ಮೇಕೆಮರಿ ರಕ್ಷಿಸಿದ ನಾಟಕ: ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದ ಪಿಎಸ್ಐ, ವಿಡಿಯೋ ವೈರಲ್!
ಈ ಹಿಂದೆ ಕೊರೊನಾ ಭೀತಿ ಸಂದರ್ಭದಲ್ಲೂ ತಮ್ಮ ಬೆಂಬಲಿಗರಿಂದ ಹಾಲಿನ ಅಭಿಷೇಕ ಮಾಡಿಸಿಕೊಂಡು ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಇಲಾಖೆಯ ಕಂಗಣ್ಣಿಗೆ ಗುರಿಯಾಗಿದ್ದ ಜಿಲ್ಲೆಯ ಪಿಎಸ್ಐ ಇದೀಗ ಜಿಲ್ಲಾ ಪೊಲೀಸ್ ಇಲಾಖೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದಾರೆ.
Published: 22nd October 2020 05:52 PM | Last Updated: 22nd October 2020 05:59 PM | A+A A-

ಮಲ್ಲಣ್ಣ ಯಲಗೋಡ
ಕಲಬುರಗಿ: ಈ ಹಿಂದೆ ಕೊರೊನಾ ಭೀತಿ ಸಂದರ್ಭದಲ್ಲೂ ತಮ್ಮ ಬೆಂಬಲಿಗರಿಂದ ಹಾಲಿನ ಅಭಿಷೇಕ ಮಾಡಿಸಿಕೊಂಡು ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಇಲಾಖೆಯ ಕಂಗಣ್ಣಿಗೆ ಗುರಿಯಾಗಿದ್ದ ಜಿಲ್ಲೆಯ ಪಿಎಸ್ಐ ಇದೀಗ ಜಿಲ್ಲಾ ಪೊಲೀಸ್ ಇಲಾಖೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದಾರೆ.
ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿ ಠಾಣೆಯ ಪಿಎಸ್ಐ ಮಲ್ಲಣ್ಣ ಯಲಗೋಡ ಅವರು ಮೇಕೆಮರಿ ರಕ್ಷಿಸುವಂತೆ ನಾಟಕವಾಡಿ ಜಿಲ್ಲಾ ಪೊಲೀಸ್ ಇಲಾಖೆ ಮುಜುಗರಪಡುವಂತೆ ಮಾಡಿದ್ದಾರೆ. ಪಿಎಸ್ಐ ಮಲ್ಲಣ್ಣ ಯಲಗೋಡ ಬೇರೆ ಕಡೆಯಿಂದ ಕುರಿ ಮರಿಗಳನ್ನು ತರಿಸಿ ಅವುಗಳನ್ನು ಎತ್ತಿ ಹಿಡಿದು, ಇವು ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದವು. ಇವುಗಳನ್ನು ತಾನೇ ರಕ್ಷಿಸಿರುವುದಾಗಿ ಗ್ರಾಮಸ್ಥರಿಂದ ಹೇಳಿಸಿ ವಿಡಿಯೋವನ್ನು ಮಾಡಿಸಿದ್ದರು.
ಕೂಡಲಗಿ ಗ್ರಾಮ ಪ್ರವಾಹಕ್ಕೆ ಜಲಾವೃತವಾಗಿದ್ದು ನೀರಿನಲ್ಲಿ ನಾಲ್ವರು ಯುವಕರ ಸಹಾಯದಿಂದ ಥರ್ಮಾಕೋಲ್ ಮೇಲೆ ಪಿಎಸ್ಐ ನಿಂತಿದ್ದಾರೆ. ಕಡಿಮೆ ನೀರಿದ್ದ ಜಾಗದಲ್ಲಿ ಯುವಕರಿಂದ ಥರ್ಮಾಕೋಲ್ ತಳ್ಳಿಸಿಕೊಂಡು ತಾನು ಹೀರೋ ತರಹ ಪೋಸ್ ಕೊಟ್ಟಿದ್ದಾರೆ. ನಂತರ ಸೊಂಟದವರೆಗೆ ನೀರಿರುವಲ್ಲಿಗೆ ಹೋಗಿ ಕುರಿ ಮರಿ ರಕ್ಷಣೆ ಮಾಡಿರುವ ರೀತಿ ಪೋಸ್ ನೀಡಿದ್ದಾರೆ.
ಇದೇ ಅಲ್ಲದೆ ತಮ್ಮ ಹುಟ್ಟುಹಬ್ಬದಂದು ಮಲ್ಲಣ್ಣ ಹಾಲಿನಲ್ಲಿ ಅಭಿಶೇಕ ಮಾಡಿಸಿಕೊಂಡು ಟೀಕೆಗೆ ಗುರಿಯಾಗಿದ್ದರು.