ಅಕ್ಟೋಬರ್ 27 ರಿಂದ ನೀಟ್ ಕೌನ್ಸೆಲಿಂಗ್

ನವೆಂಬರ್ 30 ಅಂತಿಮ ಗಡವಿನೊಳಗೆ ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವ ಸಲುವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ ಅಕ್ಟೋಬರ್ 27 ರಿಂದ ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲಿದೆ.
ನೀಟ್ ಕೌನ್ಸೆಲಿಂಗ್
ನೀಟ್ ಕೌನ್ಸೆಲಿಂಗ್

ಬೆಂಗಳೂರು: ನವೆಂಬರ್ 30 ಅಂತಿಮ ಗಡವಿನೊಳಗೆ ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವ ಸಲುವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ ಅಕ್ಟೋಬರ್ 27 ರಿಂದ ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲಿದೆ.

ಎಂಜಿನಿಯರಿಂಗ್ ಸೀಟುಗಳು (ಸಿಇಟಿ) ಮತ್ತು ವೈದ್ಯಕೀಯ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಿದ್ದು, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮೂಲಕ ಏಕಕಾಲದಲ್ಲಿ ಕೌನ್ಸಿಲಿಂಗ್ ನಡೆಸಲಿದೆ. ಅಖಿಲ ಭಾರತ ಕೋಟಾಕ್ಕೆ ಮೊದಲ ಸುತ್ತಿನ ನೀಟ್ ಕೌನ್ಸೆಲಿಂಗ್ ನಂತರ ಪ್ರಾಧಿಕಾರವು ಎಂಜಿನಿಯರಿಂಗ್  (ಸಿಇಟಿ) ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಪ್ರಾರಂಭಿಸುತ್ತದೆ ಎಂದು ಕೆಇಎ ನಿರ್ದೇಶಕ ವೆಂಕಟ್ ರಾಜು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಖಚಿತಪಡಿಸಿದ್ದಾರೆ.
 
ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆ ಮಂಗಳವಾರ ಪ್ರಾರಂಭವಾಗಲಿದ್ದು, ಅಖಿಲ ಭಾರತ ಕೋಟಾದ ಮೊದಲ ಪಟ್ಟಿ ನವೆಂಬರ್ 6 ಮತ್ತು 12 ರ ನಡುವೆ ಹೊರಬರುವ ಸಾಧ್ಯತೆಯಿದೆ. ಸಾಮಾನ್ಯವಾಗಿ ವೈದ್ಯಕೀಯ ಸೀಟುಗಳು ತುಂಬಿದ ನಂತರ ಎಂಜಿನಿಯರಿಂಗ್ ಸೀಟುಗಳಿಗೆ ಕೌನ್ಸೆಲಿಂಗ್ ಪ್ರಾರಂಭವಾಗುತ್ತದೆ. ಪ್ರತಿ  ವರ್ಷ, ಹಲವಾರು ವೈದ್ಯಕೀಯ ಆಕಾಂಕ್ಷಿಗಳು ವೈದ್ಯಕೀಯ ಸ್ಥಾನಗಳಿಗೆ ದೃಢೀಕರಣವನ್ನು ಪಡೆದ ನಂತರ ತಮ್ಮ ಎಂಜಿನಿಯರಿಂಗ್ ಸೀಟುಗಳನ್ನು ಬಿಟ್ಟುಕೊಡುತ್ತಾರೆ. ಪ್ರವೇಶದ ಅಂತಿಮ ದಿನಾಂಕದ ನಂತರ ಈ ಸೀಟು ಹಿಂಪಡೆಯುವಿಕೆಯು ನಡೆಯುವುದರಿಂದ ಹಲವಾರು ಸ್ಥಾನಗಳು ಖಾಲಿ ಉಳಿಯುವುದರಿಂದ  ಇದು ಎಂಜಿನಿಯರಿಂಗ್ ಕಾಲೇಜುಗಳ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ ಏಕಕಾಲಿಕ ವ್ಯವಸ್ಥೆ ಇದ್ದರೂ, ಇದು ವಿದ್ಯಾರ್ಥಿಗಳಿಗೆ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ ಸಕಾರಾತ್ಮಕ ಎಂದು ರಾಜು ಹೇಳಿದರು.

