ಟಿಬಿ ಜಯಚಂದ್ರಗೆ ಮುಳುವಾಗಲಿದ್ಯಾ 'ಮೊದಲೂರು ಕೆರೆ'; ದಾಳವಾಗಿ ಬಳಸಿಕೊಳ್ಳಲಿದ್ಯಾ ಬಿಜೆಪಿ?

ಈ ಬಾರಿ ಉತ್ತಮ ಮಳೆಯಾದ ಕಾರಣ ಬೆಳೆಯಾಗಿದೆ,  ಆದರೆ ಶಿರಾ ಕ್ಷೇತ್ರದ ರೈತರಿಗೆ ಇದು ಸಂತಸ ತಂದಿಲ್ಲ. ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿಲ್ಲ ಜೊತೆಗೆ ನೀರಾವರಿ ಸೌಲಭ್ಯವೂ ಸರಿಯಾಗಿರದ ಕಾರಣ ರೈತರು ಬೇಸರಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು: ಈ ಬಾರಿ ಉತ್ತಮ ಮಳೆಯಾದ ಕಾರಣ ಬೆಳೆಯಾಗಿದೆ,  ಆದರೆ ಶಿರಾ ಕ್ಷೇತ್ರದ ರೈತರಿಗೆ ಇದು ಸಂತಸ ತಂದಿಲ್ಲ. ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿಲ್ಲ ಜೊತೆಗೆ ನೀರಾವರಿ ಸೌಲಭ್ಯವೂ ಸರಿಯಾಗಿರದ ಕಾರಣ ರೈತರು ಬೇಸರಗೊಂಡಿದ್ದಾರೆ.

ರೈತರು ಸದ್ಯ ಬೆಳೆ ಕಟಾವಿನ ನಂತರ ಕೆಲಸಗಳಲ್ಲಿ ನಿರತರಾಗಿದ್ದಾರೆ. ಅವರಿಗೆ ನವೆಂಬರ್ 3 ರಂದು ನಡೆಯುವ ಚುನಾವಣೆಯ ಆತಂಕವಿಲ್ಲ.ಕರಾಜೀವನಹಳ್ಳಿ ಟೋಲ್ ಗೇಟ್‌ನಲ್ಲಿರುವ ಪೇರಲ ಹಣ್ಣು ಮಾರಾಟಗಾರ ಮಂಜಣ್ಣನಿಂದ ತೊಗರಗುಂಟೆ ಗ್ರಾಮದ ರೈತನವರೆಗೆ ಎಲ್ಲರಿಗೂ ನೀರಾವರಿಯದ್ದೇ ಸಮಸ್ಯೆಯಾಗಿದೆ.  ನೀರಾವರಿ ಯೋಜನೆ   ಅನುಷ್ಠಾನಗೊಂಡರೇ ಉತ್ತಮ ಬೆಳೆಯೂ ಬರುತ್ತದೆ ಎಂದು ರೈತ ವೀರಕ್ಯಾತಪ್ಪ ತಿಳಿಸಿದ್ದಾರೆ. ಹಣ್ಣು ಮತ್ತು ತರಕಾರಿ ಮಾರಾಟಗಾರರು ಕೂಡ ಕೃಷಿ ಮಾಡಲು ಮುಂದಾಗಿದ್ದಾರೆ.

ಕ್ಷೇತ್ರದ ಅತಿದೊಡ್ಡ ಮೊದಲೂರು ಕೆರೆಯಲ್ಲಿ ನೀರು ಖಾಲಿಯಾಗಿದ್ದು, ರಾಜಕಾರಣಿಗಳನ್ನು  ಈ ಭಾಗದ ಜನರು ನಿಂದಿಸುತ್ತಿದ್ದಾರೆ. ಹೇಮಾವತಿ ನದಿ ನೀರು ಈ ಕೆರೆಗೆ ತಲುಪುತ್ತಿಲ್ಲ, 

ಹೇಮಾವತಿ ನದಿ ಯೋಜನೆಯ ವಿಷಯವು ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ಅವರನ್ನು ಮತ್ತೆ ಕಾಡುತ್ತಿದ್ದು,  ಜಯಚಂದ್ರ ಅವರು ಹೇಮಾವತಿ ನದಿ ನೀರನ್ನು ಮೊದಲೂರು ಕೆರೆಗೆ ಹರಿಸಿದ್ದರೆ ಅವರು ನಮ್ಮ ಪ್ರಶ್ನಾತೀತ ನಾಯಕರಾಗುತ್ತಿದ್ದರು ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.  ಇದೇ ವಿಷಯವನ್ನು ಮುಖ್ಯವಾಗಿ ಪ್ರಸ್ತಾಪಿಸುತ್ತಿರುವ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ.

ತುಮಕೂರು ಮತ್ತು ಶಿರಾಗಳಿಗೆ ಹೇಮಾವತಿ ನದಿ ನೀರು ತರುವಲ್ಲಿ ಜಯಚಂದ್ರ ಪ್ರಮುಖ ಸಾಧನವಾಗಿದ್ದರು. ಆದರೆ ಕೆರೆಗೆ ನೀರು ತರುವಲ್ಲಿ ಅವರು ವಿಫಲವಾಗಿದ್ದಾರೆ ಎಂಬುದು ರೈತರ ದುಃಖವಾಗಿದೆ.

ಮೊದಲೂರು ಕೆರೆಗೆ ಹೇಮಾವತಿ ನದಿಯಿಂದ ನೀರನ್ನು ಹರಿಸುವುದಾಗಿ ಸಿಎಂ ಪುತ್ರ ಬಿವೈ ವಿಜಯೇಂದ್ರ ಕುಂಚಟಿಗ ಸಮುದಾಯದ ಧಾರ್ಮಿಕ ಮುಖ್ಯಸ್ಥ ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ  ಭರವಸೆ ನೀಡಿದ್ದಾರೆ.

ತುಮಕೂರು ಭಾಗದ ಪ್ರಮುಖ ಬೆಳೆ ಕಡಲೆಕಾಯಿ, ಮಧ್ಯವರ್ತಿಗಳ ಹಾವಳಿಯಿಂದ ಸರಿಯಾದ ಬೆಲೆ ಸಿಗುತ್ತಿಲ್ಲ, ಕ್ವಿಂಟಾಲ್ ಗೆ 3,500 ರು ಮಾತ್ರ ಸಿಗುತ್ತಿದೆ. ನಮ್ಮ ಬೆಳೆಗೆ 4,500 ರು ಸಿಕ್ಕರೆ ನಮಗೆ ಸ್ವಲ್ಪ ಲಾಭವಾಗುತ್ತದೆ ಎಂದು ರೈತರು ಅಭಿಪ್ರಾಯ ಪಟ್ಟಿದ್ದಾರೆ. ದರ್ಗಾ ನಿರ್ಮಾಣ ಮಾಡುವ ಕಾರಣದಿಂದ ಕಾಂಗ್ರೆಸ್ ಹಿಂದೂ ವ್ಯಾಪಾರಸ್ಥರನ್ನು ಕಡೆಗಣಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com