ಕ್ರ್ಯಾಕ್ ಟೀಮ್ ನೊಂದಿಗೆ ಸೈಬರ್ ಕ್ರೈಮ್ ಪ್ರಕರಣಗಳ ಇತ್ಯರ್ಥ ಇನ್ಮುಂದೆ ಮತ್ತಷ್ಟು ಪರಿಣಾಮಕಾರಿ

ಕಳೆದ 2 ವರ್ಷಗಳ ಅವಧಿಯಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಇತ್ಯರ್ಥ ಶೇ.10 ರಷ್ಟಾಗಿದ್ದು, ನಿರಾಶಾದಾಯಕ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು, ಪರಿಣಾಮಕಾರಿ ಕಾರ್ಯನಿರ್ವಹಣೆಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮುಂದಾಗಿವೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ 2 ವರ್ಷಗಳ ಅವಧಿಯಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಇತ್ಯರ್ಥ ಶೇ.10 ರಷ್ಟಾಗಿದ್ದು, ನಿರಾಶಾದಾಯಕ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು, ಪರಿಣಾಮಕಾರಿ ಕಾರ್ಯನಿರ್ವಹಣೆಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮುಂದಾಗಿವೆ. 

ಸೈಬರ್ ಕ್ರೈಮ್ ನ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸುವುದಕ್ಕೆ ಕ್ರ್ಯಾಕ್ ಟೀಮ್ ನ ನಿಯೋಜನೆಗೆ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪೊಲೀಸ್ ಆಯುಕ್ತ ಕಮಲ್ ಪಂತ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 2-4 ಜನರನ್ನೊಳಗೊಳ್ಳಲಿರುವ ಕ್ರ್ಯಾಕ್ ಟೀಮ್, ಸೈಬರ್ ಕ್ರೈಮ್ ನಡೆದ ಅವಧಿ ಹಾಗೂ ದೂರು ದಾಖಲಾದ ಅವಧಿಯ ನಡುವಿನ ಸಮಯವನ್ನು ( ಗೋಲ್ಡನ್ ಅವರ್) ಸಮರ್ಥವಾಗಿ ಬಳಸಿಕೊಂಡು ಅಪರಾಧಿಗಳ ಹೆಡೆಮುರಿ ಕಟ್ಟುವುದಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಲಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. 

ಸೈಬರ್ ಕ್ರೈಮ್ ನಲ್ಲಿ ಸಮಯವೇ ಅತ್ಯಂತ ಪ್ರಧಾನವಾದದ್ದು, ಹಣ ವರ್ಗಾವಣೆಯಾದ ಲೊಕೇಷನ್ ಹಾಗೂ ಅಪರಾಧದ ಹಿಂದಿರುವ ವ್ಯಕ್ತಿಯ ಬಗ್ಗೆ ವಿವರಗಳನ್ನು ಈ ತಾಂತ್ರಿಕ ತಂಡ ಪತ್ತೆ ಮಾಡಲಿದ್ದು, ನಮ್ಮ ಪೊಲೀಸ್ ಅಧಿಕಾರಿಗಳಿಗೂ ಸಹ ತರಬೇತಿ ನೀಡಲಿದ್ದಾರೆ ಎಂದು ಪಂತ್ ತಿಳಿಸಿದ್ದಾರೆ. ಇನ್ನೊಂದು ವಾರದಲ್ಲಿ ಈ ತಂಡ ಕಾರ್ಯನಿರ್ವಹಣೆ ಪ್ರಾರಭಿಸಲಿದೆ. 

ಬ್ಯಾಂಕ್ ಗಳು ಪ್ರತಿಕ್ರಿಯೆ ನೀಡುವ ಅವಧಿಯನ್ನು ಮತ್ತಷ್ಟು ಕಡಿಮೆ ಮಾಡುವುದು ಹಾಗೂ ಸೈಬರ್ ಕ್ರೈಮ್ ಪ್ರಕರಣದ ವರದಿಯಾದ ತಕ್ಷಣವೇ ಬ್ಯಾಂಕಿಂಗ್ ಹಾಗೂ ಪೊಲೀಸ್ ನೆಟ್ವರ್ಕ್ ಗಳು ಸಕ್ರಿಯಗೊಳ್ಳುವ ನಿಟ್ಟಿನಲ್ಲಿ ಬ್ಯಾಂಕ್ ಹಾಗೂ ಪೊಲೀಸ್ ಇಲಾಖೆ ಒಟ್ಟಿಗೆ ಕಾರ್ಯನಿರ್ವಹಿಸುವ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಹೆಚ್ಚುವರಿ ಆಯುಕ್ತ (ಪಶ್ಚಿಮ) ಸೌಮೇಂದು ಮುಖರ್ಜಿ ಸೈಬರ್ ಕ್ರೈಮ್ ಪ್ರಕರಣವನ್ನು ದಾಖಲಿಸಿಕೊಳ್ಳುವುದಕ್ಕೆ ಬೇಕಾಗುವ ಸಮಯವನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ, ಈಗ ಎಫ್ಐಆರ್ ನ್ನು ದಾಖಲಿಸಲು ವ್ಯಕ್ತಿಯೇ ಪೊಲೀಸ್ ಠಾಣೆಗೆ ಬರಬೇಕಾದ ಅಗತ್ಯವಿದೆ. ಆದರೆ ರಿಯಲ್ ಟೈಮ್ ಆಧಾರದಲ್ಲಿ ಪ್ರಕರಣ ದಾಖಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಗೋಲ್ಡನ್ ಅವರ್ ನಲ್ಲಿ ಸೂಕ್ತ ಮಾರ್ಗದರ್ಶನ ನೀಡುವ ತಂಡವೂ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com