ಟಿಇಟಿ ಪಾಸ್ ಆದವರಿಗೊಂದು ಸಿಹಿ ಸುದ್ದಿ: ಅರ್ಹತಾ ಪ್ರಮಾಣಪತ್ರ ಜೀವಿತಾವಧಿವರೆಗೆ ಮಾನ್ಯ!

ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಲು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಉತ್ತೀರ್ಣರಾದವರ ಪ್ರಮಾಣಪತ್ರದ ಸಿಂಧುತ್ವ ಅವಧಿಯನ್ನು ಜೀವಿತಾವಧಿವರೆಗೆ ವಿಸ್ತರಿಸಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಲು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಉತ್ತೀರ್ಣರಾದವರ ಪ್ರಮಾಣಪತ್ರದ ಸಿಂಧುತ್ವ ಅವಧಿಯನ್ನು ಜೀವಿತಾವಧಿವರೆಗೆ ವಿಸ್ತರಿಸಲಾಗಿದೆ. 

ಈ ಗಿರುವ 7 ವರ್ಷದಿಂದ ಜೀವಿತಾವಧಿವರೆಗೆ ವಿಸ್ತರಿಸಲು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು (ಎನ್'ಸಿಟಿಇ) ತೀರ್ಮಾನ ಕೈಗೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಶಿಕ್ಷಕರಾಗಲು ಟಿಇಟಿಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ ಮಾಡಲಾಗಿದ್ದು, ಒಮ್ಮೆ ಉತ್ತೀರ್ಣರಾದರೆ 7 ವರ್ಷಗಳವರೆಗೆ ಮಾತ್ರ ಮಾನ್ಯತೆ ಇರುತ್ತಿತ್ತು. ಆದರೆ ಇತ್ತೀಚೆಗೆ ನಡೆದ ಎನ್ ಸಿಟಿ 50ನೇ ಸಾಮನ್ಯ ಸಭೆಯಲ್ಲಿ ಟಿಇಟಿ ಪ್ರಮಾಣ ಪತ್ರದ ಮಾನ್ಯತೆಯ ಅವಧಿಯನ್ನು ಜೀವಿತಾವಧಿಯವರೆಗೆ ವಿಸ್ತರಿಸಿದೆ.

ರಾಜ್ಯದಲ್ಲಿ ಇತ್ತೀಚಿಗೆ ಟಿಇಟಿ ಪರೀಕ್ಷೆ ನಡೆದಿದ್ದು, 2 ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಹೊಸ ನಿಯಮ ಈ ವರ್ಷದಿಂದಲೇ ಅನ್ವಯವಾಗುವ ಸಾಧ್ಯತೆಗಳಿವೆ. 

"ಶಿಕ್ಷಕರ ಕೆಲಸವನ್ನು ಬಯಸುವವರಿಗಾಗಿ ಏಳು ವರ್ಷಗಳ ಸಿಂಧುತ್ವವನ್ನು ನೀಡಲಾಗಿತ್ತು. ನೇಮಕಗೊಂಡ ಶಿಕ್ಷಕರು ಮತ್ತೆ ಮತ್ತೆ ಪರೀಕ್ಷೆ ಬರೆಯುವುದು ಸಮಸ್ಯಾತ್ಮಕವಾಗಿದ್ದು ಎಂದು ಹೇಳಿರುವ ಶಿಕ್ಷಕರ ವೃಂದ ಇದೀಗ ಈ ನಿರ್ಧಾರವನ್ನು ಸ್ವಾಗತಿಸಿದೆ. 

ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಟಿಇಟಿ ಕಡ್ಡಾಯವಾಗಿದೆ. ಆದರೆ, ಖಾಸಗಿ ಶಾಲೆಗಳಲ್ಲಿ ಇದಕ್ಕೆ ಏಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com