ವಿದೇಶದಿಂದ ಕೋರಿಯರ್ ಮೂಲಕ ಮಾದಕ ವಸ್ತು ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿ ಸಿಸಿಬಿ ಬಲೆಗೆ

ವಿದೇಶದಿಂದ ಮಾದಕ ವಸ್ತುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಕಚೇರಿ
ಸಿಸಿಬಿ ಕಚೇರಿ

ಬೆಂಗಳೂರು: ವಿದೇಶದಿಂದ ಮಾದಕ ವಸ್ತುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಾರ್ಥಕ್ ಆರ್ಯ ಬಂಧಿತ ಟೆಕ್ಕಿ. ವಿದೇಶದಿಂದ ಮಾದಕವಸ್ತು ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಸಾರ್ಥಕ್ ಆರ್ಯ ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಂಧಿತನ ಮನೆಯಿಂದ 4.99 ಗ್ರಾಂ ಎಲ್ ಎಸ್ ಡಿ , ಎಮ್‌ ಹೆಚ್  ಸಿರೀಸ್ ಪ್ಯಾಕೆಟ್ ಸ್ಕೇಲ್, ಬ್ರೌನ್ ಸ್ಮೋಕ್ ಪೇಪರ್ ಪ್ಯಾಕೆಟ್, ಒಸಿಬಿ ಸ್ಲಿಮ್ ಸ್ಮೋಕ್ ಪೇಪರ್ ಪ್ಯಾಕೆಟ್, ರಾ ಟಿಪ್ಸ್ ಸ್ಮೋಕ್ ಪೇಪರ್ ಪ್ಯಾಕೆಟ್, 100ಎಂಎಲ್ ಕೆಮಿಕಲ್ ಆಯಿಲ್ ಅನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಂಧಿತ ಸಾರ್ಥಕ್, ಫಾರಿನರ್ಸ್ ಪೋಸ್ಟ್ ಮೂಲಕ ಬೆಂಗಳೂರಿಗೆ ಡ್ರಗ್ಸ್ ತರಿಸುತ್ತಿದ್ದ. ಬಳಿಕ ಅದನ್ನು ಯಾರಿಗೆ ತಲುಪಬೇಕೋ ಅವರಿಗೆ ತಲುಪಿಸುತ್ತಿದ್ದ. ಫಾರಿನರ್ಸ್ ಪೋಸ್ಟ್ ಕೊರಿಯರ್ ಮೇಲೆ ಸಿಸಿಬಿ ನಿಗಾ ಇಟ್ಟಿತ್ತು. ಇತ್ತೀಚಿಗೆ ಬೆಲ್ಜಿಯಂನಿಂದ ಬೆಂಗಳೂರಿಗೆ ಬಂದ ಕೊರಿಯರ್ ಟ್ರ್ಯಾಕ್ ಮಾಡಿ ಪೋಸ್ಟ್  ಅಫೀಸಿನಲ್ಲಿ ಪರಿಶೀಲನೆ ಮಾಡಲಾಗಿತ್ತು. ಚಾಮರಾಜಪೇಟೆ ಫಾರಿನರ್ಸ್ ಪೋಸ್ಟ್ ಆಫೀಸ್​ನಲ್ಲಿ ಸಿಸಿಬಿ ಪೊಲೀಸರು ಆ ಕೊರಿಯರ್ ಅನ್ನು ಪರಿಶೀಲನೆ ಮಾಡಿದ್ದರು. ಆಗ ಟ್ರ್ಯಾಕ್ ರೆಕಾರ್ಡ್ ಮೂಲಕ ಹೆಚ್​ಎಸ್​ಆರ್ ಲೇಔಟ್​ನ ಟೆಕ್ಕಿ ಸಾರ್ಥಕ್ ಆರ್ಯ ಎಂಬಾತನ ಮನೆ ಶೋಧ ನಡೆಸಿದ ಸಿಸಿಬಿ ವಿಶೇಷ ವಿಚಾರಣಾ  ದಳದ ಸಿಬ್ಬಂದಿಗೆ ಆತನ ಮನೆಯಲ್ಲಿ ವಿದೇಶಿ ಮೂಲದ ಮಾದಕವಸ್ತು ಪತ್ತೆಯಾಗಿತ್ತು. 

ಇನ್ನು ಟೆಕ್ಕಿಯ ಮನೆಯಲ್ಲಿ 4.99 ಗ್ರಾಂ LSD, MH ಸೀರೀಸ್ ಪ್ಯಾಕೆಟ್ ಸ್ಕೇಲ್, ಬ್ರೌನ್ ಸ್ಮೋಕ್ ಪೇಪರ್ ಪ್ಯಾಕೆಟ್, OCB ಸ್ಲಿಮ್ ಸ್ಮೋಕ್ ಪೇಪರ್ ಪ್ಯಾಕೆಟ್, ರಾ ಟಿಪ್ಸ್ ಸ್ಮೋಕ್ ಪೇಪರ್ ಪ್ಯಾಕೆಟ್, 100 ml ಕೆಮಿಕಲ್ ಅಯಿಲ್ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಹೆಚ್​ಎಸ್​ಆರ್​ ಲೇಔಟ್ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com