ಮಹಾರಾಷ್ಟ್ರ ಗಡಿಯಲ್ಲಿ ವಲಸೆ ಕಾರ್ಮಿಕರ ದಟ್ಟಣೆ; ಕೊರೋನಾ ಸೋಂಕು ಹೆಚ್ಚುವ ಭೀತಿ!

ಸುಗ್ಗಿ ಕಾಲ ಹತ್ತಿರ ಬಂದಿದ್ದು, ಪ್ರತಿವರ್ಷ ಕಬ್ಬಿನ ಕಟಾವು ಅಕ್ಟೋಬರ್ ತಿಂಗಳಿನಲ್ಲಿ ಆರಂಭಗೊಳ್ಳಲಿದೆ. ಪ್ರತೀವರ್ಷ ಕಬ್ಬು ಕಡಿಯಲು ಮಹಾರಾಷ್ಟ್ರದ ಕುಶಲ ಕಾರ್ಮಿಕರು ರಾಜ್ಯಕ್ಕೆ ಧಾವಿಸುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಭೀತಿ ಎದುರಾಗಿದೆ. 
ಕಾರ್ಮಿಕರು
ಕಾರ್ಮಿಕರು

ವಿಜಯಪುರ: ಸುಗ್ಗಿ ಕಾಲ ಹತ್ತಿರ ಬಂದಿದ್ದು, ಪ್ರತಿವರ್ಷ ಕಬ್ಬಿನ ಕಟಾವು ಅಕ್ಟೋಬರ್ ತಿಂಗಳಿನಲ್ಲಿ ಆರಂಭಗೊಳ್ಳಲಿದೆ. ಪ್ರತೀವರ್ಷ ಕಬ್ಬು ಕಡಿಯಲು ಮಹಾರಾಷ್ಟ್ರದ ಕುಶಲ ಕಾರ್ಮಿಕರು ರಾಜ್ಯಕ್ಕೆ ಧಾವಿಸುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಭೀತಿ ಎದುರಾಗಿದೆ. 

ಈಗಾಗಲೇ ಕೊರೋನಾ ಲಾಕ್ಡೌನ್ ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಮಹಾರಾಷ್ಟ್ರದ ಕಾರ್ಮಿಕರು ಕೊರೋನಾ ಭೀತಿಯನ್ನು ಪಕ್ಕಕ್ಕಿಟ್ಟು ರಾಜ್ಯದ ಗಡಿಯತ್ತ ಧಾವಿಸುತ್ತಿದ್ದು, ಇದೀಗ ರಾಜ್ಯಕ್ಕೆ ಕೊರೋನಾ ಸೋಂಕು ಹೆಚ್ಚಾಗುವ ಭೀತಿ ಶುರುವಾಗಿದೆ. 

ವಿಜಯಪುರ ಮತ್ತು ಸೋಲಾಪುರ ನಡುವೆ ಎನ್ಎಚ್ -218 ನಲ್ಲಿ ಪ್ರಯಾಣಿಸುವಾಗ, ಮಹಾರಾಷ್ಟ್ರದ ಸಾವಿರಾರು ಕುಟುಂಬಗಳು ಟ್ರಾಕ್ಟರುಗಳಲ್ಲಿ ಪ್ರಯಾಣಿಸಿ ರಾಜ್ಯಕ್ಕೆ ಧಾವಿಸುತ್ತಾರೆ. ಬಾಗಲಕೋಟೆ, ಬೆಳಗಾವ ಮತ್ತು ವಿಜಯಪುರ ಗ್ರಾಮೀಣ ಪ್ರದೇಶಗಳಿಗೆ ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡುವ ಸಲುವಾಗಿ ಮಹಾರಾಷ್ಟ್ರದಿಂದ ಕಾರ್ಮಿಕರು ಧಾವಿಸುತ್ತಾರೆ. ಪ್ರತೀವರ್ಷ ಮುಂಗಡವಾಗಿಯೇ ಹಣ ನೀಡಿ ಕಾರ್ಮಿಕರನ್ನು ಕಾರ್ಖಾನೆಗಳು ಬುಕ್ ಮಾಡಿಕೊಳ್ಳುತ್ತಿದ್ದವು. 

