ಬೆಂಗಳೂರು ವಿಭಾಗದ ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಗೆ 'ಮೇರಿ ಸಹೇಲಿ' ಅಭಿಯಾನ

ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಭದ್ರತಾ ಪಡೆಯ ಬೆಂಗಳೂರು ಘಟಕ ಸುರಕ್ಷತಾ ಕಾರ್ಯಕ್ರಮವನ್ನು ಮೂರರಿಂದ ಹತ್ತು ಪ್ರಯಾಣಿಕ ರೈಲುಗಳಿಗೆ ವಿಸ್ತರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಭದ್ರತಾ ಪಡೆಯ ಬೆಂಗಳೂರು ಘಟಕ ಸುರಕ್ಷತಾ ಕಾರ್ಯಕ್ರಮವನ್ನು ಮೂರರಿಂದ ಹತ್ತು ಪ್ರಯಾಣಿಕ ರೈಲುಗಳಿಗೆ ವಿಸ್ತರಿಸಿದೆ.

ಕಳೆದ ವಾರ ರೈಲ್ವೆ ಮಂಡಳಿ ಎಲ್ಲಾ ರೈಲ್ವೆ ವಿಭಾಗಗಳನ್ನು ಒತ್ತಾಯಿಸಿ ಮೇರಿ ಸಹೆಲಿ ಅಭಿಯಾನವನ್ನು ಆರಂಭಿಸಿ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕೊಡಬೇಕೆಂದು ಹೇಳಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ರೈಲ್ವೆ ಭದ್ರತಾ ಪಡೆಯ ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಸುರಕ್ಷತಾ ಆಯುಕ್ತ ದೆಬಶ್ಮಿತ ಚಟ್ಟೋಪಾಧ್ಯಾಯ ಬ್ಯಾನರ್ಜಿ,ನಾವು ನಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳ ಪ್ರಕಾರ, ರೈಲುಗಳಲ್ಲಿ ಮಹಿಳೆಯರು, ಹೆಣ್ಣುಮಕ್ಕಳ ವಿರುದ್ದ ಅಪರಾಧ ನಡೆಯುವುದು ಹೆಚ್ಚು. ರೈಲುಗಳಲ್ಲಿ ಯಾವ ಬೋಗಿಗಳಲ್ಲಿ ಈ ರೀತಿ ನಡೆಯುತ್ತವೆ ಎಂದೆಲ್ಲ ನೋಡಿ ನಿರ್ದಿಷ್ಟವಾಗಿ ಅವುಗಳ ಮೇಲೆ ಗಮನ ಹರಿಸಿದ್ದೇವೆ. ವರ್ಷದ ಹಿಂದೆ ಬೆಂಗಳೂರಿನಿಂದ ಮಹಾರಾಷ್ಟ್ರದ ಮಿರಾಜ್ ಗೆ ಹೋಗುವ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ನಲ್ಲಿ ಪ್ರಾಯೋಗಿಕ ಮಾದರಿಯಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಮೇಲೆ ವಿಶೇಷ ಗಮನ ನೀಡಲಾಯಿತು. ನೈರುತ್ಯ ರೈಲ್ವೆ ವಲಯ ಕೊನೆಯಾಗುವ ಹುಬ್ಬಳ್ಳಿಯವರೆಗೆ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ನಲ್ಲಿ ಭದ್ರತೆ ನೀಡಿದೆವು.

ಮಹಿಳಾ ಪ್ರಯಾಣಿಕರು ಅನುಭವಿಸಿದ ಭದ್ರತೆ ಅನುಭವ, ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಅಭೂತಪೂರ್ವವಾಗಿತ್ತು. ನಂತರ ಉದ್ಯಾನ ಎಕ್ಸ್ ಪ್ರೆಸ್ ಗೆ, ಸಂಘಮಿತ್ರ ಎಕ್ಸ್ ಪ್ರೆಸ್ ಗೆ ವಿಸ್ತರಿಸಿದೆವು. ನಮ್ಮ ತಂಡದ ನಿರಂತರ ಪ್ರಯತ್ನದಿಂದ ಮಹಿಳೆಯರ ಮೇಲಿನ ಅಪರಾಧ ಪ್ರಕರಣ ಶೇಕಡಾ 40ರಷ್ಟು ಕಡಿಮೆಯಾದವು. ಮೂವರು ಮಹಿಳಾ ಸಬ್ ಇನ್ಸ್ ಪೆಕ್ಟರ್ ಗಳು ನಮ್ಮ ತಂಡ ಸೇರಿಕೊಂಡರು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com