ಬೆಂಗಳೂರಿನ ಆರ್ ಡಬ್ಲ್ಯುಎಫ್ ಗೆ ಲೋಕೋಮೋಟಿವ್‌ ಚಕ್ರ, ಆಕ್ಸಲ್ ತಯಾರಿಸುವ ಆರ್ಡರ್ ನೀಡಿದ ಮೊಜಾಂಬಿಕ್

ಭಾರತೀಯ ರೈಲ್ವೆಗಾಗಿ ಚಕ್ರಗಳು ಮತ್ತು ಆಕ್ಸಲ್ ತಯಾರಿಸುವ ಯಲಹಂಕದಲ್ಲಿರುವ ರೈಲು ಚಕ್ರ ಕಾರ್ಖಾನೆ(ಆರ್ ಡಬ್ಲ್ಯುಎಫ್) ಇದೇ ಮೊದಲ ಬಾರಿಗೆ ತಾನು ತಯಾರಿಸುವ ಚಕ್ರಗಳು ಮತ್ತು ಆಕ್ಸಲ್ ಗಳನ್ನು ವಿದೇಶಕ್ಕೆ ರಫ್ತು ಮಾಡುವ ಅವಕಾಶ ಪಡೆದುಕೊಂಡಿದೆ. 
ಲೋಕೋಮೋಟಿವ್ ಚಕ್ರ
ಲೋಕೋಮೋಟಿವ್ ಚಕ್ರ

ಬೆಂಗಳೂರು: ಭಾರತೀಯ ರೈಲ್ವೆಗಾಗಿ ಚಕ್ರಗಳು ಮತ್ತು ಆಕ್ಸಲ್ ತಯಾರಿಸುವ ಯಲಹಂಕದಲ್ಲಿರುವ ರೈಲು ಚಕ್ರ ಕಾರ್ಖಾನೆ(ಆರ್ ಡಬ್ಲ್ಯುಎಫ್) ಇದೇ ಮೊದಲ ಬಾರಿಗೆ ತಾನು ತಯಾರಿಸುವ ಚಕ್ರಗಳು ಮತ್ತು ಆಕ್ಸಲ್ ಗಳನ್ನು ವಿದೇಶಕ್ಕೆ ರಫ್ತು ಮಾಡುವ ಅವಕಾಶ ಪಡೆದುಕೊಂಡಿದೆ. 

ಆಫ್ರಿಕಾದ ಮೊಜಾಂಬಿಕ್ ಆರ್ ಡಬ್ಲ್ಯುಎಫ್ ಗೆ 1485 ಚಕ್ರಗಳು ಮತ್ತು ಆಕ್ಸಲ್ಗಳನ್ನು ತಯಾರಿಸುವ ಆರ್ಡರ್ ನೀಡಿದೆ ಮತ್ತು ಈಗಾಗಲೇ ಮೊದಲ ಬ್ಯಾಚ್ ನ ಚಕ್ರಗಳನ್ನು ಕಳುಹಿಸಲಾಗಿದೆ.

ಇದು 1984ರಲ್ಲಿ ಆರಂಭವಾದ ಆರ್‌ಡಬ್ಲ್ಯುಎಫ್ ನ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಆಗಿದ್ದು, ಅಕ್ಟೋಬರ್ 21 ರವರೆಗೆ ತನ್ನ ಆವರಣದಿಂದ ನಾಲ್ಕು ದಶಲಕ್ಷ ಚಕ್ರವನ್ನು ಉರುಳಿಸಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಜನರಲ್ ಮ್ಯಾನೇಜರ್ ರಾಜೀವ್ ಕುಮಾರ್ ವ್ಯಾಸ್ ಅವರು, ರಫ್ತು ಆದೇಶವು ಆರ್‌ಡಬ್ಲ್ಯುಎಫ್‌ಗೆ ಅತ್ಯಂತ ಮಹತ್ವದ್ದಾಗಿದೆ. "ಮೊಜಾಂಬಿಕ್ ಗಾಗಿ ಲೊಕೊಗಳನ್ನು ಸಿದ್ಧಪಡಿಸುತ್ತಿರುವ ವಾರಣಾಸಿಯಲ್ಲಿನ ಡೀಸೆಲ್ ಲೋಕೋಮೋಟಿವ್ ವರ್ಕ್ಸ್ ಗೆ ನಮ್ಮ ಮೊದಲ ದೊಡ್ಡ ಅಂತರರಾಷ್ಟ್ರೀಯ ಒಪ್ಪಂದಕ್ಕಾಗಿ ನಾವು 90 ಚಕ್ರಗಳು ಮತ್ತು 45 ಆಕ್ಸಲ್ ಗಳನ್ನು ಮೊದಲ ರವಾನೆ ಮಾಡಿದ್ದೇವೆ. ಈ ಒಪ್ಪಂದವು 8.13 ಕೋಟಿ ರೂ ಮೊತ್ತದ್ದಾಗಿದ್ದು, 1485 ಉತ್ಪನ್ನಗಳಿಗೆ - 990 ಚಕ್ರಗಳು ಮತ್ತು 495 ಆಕ್ಸಲ್ ಗಳನ್ನು ಒಳಗೊಂಡಿದೆ" ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com