ನಿವೃತ್ತಿ ಹೊಂದಿದ ಪೊಲೀಸರಿಗೂ ಐಡಿ ಕಾರ್ಡ್ ವಿತರಣೆ: ಡಿಜಿಪಿ ಪ್ರವೀಣ್ ಸೂದ್

ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳಂತೆಯೇ ನಿವೃತ್ತಿ ಹೊಂದಿದ ಪೊಲೀಸರಿಗೂ ಗೂರುತಿನ ಚೀಟಿ ನೀಡಲು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ.

Published: 23rd October 2020 11:18 AM  |   Last Updated: 23rd October 2020 12:44 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳಂತೆಯೇ ನಿವೃತ್ತಿ ಹೊಂದಿದ ಪೊಲೀಸರಿಗೂ ಗೂರುತಿನ ಚೀಟಿ ನೀಡಲು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ. 

ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸುತ್ತೋಲೆಯನ್ನು ಹೊರಡಿಸಿದ್ದು, ಸುತ್ತೋಲೆಯಲ್ಲಿ ಪೊಲೀಸ್ ಪೇದೆಯಿಂದ ಎಸ್'ಪಿ ವರೆಗೂ ನಿವೃತ್ತಿ ಹೊಂದಿದ ಎಲ್ಲಾ ಪೊಲೀಸರಿಗೂ ಗುರುತಿನ ಚೀಟಿ (ಐಡಿ ಕಾರ್ಡ್) ನೀಡುವಂತೆ ಸೂಚಿಸಲಾಗಿದೆ. 

ಈ ಗುರುತಿನ ಚೀಟಿಯು ನಿವೃತ್ತಿ ಹೊಂದಿದ ಪೊಲೀಸರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಅಥವಾ ಪ್ರಯಾಣದ ಸಂದರ್ಭಗಳಲ್ಲಿ, ಪೊಲೀಸ್ ಕ್ಯಾಂಟೀನ್'ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಾಯ ಮಾಡುತ್ತದೆ. 

ಐಜಿಪಿ ಮತ್ತು ಎಸ್‌ಪಿ ಕಚೇರಿಗಳು, ಸಿಐಡಿ, ತರಬೇತಿ, ಆಂತರಿಕ ಭದ್ರತಾ ವಿಭಾಗ, ರಾಜ್ಯ ಗುಪ್ತಚರ, ರೈಲ್ವೆ ಮತ್ತು ಇತರ ವಿಶೇಷ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಎಲ್ಲರಿಗೂ ಗುರುತಿನ ಚೀಟಿ ನೀಡುವಂತೆ ಹಾಗೂ ಈ ಗುರುತಿನ ಚೀಟಿಯಲ್ಲಿ ನಿವೃತ್ತಿ ಹೊಂದಿದ ಸಿಬ್ಬಂದಿಯ ಹೆಸರು, ನಿವೃತ್ತಿಯ ಸಮಯದಲ್ಲಿ ಪಡೆದಿರುವ ಶ್ರೇಣಿ, ರಕ್ತದ ಗುಂಪು ಮತ್ತು ನಿವೃತ್ತಿಯ ದಿನಾಂಕ ಸೇರಿದಂದೆ ಮುಂತಾದ ವಿವರಗಳನ್ನು ನಮೂದಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. 

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp