ಈ ಫೋಟೋ ಬಳಸಿ ಕಾಂಗ್ರೆಸ್ ಶಾಸಕಿ ಆಯುಧ ಪೂಜೆ: ಟ್ರೋಲ್ ಗೆ ಗುರಿಯಾದ ಸೌಮ್ಯ ರೆಡ್ಡಿ

ಆಯುಧ ಪೂಜೆ ವೇಳೆ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಅವರು ಬಳಸಿದ್ದ ಫೋಟೋದಿಂದಾಗಿ ಶಾಸಕಿ ಇದೀಗ ಸಖತ್ ಟ್ರೋಲ್ ಗೆ ಗುರಿಯಾಗಿದ್ದಾರೆ.

Published: 27th October 2020 03:03 PM  |   Last Updated: 27th October 2020 03:03 PM   |  A+A-


Sowmya Reddy

ಸೌಮ್ಯ ರೆಡ್ಡಿ

Posted By : Vishwanath S
Source : Online Desk

ಬೆಂಗಳೂರು: ಆಯುಧ ಪೂಜೆ ವೇಳೆ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಅವರು ಬಳಸಿದ್ದ ಫೋಟೋದಿಂದಾಗಿ ಶಾಸಕಿ ಇದೀಗ ಸಖತ್ ಟ್ರೋಲ್ ಗೆ ಗುರಿಯಾಗಿದ್ದಾರೆ. 

ಕಾಂಗ್ರೆಸ್ ಶಾಸಕರಾದ ಸೌಮ್ಯ ರೆಡ್ಡಿ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ತಮ್ಮ ಕಚೇರಿಯಲ್ಲಿ ಮಸೀದಿ, ಗಣೇಶ್ ಮತ್ತು ಏಸು ಮೂರು ಇರುವ ಫೋಟೋವನ್ನು ಬಳಸಿ ಆಯುಧ ಪೂಜೆ ನೆರವೇರಿಸಿದ್ದರು. ಈ ಫೋಟೋ ಇದೀಗ ವಿವಾದದ ಕಿಡಿ ಹೊತ್ತಿಸಿದೆ. 

ಮೂರು ಧರ್ಮಗಳ ದೇವರಿರುವ ಫೋಟೋವನ್ನು ಇಟ್ಟು ಅದಕ್ಕೆ ಹೂ ಮಾಲೆ ಹಾಕಿದ್ದಾರೆ. ಅಲ್ಲದೆ ಸೌಮ್ಯ ರೆಡ್ಡಿ ಅದಕ್ಕೆ ಆರತಿ ಬೆಳಗುತ್ತಾರೆ. ಈ ಎಲ್ಲಾ ಕೆಲಗಳಿಗೆ ತಂದೆ ರಾಮಲಿಂಗಾ ರೆಡ್ಡಿ ಅವರು ಸಾಥ್ ನೀಡಿದ್ದರು. ಈ ಫೋಟೋವನ್ನು ಸೌಮ್ಯ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ತಡ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಮೀರಾ ರಾಘವೇಂದ್ರ ಎಂಬುವರು ಟ್ವೀಟ್ ಮಾಡಿದ್ದರು. 

ಮೀರಾ ರಾಘವೇಂದ್ರ ಅವರು ಟ್ವೀಟ್ ನಲ್ಲಿ ಈ ತರದ ಆಚರಣೆ ಅಪ್ಪಾ ಮಗಳಿಗೆ ಬೇಕಿತ್ತಾ? ಇಸ್ಲಾಂನಲ್ಲಿ ಮಂಗಳಾರತಿಗೆ ಅವಕಾಶ ಇದ್ಯಾ? ಇದನ್ನು ಮುಸ್ಲಿಂರು ಒಪ್ಪುತ್ತಾರಾ? ಅಥವಾ ವಿರೋಧಿಸುತ್ತಾರಾ? ಅಥವಾ ಕಾಂಗ್ರೆಸಿಗರು ಏನೇ ಮಾಡಿದ್ರು ಓಕೆ ಎನ್ನುವರೇ? ಬಾಯಿ ಬಿಟ್ಟು ಮೌಲ್ವಿಗಳು ಉತ್ತರಿಸಿ ಎಂದು ಪ್ರಶ್ನಿಸಿದ್ದರು. 

ಈ ಟ್ವೀಟ್ ಭಾರೀ ವಾದ ಪ್ರತಿವಾದಕ್ಕೆ ಕಾರಣವಾಗಿತ್ತು. ಅನೇಕರು ಇಸ್ಲಾಂನಲ್ಲಿ ಮೂರ್ತಿ ಪೂಜೆ ಇಲ್ಲ. ಇದು ಭಾರೀ ನಾಟಕ ಎಂದು ಟ್ವೀಟಿಸಿದ್ದರು. ಇನ್ನು ಕೆಲವರು ಇದು ಜಾತ್ಯಾತೀತ ಭಾರತ ಇಲ್ಲಿ ಅವರವರು ತಮ್ಮ ಇಚ್ಛೆಯಂತೆ ಆಚರಣೆ ಮಾಡಬಹುದು ಎಂದು ಮೀರಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

Stay up to date on all the latest ರಾಜ್ಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp