ನಾಲ್ವರು ಶ್ರೇಷ್ಠ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ  ಐಐಎಸ್ಸಿಯ ವಾರ್ಷಿಕ Alumnus/Alumna ಪ್ರಶಸ್ತಿ

ತಮ್ಮ ವೃತ್ತಿ, ಸಮಾಜ ಮತ್ತು ಸಂಸ್ಥೆಗೆ ನೀಡಿದ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ 2020 ರ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಶೇಷ ಅಲುಮ್ನಸ್ / ಅಲುಮ್ನಾ ಪ್ರಶಸ್ತಿಗೆ(Alumnus/Alumna Award) ನಾಲ್ಕು ಮಹೋನ್ನತ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಆಯ್ಕೆ ಮಾಡಲಾಗಿದೆ.
ಐಐಎಸ್ಸಿ
ಐಐಎಸ್ಸಿ

ಬೆಂಗಳೂರು: ತಮ್ಮ ವೃತ್ತಿ, ಸಮಾಜ ಮತ್ತು ಸಂಸ್ಥೆಗೆ ನೀಡಿದ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ 2020 ರ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಶೇಷ ಅಲುಮ್ನಸ್ / ಅಲುಮ್ನಾ ಪ್ರಶಸ್ತಿಗೆ(Alumnus/Alumna Award) ನಾಲ್ಕು ಮಹೋನ್ನತ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಆಯ್ಕೆ ಮಾಡಲಾಗಿದೆ.

 ಐಐಎಸ್ಸಿ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ನೇಮಿಸಿದ ಸಮಿತಿಯು ಮೌಲ್ಯಮಾಪನ ಮಾಡುವ ಮೂಲಕ ಈ ಆಯ್ಕೆ ನಡೆಯುತ್ತದೆ ಎಂದು ಹೇಳಲಾಗಿದ್ದು  ಡಾ ಕೆ ರಾಜಲಕ್ಷ್ಮಿ ಮೆನನ್, ಪ್ರೊಫೆಸರ್ ಬಿಎಸ್ ಮೂರ್ತಿ, ಪ್ರೊಫೆಸರ್ ಸೇತುರಾಮನ್ ಪಂಚನಾಥನ್ ಮತ್ತು ಡಾ ಕೇಶಬ್  ಪಂಡಾ ಈ ಸಾಲಿನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

 “ಪ್ರಶಸ್ತಿ ಪುರಸ್ಕೃತರು ತಮ್ಮ ಕ್ಷೇತ್ರಗಳಿಗೆ ಮತ್ತು ಸಮಾಜಕ್ಕೆ ಅಸಾಧಾರಣ ಕೊಡುಗೆಗಳನ್ನು ನೀಡಿದ ಅತ್ಯಂತ ಸಾಧನೆ ಮಾಡಿದ ವ್ಯಕ್ತಿಗಳು” ಎಂದು ಪ್ರೊಫೆಸರ್ ಗೋವಿಂದನ್ ರಂಗರಾಜ ಅವರು  ಹೇಳಿದ್ದಾರೆ.

ಡಾ. ರಾಜಲಕ್ಷ್ಮಿ ಮೆನನ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯ ಗುಪ್ತಚರ, ಕಣ್ಗಾವಲು, ಗುರಿ ಮತ್ತು ಮರುಪರಿಶೀಲನೆ (ಐಎಸ್‌ಟಿಎಆರ್) ಕಾರ್ಯಕ್ರಮದ ಅತ್ಯುತ್ತಮ ವಿಜ್ಞಾನಿ ಮತ್ತು ಕಾರ್ಯಕ್ರಮ ನಿರ್ದೇಶಕರಾಗಿದ್ದಾರೆ. 

ಪ್ರೊಫೆಸರ್ ಬಿ ಎಸ್ ಮೂರ್ತಿ ಹೈದರಾಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕರಾಗಿದ್ದರೆ ಪ್ರೊ. ಸೇತುರಾಮನ್ ಪಂಚನಾಥನ್ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ (ಎನ್‌ಎಸ್‌ಎಫ್) ನಿರ್ದೇಶಕರಾಗಿದ್ದಾರೆ. ಡಾ. ಕೇಶಬ್ ಪಂಡಾ  ಎಲ್ ಅಂಡ್ ಟಿ ಟೆಕ್ನಾಲಜಿ ಸರ್ವೀಸಸ್ ಲಿಮಿಟೆಡ್‌ನ ಸಿಇಒ ಮತ್ತು ಎಂಡಿ ಆಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com