ಪ್ರತೀವರ್ಷ 6 ತಿಂಗಳು ಗುತ್ತಿಗೆ ಆಧಾರದ ಮೇಲೆ ಈ ಕಾರ್ಮಿಕರನ್ನು ಕಾರ್ಖನೆಗಳು ಬುಕ್ ಮಾಡಿಕೊಳ್ಳುತ್ತಿರುತ್ತವೆ. ಕನಿಷ್ಠ 2,500 ಕುಟುಂಬಗಳು ಮಹಾರಾಷ್ಟ್ರದ ಬೀಡ್, ಲಾತೂರ್, ಸತಾರಾ ಮತ್ತು ಉಸ್ಮಾನಾಬಾದ್ ಜಿಲ್ಲೆಗಳಿಂದ ರಾಜ್ಯಕ್ಕೆ ವಲಸೆ ಬರುತ್ತವೆ. 

ಪ್ರತೀವರ್ಷದಂತೆ ಈ ಬಾರಿ ಪರಿಸ್ಥಿತಿಗಳಿಲ್ಲ. ಈ ಬಾರಿ ಕೊರೋನಾ ಮಹಾಮಾರಿಯ ಕಾಟ ಶುರುವಾಗಿದ್ದು, ಎರಡೂ ರಾಜ್ಯಗಳ ಪರಿಸ್ಥಿತಿ ವಿಭಿನ್ನವಾಗಿವೆ. ವಲಸೆ ಕಾರ್ಮಿಕರು ರಾಜ್ಯಕ್ಕೆ ಬರವುದಕ್ಕನೂ ಮುನ್ನ ಹಾಗೂ ಗಡಿ ಪ್ರವೇಶಿಸಿದ ಬಳಿಕ ಕೊರೋನಾ ಪರೀಕ್ಷೆಗೊಳಪಡುತ್ತಿಲ್ಲ. ಇದರಿಂದ ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ. 

ಕಳೆದ 20 ವರ್ಷಗಳಿಂದ ನಾವಿಲ್ಲಿ ಕೆಲಸಕ್ಕೆ ಬರುತ್ತಿದ್ದೇವೆ. ಅಕ್ಟೋಬರ್-ಮಾರ್ಚ್ ವರೆಗು 6 ತಿಂಗಳುಗಳ ಕಾಲ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿ ನಂತರ ಮರಳಿ ನಮ್ಮ ನಮ್ಮ ಊರುಗಳಿಗೆ ಹೋಗುತ್ತೇವೆ. ಸುಮಾರು 50 ಕುಟುಂಬಗಳು ಒಮ್ಮೆಲೆ ಬೆಳೆಗಾವಿಯ ಸೌಂದಟ್ಟಿಗೆ ಬಂದು ಕಬ್ಬು ಕಟಾವು ಮಾಡುತ್ತೇವೆಂದು ಬೀಡ್ ಜಿಲ್ಲೆಯ ನಿವಾಸಿ ಸುಭಾಷ್ ಅವರು ಹೇಳಿದ್ದಾರೆ. 

ಕೊರೋನಾ ವೈರಸ್ ಭೀತಿ ಇದೆ. ಆದರೆ, ನಮಗೆ ಬೇರಾವುದೇ ದಾರಿಯಿಲ್ಲ. ಜೀವನ ನಡೆಸಲು ವಲಸೆ ಹೋಗಲೇಬೇಕಿದೆ. ಸೋಂಕು ತಗುಲಿದರೆ ನಮ್ಮ ವೈದ್ಯಕೀಯ ವೆಚ್ಚ ಭರಿಸುವುದಾಗಿ ಕಾರ್ಖಾನೆಗಳು ಹೇಳಿವೆ. ಮನೆಯಿಂದ ತೆರಳುವುದಕ್ಕೂ ಮುನ್ನ ಕೊರೋನಾ ಪರೀಕ್ಷೆಗೊಳಪಡುತ್ತೇವೆಂದು ಮತ್ತೊಬ್ಬ ಕಾರ್ಮಿಕ ಅಶೋಕ್ ಅವರು ಹೇಳಿದ್ದಾರೆ. 

ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಾಂತ್ ಅವರು ಮಾತನಾಡಿ, ಇದು ಅತ್ಯಂತ ಗಂಭೀರ ವಿಚಾರವಾಗಿದೆ. ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗಿದೆ. ವಲಸೆ ಕಾರ್ಮಿಕರು ರಾಜ್ಯದ ಗಡಿ ಪ್ರವೇಶಿಸುತ್ತಿರುವ ಕುರಿತು ಶೀಘ್ರದಲ್ಲಿಯೇ ಸಕ್ಕರೆ ಕಾರ್ಖಾನೆಗಳ ನಿರ್ವಾಹಕರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸುತ್ತೇವೆ. ಕಾರ್ಮಿಕರನ್ನು ಕೊರೋನಾ ಪರೀಕ್ಷೆಗೊಳಪಡಿಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com