ಹಿರಿಯ ಕಾರ್ಮಿಕ ಹೋರಾಟಗಾರ, ರೈತ ಮುಖಂಡ ಮಾರುತಿ ಮಾನ್ಪಡೆ ಕೋವಿಡ್ ನಿಂದ ನಿಧನ

ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಕಾರ್ಮಿಕ ಹೋರಟಗಾರ, ರೈತ ಮುಖಂಡ ಮಾರುತಿ ಮಾನ್ಪಡೆ(65) ನಿಧನರಾಗಿದ್ದಾರೆ. 

Published: 20th October 2020 01:08 PM  |   Last Updated: 20th October 2020 01:08 PM   |  A+A-


ಮಾರುತಿ ಮಾನ್ಪಡೆ

Posted By : Raghavendra Adiga
Source : Online Desk

ಕಲಬುರಗಿ: ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಕಾರ್ಮಿಕ ಹೋರಟಗಾರ, ರೈತ ಮುಖಂಡ ಮಾರುತಿ ಮಾನ್ಪಡೆ(65) ನಿಧನರಾಗಿದ್ದಾರೆ. 

ಕೋವಿಡ್ ದೃಢಪಟ್ಟ ನಂತರ ಕಲಬುರಗಿಯ ಜಿಮ್ಸ್ ಹಾಗೂ ಸೊಲ್ಲಾಪುರದ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾರುತಿ ಮಾನ್ಪಡೆ ಮೂರು ದಿನಗಳಿಂದ ವೆಂಟಿಲೇಟರ್ ನಲ್ಲಿದ್ದರು.

ಕರ್ನಾಟಕ ಪ್ರಾಂತ ರೈತಸಂಘದ ಉಪಾಧ್ಯಕ್ಷರಾಗಿದ್ದ, ಸಿಪಿಐ(ಎಂ) ಪಕ್ಷದ ಸದಸ್ಯರೂ ಆಗಿದ್ದರು. ಮಾನ್ಪಡೆ ನಾಲ್ಕು ದಶಕಗಳಿಂಡ ರೈತಪರ ಹೋರಾಟಗಳಲ್ಲಿ ತೊಡಗಿಕೊಂಡಿದ್ದರು.

ಮಾನ್ಪಡೆ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಮಲಾಪುರದ ಲೆಂಗಟಿ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ಹೇಳಿದೆ. 
 

Stay up to date on all the latest ರಾಜ್ಯ news
Poll
farmers-Protest

ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ಸಮಯದಲ್ಲಿನ ಹಿಂಸಾಚಾರವು ರೈತರ ಆಂದೋಲನದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp