ರಾಜಕಾಲುವೆ ಒತ್ತುವರಿ ಕುರಿತು ಸರ್ಕಾರ ಸ್ವಲ್ಪ ಕಠಿಣ ನಿರ್ಧಾರ ಮಾಡಬೇಕು: ಹೆಚ್.ಡಿ. ದೇವೇಗೌಡ

ರಾಜಕಾಲುವೆ ಒತ್ತುವರಿ ಕುರಿತು ಸರ್ಕಾರ ಸ್ವಲ್ಪ ಕಠಿಣ ನಿರ್ಧಾರ ಮಾಡಬೇಕಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಆಗ್ರಹಿಸಿದ್ದಾರೆ. 

Published: 29th October 2020 07:09 AM  |   Last Updated: 29th October 2020 12:35 PM   |  A+A-


Devagowda

ದೇವೇಗೌಡ

Posted By : Manjula VN
Source : The New Indian Express

ಬೆಂಗಳೂರು: ರಾಜಕಾಲುವೆ ಒತ್ತುವರಿ ಕುರಿತು ಸರ್ಕಾರ ಸ್ವಲ್ಪ ಕಠಿಣ ನಿರ್ಧಾರ ಮಾಡಬೇಕಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಆಗ್ರಹಿಸಿದ್ದಾರೆ. 

ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಲ್ಲಿ ಭಾರೀ ಮಳೆಯಾಗಿ ಭಾರೀ ಹಾನಿ ಸಂಭವಿಸಿದೆ.ಇದಕ್ಕೆ ಕಾರಣ ಎನು ಅಂತ ಎಲ್ಲರಿಗೂ ಗೊತ್ತಿದೆ. ರಾಜಾಕಾಲುವೆ ಒತ್ತುವರಿ ಇದಕ್ಕೆ ಕಾರಣವಾಗಿದೆ. ಒತ್ತುವರಿ ಬಗ್ಗೆ ತಜ್ಞ ರಾದ ಲಕ್ಷ್ಮಣ್ ರಾವ್ ಸಮಿತಿಯ ವರದಿಯಲ್ಲಿ ಪ್ರಸ್ತಾಪ ಆಗಿದೆ. ಅವರ ವರದಿ ಸರ್ಕಾರದ ಬಳಿ ಇದೆ. ಇಂತಹ ಅನಾಹುತ ತಪ್ಪಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆದರೆ ಸರ್ಕಾರ ವರದಿ ಜಾರಿ ಬದಲು ಸುಮ್ಮನೆ ಮೊಸಳೆ‌ ಕಣ್ಣಿರು ಹಾಕುವ ಕೆಲಸ ಯಾರು ಮಾಡಬಾರದು ಎಂದು ಹೇಳಿದ್ದಾರೆ. 

ಒತ್ತುವರಿ ತೆರವುಗೊಳಿಸುವುದ ಬಗ್ಗೆ ಸರ್ಕಾರ ಕಠಿಣ ನಿರ್ಧಾರ ಮಾಡಬೇಕಿದೆ. ಒತ್ತುವರಿ ವಿಚಾರದಲ್ಲಿ ಅನೇಕ ರಾಜಕಾರಣಿಗಳು ಇರಬಹುದು. ಕೆರೆಗಳ‌ ಒತ್ತುವರಿ ಬಗ್ಗೆ ಸಹ ವರದಿಯಲ್ಲಿ ಪ್ರಸ್ತಾಪ ಆಗಿದೆ. ಕಂದಾಯ ಸಚಿವರು ಹೊಸ ಕಾಯ್ದೆ ತರುತ್ತೇನೆ ಅಂತ ಹೇಳ್ತಿದ್ದಾರೆ. ಹೀಗಾಗಿ ಬಿಜೆಪಿ. ಕಾಂಗ್ರೆಸ್ ಬಗ್ಗೆ ಆರ್ ಆರ್ ನಗರದ ಜನ ಯೋಚನೆ ಮಾಡಬೇಕಿದೆ ಎಂದು ಅವರು ತಿಳಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೆರೆ ಹಾವಳಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇನೆ. ರಾಜಕಾಲುವೆಗಳು ಒತ್ತುವರಿಯಾಗದಂತೆ ಕೆರೆಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇವೆ. ಇಂದು ಎರಡು ರಾಷ್ಟೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಟೀಕೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವುಂಟಾ ಗುತ್ತದೆ. ಜನರ ಸಮಸ್ಯೆ ಬಗ್ಗೆ ಇವರುಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲ. ನಾನು ಈಗ ಇದರ ಬಗ್ಗೆ ಮಾತನಾಡೋದಿಲ್ಲ ಜನರೇ ತೀರ್ಮಾನ ಮಾಡಬೇಕಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Stay up to date on all the latest ರಾಜ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp