ಕರ್ನಾಟಕ: ಭದ್ರಾ ಅಭಯಾರಣ್ಯದಲ್ಲಿ ಹುಲಿ ಸಾವು, ಕಾದಾಟ ಶಂಕೆ

ಸುಮಾರು 5 ವರ್ಷದ ಹೆಣ್ಣು ಹುಲಿಯೊಂದು ಭದ್ರಾ ವನ್ಯಜೀವಿ ವಿಭಾಗದ ಹೆಬ್ಬೆ ವಲಯದ ತೇಗೂರುಗುಡ್ಡ ವ್ಯಾಪ್ತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಿಕ್ಕಮಗಳೂರು: ಸುಮಾರು 5 ವರ್ಷದ ಹೆಣ್ಣು ಹುಲಿಯೊಂದು ಭದ್ರಾ ವನ್ಯಜೀವಿ ವಿಭಾಗದ ಹೆಬ್ಬೆ ವಲಯದ ತೇಗೂರುಗುಡ್ಡ ವ್ಯಾಪ್ತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. 

ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಹುಲಿ ಮೃತದೇಹ ಪತ್ತೆಯಾಗಿದ್ದು, 4-5 ದಿನಗಳ ಹಿಂದೆ ಸತ್ತಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಬೇರೊಂದು ಹುಲಿಯೊಂದಿಗೆ ಕಾದಾಟ ನಡೆಸಿದ ವೇಳೆ ಗಾಯಗೊಂಡು ಮೃತಪಟ್ಟಿರಬಹುದೆಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಭದ್ರಾ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ತಾಕತ್ ಸಿಂಗ್ ರಣಾವತ್ ಅವರು ತಿಳಿಸಿದ್ದಾರೆ.

ಮಂಗಳವಾರ ಹುಲಿ ಶವ ಪತ್ತೆಯಾಗಿತ್ತು. ಶಿವಮೊಗ್ಗದಿಂದ ಪಶುವೈದ್ಯರು ಸ್ಥಳಕ್ಕೆ ಬರುವ ಹೊತ್ತಿಗೆ ಸಂಜೆ 6 ಗಂಟೆಯಾಗಿತ್ತು. ಕಾರ್ಯವಿಧಾನಗಳ ಮೂಲಕ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹುಲಿಯ ಶವದ ಮೇಲೆ ಹಲ್ಲುಗಳ ಗುರುತುಗಳು ಪತ್ತೆಯಾಗಿವೆ ಎಂದಿದ್ದಾರೆ. 

ಮಿಲನ ಕ್ರಿಯೆ ಮೂಲಕ ಸಾಮಾನ್ಯವಾಗಿ ತನ್ನ ಸಂತತಿಯನ್ನು ಬೆಳೆಸಲು ಹಾಗೂ ಪ್ರಾಬಲ್ಯ ಸಾಧಿಸಲು ಈ ರೀತಿಯ ಕಾದಾಟ ನಡೆಸುವುದು ಸಾಮಾನ್ಯ. ಕಳೆದ ಎರಡು ವರ್ಷಗಳಲ್ಲಿ ಎರಡು ಹುಲಿಗಳು ಸಾವನ್ನಪ್ಪಿವೆ.  2019 ರಲ್ಲಿ ಪತ್ತೆಯಾಗಿದ್ದ ಹುಲಿಯ ಶವ ಸ್ಥಳದಿಂದ 5 ಕಿ.ಮೀ ದೂರದಲ್ಲಿಯೇ ಹೆಣ್ಣು ಹುಲಿಯ ಶವ ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com