ಕೊರೋನಾ ಎಫೆಕ್ಟ್: ಸಂಕಷ್ಟದಲ್ಲಿ ರಾಜ್ಯದ ರಂಗಭೂಮಿ ಕಲಾವಿದರು

ಕೊರೋನಾ ಸಾಂಕ್ರಾಮಿಕ ರೋಗದಿಂದ ರಂಗಭೂಮಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದೆ. ಕೋವಿಡ್-19 ಅನ್'ಲಾಕ್ ಬಳಿಕ ಈಗಾಗಲೇ ಎಲ್ಲಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದು, ನಾಟಕ ಪ್ರದರ್ಶನಕ್ಕೂ ಅನುಮತಿ ನೀಡಬೇಕೆಂದು ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘ ಆಗ್ರಹಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹುಬ್ಬಳ್ಳಿ: ಕೊರೋನಾ ಸಾಂಕ್ರಾಮಿಕ ರೋಗದಿಂದ ರಂಗಭೂಮಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದೆ. ಕೋವಿಡ್-19 ಅನ್'ಲಾಕ್ ಬಳಿಕ ಈಗಾಗಲೇ ಎಲ್ಲಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದು, ನಾಟಕ ಪ್ರದರ್ಶನಕ್ಕೂ ಅನುಮತಿ ನೀಡಬೇಕೆಂದು ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘ ಆಗ್ರಹಿಸಿದೆ. 

ಅನ್'ಲಾಕ್ ಬಳಿಕ ಈಗಾಗಲೇ ರಾಜ್ಯ ಹಲವು ರಂಗಗಳು ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದು, ನಾಟಕ ಪ್ರದರ್ಶನಗಳಿಗೆ ರಾಜ್ಯ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ, ಇದರಿಂದಾಗಿ ರಂಗಭೂಮಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಬಂದ್ ನಿಂದಾಗಿ ಸಾಕಷ್ಟು ಕಲಾವಿದರು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ನಾಟಕ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ ಅವರು ಹೇಳಿದ್ದಾರೆ. 

ಸರ್ಕಾರದ ಯಾವುದೇ ಸಹಾಯವಿಲ್ಲದೆ, ನಾಟಕ ಕಂಪನಿಗಳು ಸಂಕಷ್ಟದಲ್ಲಿವೆ. ನಾಯಕ ಕಂಪನಿಗಳ ನಿರ್ವಹಣೆಗೆ ಪ್ರತೀ ತಿಂಗಳು ರೂ.6 ಲಕ್ಷ ವೆಚ್ಚವಾಗುತ್ತಿದೆ. ನಮ್ಮ ಕಲಾವಿದರಿಗೆ ನಾವು ವೇತನ, ಊಟ ನೀಡಬೇಕು. ವಿದ್ಯುತ್ ಬಿಲ್ ಕಟ್ಟಬೇಕು. ಈ ಎಲ್ಲಾ ಸಂಕಷ್ಟಗಳ ನಡುವೆ ಬದುಕಲೇಬೇಕಿರುವುದರಿಂದ ಸಾಲ ಮಾಡಿ ಲಾಕ್ಡೌನ್ ನಲ್ಲಿ ಜೀವನ ನಡೆಸುತ್ತಿದ್ದೇವೆಂದು ತಿಳಿಸಿದ್ದಾರೆ. 

ಒಂದು ಗ್ರಾಮದಲ್ಲಿ ಗರಿಷ್ಟ ಎಂದರೂ 4-5 ತಿಂಗಳು ಉಳಿಯುತ್ತೇವೆ. ನಾಟಕ ಪ್ರದರ್ಶನ ಪೂರ್ಣಗೊಂಡ ಬಳಿಕ ಮತ್ತೆ ಬೇರೊಂದು ಪ್ರದೇಶಕ್ಕೆ ತೆರಳುತ್ತೇವೆ. ಈ ವೇಳೆ ಕಲಾವಿದರಿಗೆ ಊಟ, ವಸತಿ ವ್ಯವಸ್ಥೆಗಳನ್ನು ಕಲ್ಪಿಸಬೇಕಾಗುತ್ತದೆ. ಕೊರೋನಾ ಸಾಂಕ್ರಾಮಿಕ ರೋಗ ನಮ್ಮನ್ನು ಸಾಕಷ್ಟು ಸಮಸ್ಯೆ ಸಿಲುಕಿಕೊಳ್ಳುವಂತೆ ಮಾಡಿದೆ. ನಮ್ಮ ಜೀವನ ಮತ್ತೆ ಸುಧಾರಿಸಲು ಸರ್ಕಾರ ಸಹಾಯ ಮಾಡಬೇಕೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com