ಐವರು ಕಳ್ಳ ಬೇಟೆಗಾರರು, ಎರಡು ತಲೆ ಹಾವಿನ ಉರಗ ವಶಕ್ಕೆ

ಎರಡು ತಲೆ ಹಾವಿನ ಒಂದು ಉರಗದೊಂದಿಗೆ ಐವರು ಕಳ್ಳ ಬೇಟೆಗಾರರನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಎರಡು ತಲೆ ಹಾವಿನ ಒಂದು ಉರಗದೊಂದಿಗೆ ಐವರು ಕಳ್ಳ ಬೇಟೆಗಾರರನ್ನು ಬಂಧಿಸಲಾಗಿದೆ.

ಬಂಧಿತರನ್ನು ದೊಡ್ಡಯ್ಯ, ಹೇಮಂತ್, ಯೋಗೇಶ್, ರವಿ ಮತ್ತು ಭರಮಗೌಡ ಎಂದು ಗುರುತಿಸಿರುವುದಾಗಿ ಅರಣ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಆರೋಪಿಗಳು ಹಾವನ್ನು ಕಾರಿನಲ್ಲಿ ಕಳ್ಳಸಾಗಣೆ ಮಾಡುತ್ತಾ ಮೈಸೂರಿಗೆ ಹೊರಟಿದ್ದಾರೆ ಎಂಬ ಸುಳಿವಿನ ಮೇರೆಗೆ ಇಲಾಖೆ ಸಿಬ್ಬಂದಿ ಸಿದ್ದಲಿಂಗಪುರ ಬಳಿ  ಕಾರನ್ನು ತಡೆದು ಸರೀಸೃಪವನ್ನು ವಶಪಡಿಸಿಕೊಂಡಿದ್ದಾಗಿ ಡಿಸಿಎಫ್ ಪೂವಯ್ಯ ತಿಳಿಸಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ಕಳ್ಳಸಾಗಾಣಿಕೆ ಮಾಡುತ್ತಿದ್ದ ಮಣ್ಣುಮುಕ್ಕ ಹಾವನ್ನು ರಕ್ಷಿಸಿರುವ ಅರಣ್ಯ ಸಂಚಾರಿ ದಳದ ಪೊಲೀಸರು, ಇದಕ್ಕೆ ಸಂಬಂಧಿಸಿದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಮಣ್ಣುಮುಕ್ಕ ಹಾವನ್ನು ಮಾರಾಟ ಮಾಡಲೆಂದು ಕಾರಿನಲ್ಲಿ ಬರುತ್ತಿದ್ದಾಗ,  ಸಿದ್ದಲಿಂಗಪುರದ ಸಮೀಪ ಅರಣ್ಯ ಸಂಚಾರಿ ದಳದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಲಾಯಿತು. ಈ ಹಾವನ್ನು ಮನೆಯಲ್ಲಿ ಇಟ್ಟುಕೊಂಡರೆ ಕೋಟ್ಯಾಧಿಪತಿಗಳಾಗಬಹುದೆಂದು ದುಷ್ಕರ್ಮಿಗಳು ಸುಳ್ಳು ಸುದ್ದಿ ಹಬ್ಬಿಸಿ, ಮಣ್ಣುಮುಕ್ಕ ಹಾವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಅರಣ್ಯ  ಸಂಚಾರಿ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಮಣ್ಣುಮುಕ್ಕ ಹಾವು ರಕ್ಷಣಾ ಕಾರ್ಯಾಚರಣೆಯನ್ನು ಆರ್‌ಎಫ್‌ಒ ವಿವೇಕ್ ನೇತೃತ್ವದಲ್ಲಿ ಸಿಬ್ಬಂದಿಯಾದ ಲಕ್ಷ್ಮೀಶ, ಮೋಹನ್, ಮಹಂತೇಶ್ ನಾಯಕ, ಕೊಟ್ರೇಶ್, ರವಿಕುಮಾರ್, ರವಿನಂದನ್, ಮಧು, ಪುಟ್ಟಸ್ವಾಮಿ, ವಿರೂಪಾಕ್ಷ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com