ಬೆಂಗಳೂರು: ಕೋವಿಡ್ ನಿಂದ ಚೇತರಿಸಿಕೊಂಡ ಶೇ.1-2 ರಷ್ಟು ರೋಗಿಗಳಿಗೆ ಮತ್ತೆ ಜ್ವರ

ಕೋವಿಡ್-19 ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ 14 ದಿನಗಳ ನಂತರ ಮತ್ತೆ ಜ್ವರ ಕಾಣಿಸಿಕೊಳ್ಳುತ್ತಿದ್ದು, ಸ್ಪಷ್ಟ ಕಾರಣ ಇಲ್ಲದೆ ವೈದ್ಯರು ಗೊಂದಲಕ್ಕೊಳಗಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ 14 ದಿನಗಳ ನಂತರ ಮತ್ತೆ ಜ್ವರ ಕಾಣಿಸಿಕೊಳ್ಳುತ್ತಿದ್ದು, ಸ್ಪಷ್ಟ ಕಾರಣ ಇಲ್ಲದೆ ವೈದ್ಯರು ಗೊಂದಲಕ್ಕೊಳಗಾಗಿದ್ದಾರೆ.

ದೇಹದಲ್ಲಿ ವೈರಸ್ ಗುಣಿಸುವ ಹಂತದ ನಂತರ ಉಂಟಾಗುವ  ಜ್ವರವು 4-5 ದಿನಗಳವರೆಗೆ ಇರುತ್ತದೆ ಮತ್ತು ಎಲ್ಲಾ ವರ್ಗದ ರೋಗಿಗಳಲ್ಲಿಯೂ ಕಂಡುಬರುತ್ತದೆ. ಸಾಮಾನ್ಯವಾಗಿ  ಈ ಜ್ವರವು ಸೋಂಕನ್ನು ಸೂಚಿಸುತ್ತಿರುತ್ತದೆ. ಆದರೆ, ರಕ್ತ ಮತ್ತು ಮೂತ್ರ ಪರೀಕ್ಷೆ ನಡೆಸಿದಾಗ ದ್ವಿತೀಯ ಸೋಂಕು ಕಂಡುಬರದೆ, ಕೋವಿಡ್- ಸೋಂಕು ತಗುಲಿದ 14 ದಿನಗಳ ನಂತರ ಮತ್ತೆ ಜ್ವರ ಬರುವುದಕ್ಕೂ  ದೇಹದಲ್ಲಿ ಕೋವಿಡ್-19 ಸೋಂಕು ಗುಣಿಸುವುದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆಯ ವೈಜ್ಞಾನಿಕ ಮಂಡಳಿಯ ಮುಖ್ಯಸ್ಥ ಡಾ. ಅನೂಪ್ ಅಮರನಾಥ್.

ಇದಕ್ಕೆ ಸ್ಪಷ್ಟ ಕಾರಣ ಗೊತ್ತಾಗುತ್ತಿಲ್ಲ. ಇದು ವೈರಸ್ ನ ಅವಶೇಷಗಳು ಅಥವಾ ದೇಹದಲ್ಲಿನ ಸೈಟೊಕಿನ್ ತೀವ್ರತೆಯಿಂದಾಗಿ ಜ್ವರ ಕಾಣಿಸಿಕೊಳ್ಳುತ್ತಿರಬಹುದೆಂದು ಅಮರನಾಥ್ ಹೇಳಿದ್ದಾರೆ.

ತೀವ್ರವಾದ ರೋಗನಿರೋಧಕ ಕ್ರಿಯೆಯಲ್ಲಿ ದೇಹವು ಹಲವಾರು ಸೈಟೊಕಿನ್‌ಗಳನ್ನು ರಕ್ತಕ್ಕೆ ಬೇಗನೆ ಬಿಡುಗಡೆ ಮಾಡುತ್ತದೆ. ಇದರಿಂದಾಗಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಕಡಿಮೆ ಪ್ರಮಾಣದ ಜ್ವರ ಭಾದಿಸಬಹುದೆಂದು ಅಪೊಲೋ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ..

ಸೈಟೊಕಿನ್ ಗಳ ಮಟ್ಟವು ಉರಿಯೂತಕ್ಕೆ ಕಾರಣವಾಗುತ್ತದೆ, ಇದು ಜ್ವರಕ್ಕೆ ಕಾರಣವಾಗುತ್ತದೆ.  ಸೂಕ್ತ ಸಮಯ, ಆಹಾರ ಮತ್ತು ಔಷಧಿಗಳೊಂದಿಗೆ  ಇದನ್ನು ಗುಣಪಡಿಸಬಹುದು ಎಂದು ಆಸ್ಟರ್ ಸಿಎಮ್‌ಐ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಸಮಾಲೋಚಕ ಡಾ. ಶ್ರಿವಾಸ್ತವ ಲೋಕೇಶ್ವರನ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com