ಬೆಂಗಳೂರಿನ ಹೊಟೆಲ್ ನಲ್ಲಿ ರೈಸ್ ಸ್ಟೀಮ್ ಕುಕ್ಕರ್ ಸ್ಫೋಟ, ಓರ್ವ ವಲಸೆ ಕಾರ್ಮಿಕನ ಸಾವು!

ಸಿಲಿಕಾನ್ ಸಿಟಿಯ ಹೊಟೆಲ್ ವೊಂದರಲ್ಲಿ ರೈಸ್ ಸ್ಟೀಮ್ ಕುಕ್ಕರ್ ಸ್ಫೋಟಗೊಂಡ ಪರಿಣಾಮ ಹೊಟೆಲ್ ನ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

Published: 29th October 2020 02:07 PM  |   Last Updated: 29th October 2020 02:07 PM   |  A+A-


explosion

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : The New Indian Express

ಬೆಂಗಳೂರು: ಸಿಲಿಕಾನ್ ಸಿಟಿಯ ಹೊಟೆಲ್ ವೊಂದರಲ್ಲಿ ರೈಸ್ ಸ್ಟೀಮ್ ಕುಕ್ಕರ್ ಸ್ಫೋಟಗೊಂಡ ಪರಿಣಾಮ ಹೊಟೆಲ್ ನ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಬೆಂಗಳೂರಿನ ರಿಚ್ಮಂಡ್ ವೃತ್ತದಲ್ಲಿರುವ ಹೊಟೆಲ್ ನಲ್ಲಿ ರೈಸ್ ಸ್ಟೀಮ್ ಕುಕ್ಕರ್ ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಒಬ್ಬ ನೌಕರ ಮೃತಪಟ್ಟಿದ್ದು ಮತ್ತೊಬ್ಬ ನೌಕರ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತಪಟ್ಟಿರುವ ನೌಕರನನ್ನು ಅಸ್ಸಾಂ ಮೂಲದ ಮನೋಜ್ ಅಲಿಯಾಸ್ ಶಿವ ಎಂದು ಗುರುತಿಸಲಾಗಿದ್ದು,  ಗಾಯಗೊಂಡಿರುವ ನೌಕರರನ್ನು ಪ್ರದೀಪ್, ಮೋಹನ್ ಮತ್ತು ನವೀನ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಈ ಪೈಕಿ ಪ್ರದೀಪ್ ಸ್ಥಿತಿ ಕೂಡ ಚಿಂತಾಜನಕವಾಗಿದೆಯೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರಿಚ್ಮಂಡ್ ವೃತ್ತದಲ್ಲಿರುವ ನ್ಯೂ ಉಡುಪಿ ಉಪಾಹಾರ್ ಹೊಟೆಲ್ ನಲ್ಲಿ ನಿನ್ನೆ ರಾತ್ರಿ ಸುಮಾರು 8.15ರ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ರಾತ್ರಿ ಊಟಕ್ಕಾಗಿ ಕಾರ್ಮಿಕರು ಅನ್ನ ಮಾಡುತ್ತಿದ್ದರು. ಈ ವೇಳೆ ಅನ್ನ ಮಾಡುವ ಸ್ಟೀಮರ್ ಆಕಸ್ಮಿಕವಾಗಿ ಸ್ಪೋಟಗೊಂಡಿದೆ. ಸ್ಟೀಮರ್ ಸ್ಫೋಟಗೊಂಡ ವೇಳೆ  ಸುಮಾರು 60 ಮಂದಿ ಗ್ರಾಹಕರಿದ್ದರು. ಸ್ಫೋಟವಾಗುತ್ತಿದ್ದಂತೆಯೇ ಎಲ್ಲರೂ ಹೊರಗೆ ಓಡಿ ಬಂದರು. ಕೂಡವೇ ಅಗ್ನಿಶಾಮಕ ದಳಕ್ಕೆ ವಿಚಾರ ತಿಳಿಸಿದ್ದು, 2 ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿತು. ಈ ಸಂಬಂಧ ಆಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp