ನಾಗರಹೊಳೆ ಮೂಲಕ ಹಾದುಹೋಗುವ ವಾಹನಗಳಿಗೆ 'ಟೈಮ್ ಟಿಕೆಟ್': ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ

ಲಾಕ್ ಡೌನ್ ಸಡಿಲಿಕೆಯಾಗುತ್ತಾ ಬಂದಂತೆ ರಸ್ತೆಗಳಲ್ಲಿ ವಾಹನಗಳ ಓಡಾಟ, ಜನಸಂಚಾರ ಹೆಚ್ಚಾಗಿದೆ. ಕೊರೋನಾ ಪೂರ್ವ ಜನಜೀವನಕ್ಕೆ ಮರಳುತ್ತಿದ್ದಾರೆ.
ನಾಗರಹೊಳೆ ಅಭಯಾರಣ್ಯದಲ್ಲಿ ಜಿಂಕೆ
ನಾಗರಹೊಳೆ ಅಭಯಾರಣ್ಯದಲ್ಲಿ ಜಿಂಕೆ

ಬೆಂಗಳೂರು: ಲಾಕ್ ಡೌನ್ ಸಡಿಲಿಕೆಯಾಗುತ್ತಾ ಬಂದಂತೆ ರಸ್ತೆಗಳಲ್ಲಿ ವಾಹನಗಳ ಓಡಾಟ, ಜನಸಂಚಾರ ಹೆಚ್ಚಾಗಿದೆ. ಕೊರೋನಾ ಪೂರ್ವ ಜನಜೀವನಕ್ಕೆ ಮರಳುತ್ತಿದ್ದಾರೆ.

ನಗರ ಪ್ರದೇಶಗಳ ರಸ್ತೆಗಳು ಮಾತ್ರವಲ್ಲದೆ ಅರಣ್ಯ ಪ್ರದೇಶಗಳ ರಸ್ತೆಗಳಲ್ಲಿ ಕೂಡ ವಾಹನಗಳ ಓಡಾಟ, ದಟ್ಟಣೆ ಹೆಚ್ಚಾಗಿದ್ದು ಅರಣ್ಯ ಪ್ರದೇಶಗಳಲ್ಲಿ ಸಹ ಹಲವು ಅಪಘಾತಗಳಾಗುತ್ತಿವೆ.

ಅರಣ್ಯ ಪ್ರದೇಶಗಳಲ್ಲಿ ಅಭಯಾರಣ್ಯಗಳ ಸುತ್ತಮತ್ತ ಜನರ, ವಾಹನಗಳ ಓಡಾಟವನ್ನು ನಿಯಂತ್ರಿಸಲು, ಕಾಡುಪ್ರಾಣಿಗಳು ಅಜಾಗರೂಕತೆಯಿಂದ ವಾಹನ ಓಡಿಸುವ ಚಾಲಕರಿಗೆ ಸಿಕ್ಕಿ ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲು ಕರ್ನಾಟಕ ಅರಣ್ಯ ಇಲಾಖೆ ನಾಗರಹೊಳೆ ಹುಲಿ ಅಭಯಾರಣ್ಯದ ಮೂಲಕ ಹಾದುಹೋಗುವ ವಾಹನಗಳ ಬಗ್ಗೆ ಕಣ್ಣಿಟ್ಟಿದೆ. ಅರಣ್ಯ ರಸ್ತೆಗಳಲ್ಲಿ ಹಾದುಹೋಗುವ ವಾಹನಗಳ ವೇಗವನ್ನು ತಪಾಸಣೆ ಮಾಡಲು ಸಮಯಾಧಾರಿತ ಸ್ಯಾಂಪ್ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಮೊದಲ ಲಾಕ್ ಡೌನ್ ಹೇರಿಕೆಯಾದ ನಂತರ ನಾಗರಹೊಳೆ ಅಭಯಾರಣ್ಯ ಸಿಬ್ಬಂದಿ ವಾಹನಗಳ ಓಡಾಟವನ್ನು ಪರಿಶೀಲಿಸುತ್ತಿದ್ದಾರೆ. ನಂತರ 11 ಪ್ರಾಣಿಗಳು ಆನೆಚೌಕ ಮತ್ತು 8 ಪ್ರಾಣಿಗಳು ಹುಣಸೂರಿನಲ್ಲಿ ಮೃತಪಟ್ಟಿವೆ. ಹೀಗಾಗಿ ಹುಣಸೂರು-ಗೋಣಿಕೊಪ್ಪ ಹೆದ್ದಾರಿಯಲ್ಲಿ ವಾಹನಗಳ ಓಡಾಟದ ಬಗ್ಗೆ ಸಿಬ್ಬಂದಿಗಳು ತಪಾಸಣೆ ಮಾಡುತ್ತಿದ್ದಾರೆ. ಇಲ್ಲಿ ಅಲ್ಲೂರು ಗೇಟ್, ಪೆರಿಯಪಟ್ನ-ಗೋಣಿಕೊಪ್ಪ ಮೂಲಕ ಬೂದಿತಿಟ್ಟು ಗೇಟ್ ಆಗಿ ವಾಹನಗಳು ಚಲಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com