"ವೈದ್ಯಕೀಯ ಸೀಟುಗಳಿಗೆ ಹೋಗಲು ಬಯಸುವ ವಿದ್ಯಾರ್ಥಿಗಳು ಅವುಗಳನ್ನು ಆರಿಸಿಕೊಳ್ಳುವ ರೀತಿಯಲ್ಲಿ ಕೌನ್ಸೆಲಿಂಗ್ ಮಾಡಲಾಗುವುದು, ಆದರೆ ವೈದ್ಯಕೀಯ ಸೀಟುಗಳನ್ನು ಪಡೆಯದವರು ಎಂಜಿನಿಯರಿಂಗ್‌ಗೆ ಹೋಗಬಹುದು" ಎಂದು ಅವರು ಹೇಳಿದರು. 

ಗಡುವಿನೊಳಗೆ ಪ್ರಕ್ರಿಯೆ ಪೂರ್ಣ ಎಂದ ಕೆಇಎ
ಇದೇ ವೇಳೆ ಹೊಸ ವ್ಯವಸ್ಥೆಯ ಭಾಗವಾಗಿ, ಸಿಇಟಿ ವಿದ್ಯಾರ್ಥಿಗಳು ಅಣಕು ಸುತ್ತಿನ (mock round) ಆಯ್ಕೆ ಪ್ರವೇಶವನ್ನು ಹೊಂದಿರುತ್ತಾರೆ. ಅಲ್ಲಿ ಅವರು ಯಾವ ಕಾಲೇಜಿಗೆ ಪ್ರವೇಶ ಬಯಸುತ್ತಾರೆ ಎಂದು ತಿಳಿಯುತ್ತದೆ. ಅಂತಹ ಎರಡು ಸುತ್ತುಗಳನ್ನು ಅನುಸರಿಸಿ, ಕ್ಯಾಶುಯಲ್ ಸುತ್ತಿನಲ್ಲಿ ಕೌನ್ಸೆಲಿಂಗ್  ನಡೆಯುತ್ತದೆ. ವೈದ್ಯಕೀಯ ಸಮಾಲೋಚನೆ ಸುತ್ತುಗಳ ನಡುವೆಯೇ ಇವೆಲ್ಲವೂ ನಡೆಯಲಿದೆ. 

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನವೆಂಬರ್ 30 ರೊಳಗೆ ಕೆಇಎ ಪ್ರವೇಶ ಪ್ರಕ್ರಿಯೆಯನ್ನು ಉತ್ತಮವಾಗಿ ಪೂರ್ಣಗೊಳಿಸುತ್ತದೆ ಎಂದು ರಾಜು ಭರವಸೆ ವ್ಯಕ್ತಪಡಿಸಿದರು. ನವೆಂಬರ್ ವೇಳೆಗೆ ಪ್ರಾರಂಭವಾಗಬೇಕಿದ್ದ ಎಂಜಿನಿಯರಿಂಗ್ ಕಾಲೇಜುಗಳ ತರಗತಿಗಳನ್ನು ಒಂದು ತಿಂಗಳವರೆಗೆ  ಮುಂದೂಡಲಾಗಿದ್ದು, ಈಗ ಡಿಸೆಂಬರ್ 1 ರೊಳಗೆ ಪ್ರಾರಂಭವಾಗುವ ನಿರೀಕ್ಷೆ ಇದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಪ್ರವೇಶ ಪ್ರಕ್ರಿಯೆಯನ್ನು ಮುಂದುವರಿಸಲು, ಕೆಇಎ ಡಾಕ್ಯುಮೆಂಟ್ ಪರಿಶೀಲನೆ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ತೆಗೆದುಕೊಂಡು ದಾಖಲೆಗಳನ್ನು ಪರಿಶೀಲಿಸಲು ಆದಾಯ  ಮತ್ತು ಸಾಮಾಜಿಕ ಕಲ್ಯಾಣದಂತಹ ಇತರ ರಾಜ್ಯ ಸರ್ಕಾರಿ ಇಲಾಖೆಗಳ ಸಹಾಯವನ್ನು ಕೋರಿತ್ತು. ಆದರೆ ಜಂಟಿ ಪ್ರವೇಶ ಪರೀಕ್ಷೆಯೊಂದಿಗೆ ಡಾಕ್ಯುಮೆಂಟ್ ಪರಿಶೀಲನೆ ಗೊಂದಲಕ್ಕೆ ತೆರೆ ಎಳೆಯುವ ಸಲುವಾಗಿ ಸೆಪ್ಟೆಂಬರ್ 2 ರಿಂದ ಸೆಪ್ಟೆಂಬರ್ 6 ರವರೆಗೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com