ಬಳ್ಳಾರಿ: ಹೊಲದಲ್ಲಿ ಬೆಳೆದಿದ್ದ 1.75ಲಕ್ಷ ರೂ ಮೌಲ್ಯದ ಗಾಂಜಾ ವಶ, ಓರ್ವನ ಬಂಧನ

ಮೆಣಸಿನಕಾಯಿ ಬೆಳೆಯೊಂದಿಗೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ರೈತನೋರ್ವನನ್ನು ಪೊಲೀಸರು ಬಂಧಿಸಿ 1.75ಲಕ್ಷ ರೂ ಮೌಲ್ಯದ ಗಾಂಜಾ ಬೆಳೆ ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿ: ಹೊಲದಲ್ಲಿ ಬೆಳೆದಿದ್ದ 1.75ಲಕ್ಷ ರೂ ಮೌಲ್ಯದ ಗಾಂಜಾ ವಶ, ಓರ್ವನ ಬಂಧನ

ಬಳ್ಳಾರಿ: ಮೆಣಸಿನಕಾಯಿ ಬೆಳೆಯೊಂದಿಗೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ರೈತನೋರ್ವನನ್ನು ಪೊಲೀಸರು ಬಂಧಿಸಿ 1.75ಲಕ್ಷ ರೂ ಮೌಲ್ಯದ ಗಾಂಜಾ ಬೆಳೆ ವಶಪಡಿಸಿಕೊಂಡಿದ್ದಾರೆ.

ಕರಿಲಿಂಗಪ್ಪ ತಂದೆ ಪಂಪಣ್ಣ ಬಂಧಿತ ವ್ಯಕ್ತಿ.

ಸಿರುಗುಪ್ಪ ಪೊಲೀಸ್ ಠಾಣೆಯ ಅಧಿಕಾರಿಗಳಾದ ಸಿಪಿಐ ಟಿಆರ್ ಪವಾರ ಹಾಗೂ ಪಿಎಸ್ ಐ ಗಂಗಪ್ಪ ಬುರ್ಲಿ ಮತ್ತು ಸಿಬ್ಬಂದಿಗಳ ತಂಡವು ಬುಧವಾರ ಖಚಿತ ಮಾಹಿತಿ ಮೇರೆಗೆ ಸಿರುಗುಪ್ಪ ತಾಲ್ಲೂಕಿನ ರಾರವಿಯ ಕರಿಲಿಂಗಪ್ಪ ತಂದೆ ಪಂಪಣ್ಣ ಎಂಬುವವರ ಹೊಲದ ಮೇಲೆ ದಾಳಿ ನಡೆಸಿದೆ. ಈ ವೇಳೆ 13 ಗಾಂಜಾ ಗಿಡ ಸೇರಿದಂತೆ ಒಟ್ಟು 35 ಕೆ.ಜಿ 200 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಬಳ್ಳಾರಿ ಜಿಲ್ಲಾ ಎಸ್​ಪಿ ಅವರ ನಿರ್ದೇಶನದ ಮೇರೆಗೆ ದಾಳಿ ನಡೆದಿದ್ದು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com