ಬೆಂಗಳೂರು: ಮೊದಲ ಮಹಿಳಾ ಐಎಎಫ್ ಅಧಿಕಾರಿ ವಿಂಗ್ ಕಮಾಂಡರ್ ವಿಜಯಲಕ್ಷ್ಮಿ ರಮಣನ್ ನಿಧನ

ಭಾರತೀಯ ವಾಯುಸೇನೆಯ(ಐಎಎಫ್) ಮೊದಲ ಮಹಿಳಾ ಅಧಿಕಾರಿ ವಿಂಗ್ ಕಮಾಂಡರ್(ನಿವೃತ್ತ) ವಿಜಯಲಕ್ಷ್ಮಿ ರಮಣನ್ ಅವರು ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

Published: 21st October 2020 07:24 PM  |   Last Updated: 21st October 2020 07:24 PM   |  A+A-


Vijayalakshmi

ಅಂದಿನ ಉಪ ರಾಷ್ಟ್ರಪತಿ ಎಸ್ ರಾಧಾಕೃಷ್ಣನ್ ರೊಂದಿಗೆ ವಿಜಯಲಕ್ಷ್ಮಿ

Posted By : Lingaraj Badiger
Source : The New Indian Express

ಬೆಂಗಳೂರು: ಭಾರತೀಯ ವಾಯುಸೇನೆಯ(ಐಎಎಫ್) ಮೊದಲ ಮಹಿಳಾ ಅಧಿಕಾರಿ ವಿಂಗ್ ಕಮಾಂಡರ್(ನಿವೃತ್ತ) ವಿಜಯಲಕ್ಷ್ಮಿ ರಮಣನ್ ಅವರು ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

96 ವರ್ಷದ ವಿಜಯಲಕ್ಷ್ಮಿ ಅವರು, 1943 ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿದ್ದು, 1948 ರಲ್ಲಿ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದರು.

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಡಿಜಿಒ ಮತ್ತು ಎಂಡಿ ಮಾಡಿದ್ದ ವಿಜಯಲಕ್ಷ್ಮಿ ಅವರು ಚೆನ್ನೈನ ಎಗ್ಮೋರ್ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ.

ನಂತರ, ಅವರು 1955 ರಲ್ಲಿ ಶಾರ್ಟ್ ಸರ್ವಿಸ್ ಕಮಿಷನ್‌ನಲ್ಲಿ ಸೇನಾ ವೈದ್ಯಕೀಯ ದಳಕ್ಕೆ ಸೇರಿದರು ಮತ್ತು ಸ್ತ್ರೀರೋಗತಜ್ಞರಾಗಿ ಪ್ರಥಮ ಮಹಿಳಾ ನಿಯೋಜಿತ ಅಧಿಕಾರಿಯಾಗಿ ವಾಯುಪಡೆಗೆ ನೇಮಕಗೊಂಡರು. 

ಕಾನ್ಪುರ್, ಸಿಕಂದರಾಬಾದ್ ಮತ್ತು ಬೆಂಗಳೂರಿನ ವಾಯುಪಡೆಯ ಆಸ್ಪತ್ರೆಗಳಲ್ಲಿ ವಿಜಯಲಕ್ಷ್ಮಿ ಅವರನ್ನು ನೇಮಿಸಲಾಯಿತು. 1962, 1966 ಮತ್ತು 1971 ರ ಯುದ್ಧದ ಸಮಯದಲ್ಲಿ, ಅವರು ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡಿದ್ದರು.

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp