ಆರ್'ಆರ್'ನಗರ ಉಪಚುನಾವಣೆ: ಹಿರಿಯ ನಾಗರೀಕರಿಗೆ ಮನೆಯಿಂದಲೇ ಮತ ಹಾಕಲು ಅವಕಾಶ!

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನ.3 ರಂದು ಉಪ ಚುನಾವಣೆ ನಡೆಯಲಿದೆ. ಕೊರೋನಾ ಸಾಂಕ್ರಾಮಿಕ ರೋಗ ಭೀತಿ ಹಿನ್ನೆಲೆಯಲ್ಲಿ ಹಿರಿಯ ನಾಗರೀಕರಿಗೆ ಮನೆಯಿಂದಲೇ ಮತಹಾಕಲು ಬಿಬಿಎಂಪಿ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನ.3 ರಂದು ಉಪ ಚುನಾವಣೆ ನಡೆಯಲಿದೆ. ಕೊರೋನಾ ಸಾಂಕ್ರಾಮಿಕ ರೋಗ ಭೀತಿ ಹಿನ್ನೆಲೆಯಲ್ಲಿ ಹಿರಿಯ ನಾಗರೀಕರಿಗೆ ಮನೆಯಿಂದಲೇ ಮತಹಾಕಲು ಬಿಬಿಎಂಪಿ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಬಿಎಂಬಿ ಆಯುಕ್ತ ಮಂಜುನಾಥ ಪ್ರಸಾದ್ ಅವರು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಹಿರಿಯ ನಾಗರೀಕರು ಹಾಗೂ ಅಂಗವಿಕಲರು ಮತದಾನ ನಡೆಯುವ ಕ್ಷೇತ್ರಕ್ಕೇ ಬಂದು ಮತಹಾಕಬೇಕಿಲ್ಲ. ಇದಕ್ಕಾಗಿ ಈಗಗಾಲೇ ತಂಡವೊಂದನ್ನು ರಚಿಸಲಾಗಿದ್ದು. ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಇಂತಹವರ ಮನೆಗಳಿಗೆ ತೆರಳಿ ಮತಪತ್ರಗಳನ್ನು ಸ್ವೀಕರಿಸಲಿದ್ದಾರೆ. 

ಈ ಕಾರ್ಯಾಚರಣೆ ಗುರುವಾರದಿಂದ ಆರಂಬವಾಗಿದ್ದು, ಶನಿವಾರ ಪೂರ್ಣಗೊಳ್ಳಲಿದೆ. ಈಗಾಗಲೇ ಹಿರಿಯ ನಾಗರೀಕರು ಹಾಗೂ ಅಂಕವಿಕಲರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ 488 ಮಂದಿ ಹಿರಿಯ ನಾಗರೀಕರು ಹಾಗೂ 33 ಮಂದಿ ಅಂಗವಿಕಲರು ಇರುವುದಾಗಿ ತಿಳಿದುಬಂದಿದೆ. ಮತದಾನ ಮಾಡುವ ಸಂಪೂರ್ಣ ವಿಡಿಯೋವನ್ನು ಚಿತ್ರೀಕರಿಸಲಾಗುತ್ತದೆ. ಮತದಾನ ಮಾಡಿದ್ದಕ್ಕಾಗಿ ಮತದಾರರಿಗೆ ರಶೀದಿಯನ್ನೂ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಸೋಂಕಿತರಿಗೂ ಮತದಾನಕ್ಕೆ ಅವಕಾಶ
ಇನ್ನು ಕೊರೋನಾ ಸೋಂಕಿತರು, ಪ್ರಾಥಮಿಕ ಮತ್ತು ಪರೋಕ್ಷ ಸಂಪರ್ಕಿತರು ಹಾಗೂ ಸೋಂಕಿನ ಶಂಕೆ ಇರುವ ಮತದಾರರಿಗೆ ಸಂಜೆ 5 ರಿಂದ 6ಗಂಟೆಯವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸೋಂಕಿತರನ್ನು ಮತಗಟ್ಟೆಗೆ ಕರೆತರಲು 90 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. 

ಈಗಾಗಲೇ ಸೋಂಕು ಪೀಡಿತ ರೋಗಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದ್ದು. ಮತದಾನದ ದಿನದಂದು ಸೋಂಕಿತರು ಮತದಾನದಿಂದ ವಂಚಿತರಾಗಬಾರದುಎಂಬ ಕಾರಣಕ್ಕೆ ಅವರಿಗೆ ನ.3ರಂದು ಸಂಜೆ 5ರಿಂದ 6ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ರೋಗಿಗಲನ್ನು ಆಸ್ಪತ್ರೆ ಹಾಗೂ ಮನೆಯಿಂದ ಮತಗಟ್ಟೆಗೆ ಕರೆತರುವುದಕ್ಕೆ 90 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಪಿಪಿಇ ಕಿಟ್, ಮಾಸ್ಕ್ ಧರಿಸಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬೇಕು ಎಂದು ಹೇಳಇದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com