ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಒಂದು ವಾರ ಗಡುವು

ಸ್ಮಾರ್ಟ್ ಸಿಟಿ ಅಡಿಯಲ್ಲಿ ಮಿನ್ಸ್ಕ್ ಸ್ಕೇರ್ ನಿಂದ ಪ್ಲಾನೇಟೇರಿಯಂ ವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಒಂದು ವಾರ ಸಮಯವಿದೆ, ನವೆಂಬರ್ 1 ಅಂತಿಮ ಗಡುವು ಪೂರ್ಣಗೊಳ್ಳಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ಮಾರ್ಟ್ ಸಿಟಿ ಅಡಿಯಲ್ಲಿ ಮಿನ್ಸ್ಕ್ ಸ್ಕೇರ್ ನಿಂದ ಪ್ಲಾನೇಟೇರಿಯಂ ವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಒಂದು ವಾರ ಸಮಯವಿದೆ, ನವೆಂಬರ್ 1 ಅಂತಿಮ ಗಡುವು ಪೂರ್ಣಗೊಳ್ಳಲಿದೆ.

ಹಸಿರು ಬಫರ್ ವಲಯದಲ್ಲಿ ನಿರ್ಮಾಣವಾಗುತ್ತಿರುವ ಈ ರಸ್ತೆಯಲ್ಲಿ ಪಾದಚಾರಿ ಮಾರ್ಗ, ಹಾಗೂ ಸೈಕಲ್ ಮಾರ್ಗಗಳು ನಾಗರಿಕರಿಗೆ ಮುಕ್ತವಾಗಲಿವೆ.

ಹಲವು ಅಡೆ -ತಡೆಗಳನ್ನು ನಿವಾರಿಸಿಕೊಂಡು ಇಲಾಖೆ ಕಾಮಗಾರಿ ಪೂರ್ಣಗೊಳಿಸಿದೆ. ಕಳೆದ ಒಂದು ವಾರದಿಂದ ಬಿಡುವಿಲ್ಲದೇ ಸುರಿಯುತ್ತಿರುವ ಮಳೆ, ಅನಧಿಕೃತ ಪೈಪ್ ಲೈನ್ ಮತ್ತು ಕೇಬಲ್ ಲೈನ್ ಎಲ್ಲಾ ತಡೆಗಳನ್ನು ನಿವಾರಿಸಿ 0.92 ಕಿಮೀ ಉದ್ದದ ರಸ್ತೆಯನ್ನು ಪೂರ್ಣಗೊಳಿಸಿದೆ. ಕಳೆದ ಜನವರಿಯಲ್ಲಿ ಕಾಮಗಾರಿ ಆರಂಭವಾಗಿದ್ದು, ಕೊರೋನಾ ಕಾರಣದಿಂದಾಗಿ ವಿಳಂಭವಾಗಿದೆ.

ಯೋಜನೆಯು ಅಸ್ತಿತ್ವದಲ್ಲಿರುವ ಎರಡು ಪೈಪ್‌ಲೈನ್‌ಗಳನ್ನು ತೋರಿಸಿತ್ತು, ಹಳೇಯ ಎಲ್ಲಾ ಪೈಪ್ ಗಳನ್ನು ತೆಗೆದು ಹೊಸದಾಗಿ ಅಳವಡಿಸಲಾಗಿದೆ. ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾಗಿದ್ದರಿಂದ ನಿರಂತರವಾಗಿ ಪರಿಶೀಲನೆ ನಡೆಸುತ್ತದ್ದೆವು ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಎಂಡಿ ಹೆಪ್ಸಿಬಾ ರಾಮಿ ಕೊರ್ಲಾಪಟ್ಟಿ ತಿಳಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ 30 ಕಿಮೀ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದ್ದು, ಟೆಂಡರ್ ಶ್ಯೂರ್  ನಂತೆ ನಿರ್ಮಾಣವಾಗಿದೆ. 

ಬಿಬಿಎಂಪಿಯ ಟೆಂಡರ್ಸೂರ್ ರಸ್ತೆಗಳ. ಬಿಬಿಎಂಪಿ, ಬೆಂಗಳೂರು ಟ್ರಾಫಿಕ್ ಪೊಲೀಸ್, ಬೆಸ್ಕಾಮ್, ಬಿಡಬ್ಲ್ಯೂಎಸ್ಎಸ್ಬಿ, ಬಿಎಸ್ಎನ್ಎಲ್, ಬಿಎಂಟಿಸಿ ಮತ್ತು 20 ಕಾಲೇಜು ಇಂಟರ್ನಿಗಳು ತಮ್ಮ ಆಲೋಚನೆಗಳನ್ನು ಈ ಯೋಜನೆಯಲ್ಲಿ ತರುತ್ತಿದ್ದಾರೆ.

ರೇಖಾಚಿತ್ರಗಳು ಮತ್ತು ವಿನ್ಯಾಸದ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಲು ನಗರ ಭೂ ಸಾರಿಗೆ ನಿರ್ದೇಶನಾಲಯದ ತಂಡ ಮತ್ತು ವಿಶ್ವ ಸಂಪನ್ಮೂಲ ಸಂಸ್ಥೆಯ (ಡಬ್ಲ್ಯುಆರ್‌ಐ) ಕೆಲವು ಸಲಹೆಗಾರರು ಸ್ಥಳದಲ್ಲೇ ಇದ್ದು ಯೋಜನೆಗೆ ರೂಪು ರೇಷೆ ನೀಡಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗದ ನಂತರ ಸೈಕ್ಲಿಂಗ್ ಟ್ರ್ಯಾಕ್, ಸೇರಿದಂತೆ ಹಲವು ರಸ್ತೆ ಕಾಮಗಾರಿಗಳು ಈ ಸ್ಮಾರ್ಟ್ ಸಿಟಿ ಯೋಜನೆಯಡಿ ಪೂರ್ಣಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com