ವಿಧಾನಸೌಧದ ಆಯುಧ ಪೂಜೆ ಮೇಲೂ ಕೊರೋನಾ ಕರಿನೆರಳು!

ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದಲ್ಲಿಯೂ ಪ್ರತೀವರ್ಷ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ಆದರೆ, ಈ ಬಾರಿ ಈ ಹಬ್ಬದ ಆಚರಣೆ ಮೇಲೆ ಕೊರೋನಾದ ಕರಿನೆರಳು ಬಿದ್ದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದಸರಾ ಹಬ್ಬವನ್ನು ನಾಡ ಹಬ್ಬ, ನಮ್ಮ ನೆಲದ ಹಬ್ಬ ಎಂದು ಕರೆಯಲಾಗುತ್ತದೆ. ಪ್ರತೀವ್ರ ಈ ಹಬ್ಬವನ್ನು ರಾಜ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದಲ್ಲಿಯೂ ಪ್ರತೀವರ್ಷ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ಆದರೆ, ಈ ಬಾರಿ ಈ ಹಬ್ಬದ ಆಚರಣೆ ಮೇಲೆ ಕೊರೋನಾದ ಕರಿನೆರಳು ಬಿದ್ದಿದೆ. 

ಕೊರೋನಾ ಭೀತಿಯೊಂದಿಗೆ ಈ ಬಾರಿ ಹಬ್ಬ ಅಕ್ಟೋಬರ್ 25 ರಂದು ಭಾನುವಾರ ಬಂದಿದೆ. ಈಗಾಗಲೇ ಹಬ್ಬದ ಆಚರಣೆಗೆ ಕುರಿತು ಸರ್ಕಾರ ಸಾಕಷ್ಟು ನಿರ್ಬಂಧಗಳನ್ನೂ ವಿಧಿಸಿದ್ದು, ಈ ಹಿಂದಿನ ಸಡಗರಕ್ಕಿಂತಲೂ ಈ ಬಾರಿ ಹಬ್ಬದ ಆಚರಣೆಯಲ್ಲಿ ಸಂಭ್ರಮ ಕೊಂಚ ಕಡಿಮೆಯಾಗಲಿದೆ. ಹಬ್ಬ ಭಾನುವಾರದ ರಜಾದಿನ ಬಂದಿದ್ದರೂ ಆಯಾ ಇಲಾಖೆಯ ಸಿಬ್ಬಂದಿಗಳು ಸರಳವಾಗಿ ಆಚರಿಸುವುದಾಗಿ ತಿಳಿಸಿದ್ದಾರೆ. 

ಈ ಬಾರಿಯ ಹಬ್ಬದ ಆಚರಣೆಯಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಸಚಿವರು ಭಾಗಿಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರೂ ಕೂಡ ಹಬ್ಬದ ಆಚರಣೆಯಿಂದ ದೂರ ಉಳಿದಿದ್ದಾರೆಂದು ಹೇಳಲಾಗುತ್ತಿದೆ. 

ಈ ನಡುವೆ ಆಯಾ ಇಲಾಖೆಯ ಸಿಬ್ಬಂದಿಗಳು ಪೂಜೆಗಾಗಿ ಅರ್ಚಕರನ್ನು ಕರೆದಿದ್ದು, ಅರ್ಚಕರೇ ವಿಧಾಸೌಧದಲ್ಲಿರುವ ಎಲ್ಲಾ ವಸ್ತು, ಆಯುಧಗಳಿಗೂ ಪೂಜೆ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ. 

ಸಾಮಾನ್ಯವಾಗಿ ದಸರಾ ಹಬ್ಬ ಬರುತ್ತಿದ್ದಂತೆ ಸಚಿವರು ತಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಉಡುಗೊರೆ, ಸ್ವೀಕ್ ಬಾಕ್ಸ್ ಹಾಗೂ ಬಟ್ಟೆಗಳನ್ನು ನೀಡುತ್ತಿದ್ದರು. ಆದರೆ, ಈ ಬಾರಿ ಆ ಸಡಗರವೆಲ್ಲವೂ ಮರೆಯಾಗಲಿದೆ. ಅರ್ಚಕರನ್ನು ಸಚಿವರು ಕರೆಸುತ್ತಿಲ್ಲ. ಸಿಬ್ಬಂದಿಗಳೇ ಎಲ್ಲವನ್ನು ನಿಭಾಯಿಸುವಂತೆ ತಿಳಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ನಡುವೆ ವಿಧಾನಸೌಧದ ಆವರಣದಲ್ಲಿರುವ ಪೊಲೀಸ್ ಠಾಣೆಯನ್ನು ಅಲಂಕೃತಗೊಳಿಸಲಾಗುತ್ತಿದ್ದು, ಆಯುಧಗಳನ್ನು ಜಾಗೃತರಾಗಿ ಸ್ವಚ್ಛಗೊಳಿಸುವ ಕಾರ್ಯಗಳನ್ನು ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com