್‌ಪೆಕ್ಟರ್, ಡೆಪ್ಯೂಟಿ ಸೂಪರಿಂಟೆಂಡೆಂಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೆಂದು ನಾಲ್ಕು ಹಂತಗಳಲ್ಲಿ ನಡೆಸಲಾಗುತ್ತದೆ. ಆದರೆ, ಕೊರೋನಾ ಪರಿಣಾ ಈ ಬಾರಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಪ್ರಸ್ತುತ ಇರುವ ಸಿಬ್ಬಂದಿಗಳಿಗೆ ಹೆಚ್ಚಿನ ಕರ್ತವ್ಯವನ್ನು ನೀಡಲಾಗುತ್ತಿರುವುದರಿಂದ ಹೊರೆ ಹೆಚ್ಚಾಗುವಂತೆ ಮಾಡಿದೆ. ತಜ್ಞರು ತಿಳಿಸಿದ್ದಾರೆ. 

ಸುಮಾರು ಏಳು ವರ್ಷಗಳ ಹಿಂದೆ 22 ಸಾವಿರ ಹುದ್ದೆಗಳು ಖಾಲಿಯಿತ್ತು. ಈ ವೇಳೆ ಸರ್ಕಾರ 8,000 ಪೊಲೀಸ್ ಕಾನ್‌ಸ್ಟೆಬಲ್‌ಗಳು, ಸುಮಾರು 500 ಸಬ್‌ಇನ್ಸ್‌ಪೆಕ್ಟರ್‌ಗಳು ಮತ್ತು 7,000 ಗೃಹರಕ್ಷಕರನ್ನು ನೇಮಕ ಮಾಡಲು ಸರ್ಕಾರ ಕ್ರಮ ಕೈಗೊಂಡಿತ್ತು. ಆದಾಗ್ಯೂ, ವರ್ಷಗಳಲ್ಲಿ ಕೆಲ ಸಿಬ್ಬಂದಿಗಳು ನಿವೃತ್ತಿ ಪಡೆದುಕೊಂಡಿದ್ದರಿಂದ ಸೂಕ್ತ ಸಮಯಕ್ಕೆ ನೇಮಕಾತಿಗಳಾಗದ ಕಾರಣ ಸಮಸ್ಯೆಗಳು ಎದುರಾಗಿದೆ ಎಂದಿದ್ದಾರೆ. 

ಎಲ್ಲಾ ಹುದ್ದೆಗಳಿಗೂ ಒಮ್ಮೆಲೆ ಭರ್ತಿ ಮಾಡಲು ಸಾಧ್ಯವಿಲ್ಲ. ಆರಂಭದಲ್ಲಿ 16,000 ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆಯ್ಕೆ ಪ್ರಕ್ರಿಯೆ ವ್ಯಾಪಕವಾಗಿದ್ದು, ತರಬೇತಿ ಕೂಡ ವಿಸ್ತಾರವಾಗಿದೆದ . ಹೀಗಾಗಿ ಬ್ಯಾಚ್ ಗಳ ಮೂಲಕ ಆಯ್ಕೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ಈಗಾಗಲೇ ಎರಡು ಬ್ಯಾಚ್‌ಗಳೊಂದಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಖಾಲಿ ಹುದ್ದೆಗಳನ್ನು ಕ್ರಮೇಣ ಭರ್ತಿ ಮಾಡಲಾಗುತ್ತದೆ. ಈ ಬ್ಯಾಚ್‌ಗಳಿಗೆ ತರಬೇತಿ ನೀಡಿದ ಬಳಿಕ ಇಲಾಖೆಗೆ ಸೇರ್ಪಡೆಗೊಳಿಸಲಾಗುತ್ತದೆ. ನೇಮಕಾತಿ ಪ್ರಕ್ರಿಯೆ ಆರಂಭವಾಗಿರುವುದನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಡಳಿತ) ಎಂ ಎ ಸಲೀಮ್ ಅವರು ಖಚಿತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com