ನೋ ಶೋ: ಜನವರಿವರೆಗೂ ಚಿತ್ರಮಂದಿರಗಳ ಬಂದ್'ಗೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಂಡಳಿ ನಿರ್ಧಾರ

ಕೊರೋನಾ ಸಾಂಕ್ರಾಮಿಕ ರೋಗ, ಆಸನಗಳ ಕುರಿತು ರಾಜ್ಯ ಸರ್ಕಾರ ಹೇರಲಾಗಿರುವ ನಿರ್ಬಂಧ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ನಿರ್ಮಾಪಕರು ಸಿನಿಮಾಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿಯು ಜನವರಿವರೆಗೂ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕೊರೋನಾ ಸಾಂಕ್ರಾಮಿಕ ರೋಗ, ಆಸನಗಳ ಕುರಿತು ರಾಜ್ಯ ಸರ್ಕಾರ ಹೇರಲಾಗಿರುವ ನಿರ್ಬಂಧ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ನಿರ್ಮಾಪಕರು ಸಿನಿಮಾಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿಯು ಜನವರಿವರೆಗೂ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. 

ಕೊರೋನಾ ಲಾಕ್ಡೌನ್ ಹೇರಿಕೆ ಬಳಿಕ ಒಟಿಟಿ ಫಾರ್ಮ್ ಆಯ್ಕೆ ಬಹುಜನರ ಆಯ್ಕೆಗಳಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಚಿತ್ರಮಂದಿರಗಳಲ್ಲಿ ನಿರ್ಮಾಪಕರು ಹಳೆಯ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿರುವುದು ಕಡಿಮೆಯಾಗಿದ್ದು, ಹೀಗಾಗಿ ನಿರ್ಮಾಪಕರು ಬಿಗ್ ಬಜೆಟ್ ಚಿತ್ರಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. 

ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾ ಮಂಡಳಿದ ಅಧ್ಯಕ್ಷ ಆರ್.ಆರ್.ಓದುಗೌಡರ ಮಾತನಾಡಿ, ಪರವಾನಗಿ ಶುಕ್ಕ ಸೇರಿ ಪುನರ್ ಪರಿಶೀಲಿಸುವುದು ಸೇರಿ ವಿವಿಧ ಬೇಡಿಕೆ ಈಡೇರದೆ, ಶೇ.75ರಷ್ಟು ಸೀಟು ಭರ್ತಿ ಮಾಡಲು ಅವಕಾಶ ನೀಡದೆ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಆರಂಭಿಸುವುದಿಲ್ಲ ಎಂದು ಹೇಳಿದ್ದಾರೆ. 

2021ರ ಜನವರಿವರೆಗೂ ಹೊಸ ಚಿತ್ರಗಳನ್ನು ಬಿಡುಗಡೆ ಮಾಡದಿರಲು ನಿರ್ಮಾಪಕರು ಹೇಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾವೂ ಕೂಡ ಜನವರಿವರೆಗೂ ಚಿತ್ರಮಂದಿರಗಳನ್ನು ತೆರೆಯದಿರಲು ನಿರ್ಧರಿಸಿದ್ದೇವೆ. ಕಳೆದ 6 ತಿಂಗಳುಗಳಿಂದ ಚಿತ್ರಮಂದಿರಗಳ ಮಾಲೀಕರು ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಾಕಷ್ಟು ಆಗ್ರಹಗಳನ್ನು ಸರ್ಕಾರವಾಗಲೀ, ಚಿತ್ರ ನಿರ್ಮಾಪಕರಾಗಲೀ ಈವರೆಗೂ ಈಡೇರಿಸಿಲ್ಲ ಎಂದು ತಿಳಿಸಿದ್ದಾರೆ. 

ಚಿತ್ರಮಂದಿರದ ಪರವಾನಗಿ ನವೀಕರಣವನ್ನು 3 ವರ್ಷಕ್ಕೊಮ್ಮೆ ಮಾಡಿಕೊಂಡು ಬರುತ್ತಿದ್ದು 2018ರಿಂದ ಐದು ವರ್ಷಕ್ಕೆ ಪರವಾನಗಿ ನೀಡಲಾಗುತ್ತಿದೆ. ಸದ್ಯ ನವೀಕರಣ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಮೊದಲು ಸಾವಿರ ಇದ್ದ ಶುಲ್ಕ ಈಗ 5 ಸಾವಿರಕ್ಕೇರಿದೆ. ಇದರಿಂದಾಗಿ ಒಂದು ಚಿತ್ರಮಂದಿರದ ಒಟ್ಟು ಚದರದಡಿಗೆ ರೂ.12 ಲಕ್ಷ ಭರಿಸಬೇಕಾಗುತ್ತದೆ. ಕೂಡಲೇ ಪರವಾನಗಿ ನವೀಕರಣ ಶುಲ್ಕವನ್ನು ಪುನರ್ ಪರಿಶೀಲಿಸಬೇಕು. ಚಿತ್ರಮಂದಿರಕ್ಕೆ ವಾಣಿಜ್ಯ ಉದ್ದೇಶದ ಬದಲು ಕೈಗಾರಿಕಾ ವಲಯಕ್ಕೆ ಅನ್ವಯವಾಗುವ ವಿದ್ಯುತ್ ದರ ನಿಗದಿ ಮಾಡಿ ತೆರಿಗೆ ಹೊರೆ ಇಳಿಸಬೇಕು. ಚಿತ್ರಮಂದಿರಗಳಿಗೆ ವಿಧಿಸುತ್ತಿರುವ ಅವೈಜ್ಞಾನಿಕ ಕಟ್ಟಡ ತೆರಿಗೆಯ ಕುರಿತೂ ಗಮನಹರಿಸಬೇಕು. ನಿರ್ಮಾಪಕರು-ಪ್ರದರ್ಶಕರೊಂದಿಗೆ ಸಮಸ್ಯೆಗಳ ಕುರಿತು ಸರ್ಕಾರ ಮುಕ್ತ ಚರ್ಚೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. 

ಲಾಕ್ಡೌನ್ ಅವಧಿಯಲ್ಲಿ ಹಲವು ಚಿತ್ರಮಂದಿರಗಳ ಪರವಾನಗಿ, ಪರ್ಮಿಟ್'ಗಳ ಅವಧಿ ಕೊನೆಗೊಂಡಿದೆ. ಮುಂದಿನ 1 ವರ್ಷದವರೆಗೆ ಪರವಾನಗಿಗಳ ಸ್ವಯಂ ನವೀಕರಣದ ಅಗತ್ಯವಿದೆ. ಒಂದು ವೇಳೆ ರಿಯಾಯಿತಿ, ಅನುಮತಿಗಳು ದೊರೆತು ಸರ್ಕಾರದ ಸೂಚಿಸಿರುವಂತೆ ಶೇ.50ರಷ್ಟು ಸೀಟುಗಳ ಸಾಮರ್ಥ್ಯದೊಂದಿಗೆ ಚಿತ್ರಮಂದಿರ ತೆರೆದರೂ ಸಮಸ್ಯೆ. ಕೋವಿಡ್ ನಡುವೆ ಹಲವು ಸಮಸ್ಯೆಗಳೊಂದಿಗೆ ಚಿತ್ರಮಂದಿರ ತೆರೆದರೆ ಮುಂದೆ ಚಿತ್ರಮಂದಿರಗಳಿಗೆ ಶಾಶ್ವತವಾಗಿ ಬಾಗಿಲು ಹಾಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com