
ಡಾ.ರಾಮರಾವ್ ಮಹಾರಾಜ್
ಬೆಂಗಳೂರು: ಬಂಜಾರ ಸಮುದಾಯದ ಪ್ರಥಮ ಜಗದ್ಗುರು ರಾಮರಾವ್ ಮಹಾರಾಜ್ ವಿಧಿವಶರಾಗಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಬಂಜಾರ ಸಮುದಾಯದ ಪ್ರಥಮ ಜಗದ್ಗುರು.. ಶ್ರೀ ರಾಮರಾವ್ ಮಹಾರಾಜ್ ಅವರು ಲಿಂಗೈಕ್ಯರಾದ ಸುದ್ದಿಯಿಂದ ದು:ಖಿತನಾಗಿದ್ದೇನೆ. ಗುರುಗಳ ಅಗಲಿಕೆಯಿಂದ ಬಂಜಾರ ಸಮುದಾಯ ಮಾತ್ರವಲ್ಲ ಎಲ್ಲ ತಳಸಮುದಾಯಗಳೂ ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ ಎಂದು ಹೇಳಿದ್ದಾರೆ.
ಬಂಜಾರಾ ಸಮಾಜದ ಆರಾಧ್ಯ ದೈವರಾಗಿದ್ದ ಜಗದ್ಗುರು ಡಾ.ರಾಮರಾವ್ ಮಹಾರಾಜ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಡಾ.ರಾಮರಾವ್ ಮಹಾರಾಜ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಹಾರಾಷ್ಟ್ರದಲ್ಲಿರುವ ಪೌರಾಗಢದ ಪೀಠಧಿಪತಿಗಳಾಗಿದ್ದ ಶ್ರೀರಾಮರಾವ್ ಮಹಾರಾಜ್ ಬಂಜಾರರ ಕುಲಗುರು ಸಂತ ಸೇವಾಲಾಲರ ಕುಲದವರಾಗಿದ್ದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ತಡ ರಾತ್ರಿ ಮೃತಪಟ್ಟಿದ್ದಾರೆ. ಶ್ರೀಗಳು ದೇಶಾದ್ಯಂತ ನೆಲೆಸಿರುವ ಬಂಜಾರಾ ಸಮುದಾಯದ ಗುರುಗಳಾಗಿದ್ದರು. ಸ್ವಾಮೀಜಿಗಳ ನಿಧನಕ್ಕೆ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.
ಬಂಜಾರ ಸಮುದಾಯದ ಪ್ರಥಮ ಜಗದ್ಗುರು
— Siddaramaiah (@siddaramaiah) October 31, 2020
ಶ್ರೀ ರಾಮರಾವ್ ಮಹಾರಾಜ್ ಅವರು ಲಿಂಗೈಕ್ಯರಾದ ಸುದ್ದಿಯಿಂದ ದು:ಖಿತನಾಗಿದ್ದೇನೆ.
ಗುರುಗಳ ಅಗಲಿಕೆಯಿಂದ ಬಂಜಾರ ಸಮುದಾಯ ಮಾತ್ರವಲ್ಲ ಎಲ್ಲ ತಳಸಮುದಾಯಗಳೂ ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ.
ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ pic.twitter.com/PrBF4GeCkK