ನಗರದ ಸಣ್ಣ, ಹೊಸ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ: ಬಿಬಿಎಂಪಿ

ಇತ್ತೀಚಿನ ದಿನಗಳಲ್ಲಿ ನಗರದ ಸಣ್ಣ, ಹೊಸ ಪ್ರದೇಶಗಳಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಬಿಬಿಎಂಪಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ. 

Published: 26th October 2020 12:39 PM  |   Last Updated: 26th October 2020 12:52 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರದ ಸಣ್ಣ, ಹೊಸ ಪ್ರದೇಶಗಳಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಬಿಬಿಎಂಪಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ. 
 
ಈ ಹಿಂದೆ ಮಳೆ ಬಂದಾಗ ನಗರದಲ್ಲಿ ಬಹುತೇಕ ಪ್ರದೇಶಗಳಿಗೆ ಒಮ್ಮೆಲೆ ನೀರು ನುಗ್ಗುತ್ತಿತ್ತು. ಆದರೀಗ ನಗರದ ಹೊಸ ಹೊಸ ಪ್ರದೇಶಗಳಲ್ಲೂ ಮಳೆಯಿಂದಾಗಿ ಸಂಕಷ್ಟ ಎದುರಾಗುತ್ತಿದೆ. ಪ್ರತೀ ವರ್ಷ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಗೆ ಒಂದೊಂದು ಪ್ರದೇಶ ಸೇರ್ಪಡೆಗೊಳ್ಳುತ್ತಲೇ ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ಮಾತನಾಡಿ, ಕಳೆದ ವರ್ಷ ಪಟ್ಟಿಗೆ ಭದ್ರಪ್ಪ ಲೇಔಟ್ ಸೇರ್ಪಡೆಗೊಂಡಿತ್ತು. ಈ ಬಾರಿ ದತ್ತಾತ್ರೇಯ ಲೇಔಟ್ ಸೇರ್ಪಡೆಗೊಂಡಿದೆ. ಯೋಜನೆಗಳಿಲ್ಲದೆಯೇ ಲೇಔಟ್ ಗಳನ್ನು ವಿನ್ಯಾಸಗೊಳಿಸುತ್ತಿರುವುದರಿಂದ ಇಂತಹ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ ಎಂದು ಹೇಳಿದ್ದಾರೆ. 

ಬಿಬಿಎಂಪಿಯ ಮತ್ತೊಬ್ಬ ಹಿರಿಯ ಅಧಿಕಾರಿ ಮಾತನಾಡಿ, ಈ ಪ್ರದೇಶಗಳಲ್ಲಿನ ಮನೆಗಳನ್ನು ಚರಂಡಿಗಳಿರುವ ಮಟ್ಟಕ್ಕಿಂತಲು ಕೆಳಹಂತದ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ. ಹೀಗಾಗಿಯೇ ಮಳೆ ಬಂದಾಗ ಮನೆಗಳಿಗೆ ಹಾನಿಯುಂಟಾಗುತ್ತಿವೆ. ಈ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಂಕ್ರೀಟ್ ಹಾಕಲಾಗಿದೆ, ಹೀಗಾಗಿ ಮಳೆ ನೀರನ್ನು ಭೂಮಿ ಹೀರಿಕೊಳ್ಳಲು ಸಾಧ್ಯವಾಗದೆ ಸಂಕಷ್ಟ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ ಎಂದು ತಿಳಿಸಿದ್ದಾರೆ. 

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp