ಅಮೆಜಾನ್, ಫ್ಲಿಪ್‌ಕಾರ್ಟ್ ವಿರುದ್ಧದ ತನಿಖೆಗೆ ಸಿಸಿಐ ಮನವಿ: ನ್ಯಾಯ ತೀರ್ಮಾನಕ್ಕೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ಸ್ಪರ್ಧಾತ್ಮಕ ವಿರೋಧಿ ನಡೆಗಳಿಗಾಗಿ ಇ-ಕಾಮರ್ಸ್ ದೈತ್ಯ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ವಿರುದ್ಧದ ತನಿಖೆಯಲ್ಲಿನ ಭಾರತದ ಸ್ಪರ್ಧಾ ಆಯೋಗದ ತಡೆಯಾಜ್ಞೆ ಮನವಿಯನ್ನು ತೀರ್ಮಾನಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ಗೆ ಸೂಚಿಸಿದೆ.

Published: 26th October 2020 09:08 PM  |   Last Updated: 26th October 2020 09:08 PM   |  A+A-


ಅಮೆಜಾನ್ ಫ್ಲಿಪ್‌ಕಾರ್ಟ್

Posted By : Raghavendra Adiga
Source : PTI

ನವದೆಹಲಿ: ಸ್ಪರ್ಧಾತ್ಮಕ ವಿರೋಧಿ ನಡೆಗಳಿಗಾಗಿ ಇ-ಕಾಮರ್ಸ್ ದೈತ್ಯ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ವಿರುದ್ಧದ ತನಿಖೆಯಲ್ಲಿನ ಭಾರತದ ಸ್ಪರ್ಧಾ ಆಯೋಗದ ತಡೆಯಾಜ್ಞೆ ಮನವಿಯನ್ನು ತೀರ್ಮಾನಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ಗೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಮನವಿಯ ತೀರ್ಮಾನಕ್ಕಾಗಿ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಭಾರತದ ಸ್ಪರ್ಧಾ ಆಯೋಗವನ್ನು ಕೇಳಿದೆ.

ಸಿಸಿಐ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇ-ಕಾಮರ್ಸ್ ಕಂಪನಿಗಳ ವಿರುದ್ಧ ಆದೇಶಿಸಿದ ತನಿಖೆ ಆಡಳಿತಾತ್ಮಕ ಸ್ವರೂಪದ್ದಾಗಿದೆ ಮತ್ತು ಯಾವುದೇ ಪಕ್ಷದ  ಪಕ್ಷದ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ಈ ಪ್ರಕರಣದಲ್ಲಿ ಹಲವಾರು ವ್ಯಾಪಕ ಸಮಸ್ಯೆಗಳಿವೆ ಎಂದು ಬಾಕಿ ಇರುವ ಅರ್ಜಿಯ ಬಗ್ಗೆ ನ್ಯಾಯಪೀಠದ ಮುಂದೆ ಪ್ರಸ್ತಾಪಿಸಿದರು.

ಇನ್ನು ಇ-ಕಾಮರ್ಸ್ ಕಂಪನಿಗಳ ಪರ ಹಾಜರಾದ ಹಿರಿಯ ವಕೀಲ ಎ.ಎಂ.ಸಿಂಗ್ವಿ 200 ದಿನಗಳ ವಿಳಂಬದ ನಂತರ ಸಿಸಿಐ ಸುಒರೀಂ ಕೋರ್ಟ್ ನ ಸಂಪರ್ಕ ಮಾಡಿದೆ ಎಂದಿದ್ದಾರೆ.  

ಹೈಕೋರ್ಟ್ ಈ ವಿಷಯವನ್ನು ಆಲಿಸಿ ಆರು ವಾರಗಳಲ್ಲಿ ತೀರ್ಮಾನಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ ಮತ್ತು ಈ ಅವಧಿಯಲ್ಲಿ ಹೈಕೋರ್ಟ್ ಯಾವುದೇ ನಿರ್ಧಾರವನ್ನು ನೀಡದಿದ್ದರೆ ಅರ್ಜಿಯನ್ನು ಮರು ಊರ್ಜಿತಗೊಳಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಫೆ .14 ರಂದು ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧ ಸಿಸಿಐ ಆದೇಶಿಸಿರುವ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಸಿಸಿಐ ಆದೇಶಿಸಿದ ತನಿಖೆಯನ್ನು ತಡೆಹಿಡಿಯಬೇಕೆಂದು ಕೋರಿ ಅಮೆಜಾನ್ ಹೈಕೋರ್ಟ್‌ಗೆ ಮೊರೆ ಹೋಗಿತ್ತು.

ಸ್ಪರ್ಧಾತ್ಮಕ ವಿರೋಧಿ ನಡವಳಿಕೆಯ ಆರೋಪದ ಬಗ್ಗೆ ತನಿಖೆ ನಡೆಸಲು ಸಿಸಿಐ ನಿರ್ದೇಶಿಸಿದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಫ್ಲಿಪ್‌ಕಾರ್ಟ್ ಸಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ತನ್ನ ಮನವಿಯಲ್ಲಿ, ಅಮೆಜಾನ್ ಸಿಸಿಐನ ಜನವರಿ 13, 2020 ರ ತನಿಖಾ ಆದೇಶವನ್ನು ರದ್ದುಗೊಳಿಸಲು ಬಯಸಿತ್ತು."ನ್ಯಾಯದ ಹಿತದೃಷ್ಟಿಯಿಂದ ಪ್ರಕರಣದ ಸಂಗತಿಗಳು ಮತ್ತು ಸನ್ನಿವೇಶಗಳ" ಆಧಾರದ ಮೇಲೆ ತೀರ್ಮಾನವನ್ನು ನೀಡುವಂತೆ ನ್ಯಾಯಾಲಯವನ್ನು ಪ್ರಾರ್ಥಿಸಿತ್ತು.

"ನ್ಯಾಯದ ಹಿತದೃಷ್ಟಿಯಿಂದ ಪ್ರಕರಣದ ಸಂಗತಿಗಳು ಮತ್ತು ಸನ್ನಿವೇಶಗಳ" ಆಧಾರದ ಮೇಲೆ ಪರಿಹಾರವನ್ನು ನೀಡುವಂತೆ ನ್ಯಾಯಾಲಯವನ್ನು ಪ್ರಾರ್ಥಿಸಿತ್ತು.
 

Stay up to date on all the latest ರಾಜ್ಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp