ಸ್ಪೆಷಲ್‌ ಆಪರೇಷನ್ ಅವಾರ್ಡ್' ಗೆ ರಾಜ್ಯ ಪೊಲೀಸ್ ತಂಡ ಆಯ್ಕೆ

ಕೇಂದ್ರ ಗೃಹ ಸಚಿವಾಲಯದಿಂದ ಪ್ರತಿ ವರ್ಷ ನೀಡುವ 'ಹೋಮ್‌ ಮಿನಿಸ್ಟರ್ ಸ್ಪೆಷಲ್‌ ಆಪರೇಷನ್ ಮೆಡಲ್' ಗೆ ರಾಜ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಪೊಲೀಸ್ ತಂಡ ಭಾಜನವಾಗಿದೆ.
ಕರ್ನಾಟಕ ಪೊಲೀಸರು
ಕರ್ನಾಟಕ ಪೊಲೀಸರು

ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದಿಂದ ಪ್ರತಿ ವರ್ಷ ನೀಡುವ 'ಹೋಮ್‌ ಮಿನಿಸ್ಟರ್ ಸ್ಪೆಷಲ್‌ ಆಪರೇಷನ್ ಮೆಡಲ್' ಗೆ ರಾಜ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಪೊಲೀಸ್ ತಂಡ ಭಾಜನವಾಗಿದೆ.

ತ್ವರಿತ ಅಪರಾಧ ಪ್ರಕರಣ ಬೇಧಿಸಿ ವಿಶೇಷ ಕಾರ್ಯಾಚರಣೆ ನಡೆಸುವ ತಂಡಗಳಿಗೆ ಪ್ರತಿ ವರ್ಷ ಗೃಹ ಇಲಾಖೆ ಹೆಸರಿನಲ್ಲಿ ಆಯಾ ರಾಜ್ಯಗಳ ಪೊಲೀಸ್ ತಂಡಕ್ಕೆ ಕೇಂದ್ರ ಸರ್ಕಾರ ಪದಕ ನೀಡಿ ಗೌರವಿಸುತ್ತದೆ. ಅದೇ ರೀತಿ‌ ನಗರದಲ್ಲಿ‌ ಅಡಗಿಕೊಂಡಿದ್ದ ಉಗ್ರರನ್ನು ಪತ್ತೆ ಹಚ್ಚಿ ಮಟ್ಟಹಾಕಲು ಯಶಸ್ವಿಯಾಗಿದ್ದ ಪೊಲೀಸ್ ವಿಶೇಷ ತಂಡ ಈ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ರಾಜ್ಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಡಿವೈಎಸ್ ಪಿ‌ಗಳಾದ ಡಿ.ಕುಮಾರ್,  ಎಸ್.ಕೆ. ಉಮೇಶ್, ಇನ್ಸ್ ಪೆಕ್ಟರ್ ಸುಶೀಲಾ, ಕಾನ್ ಸ್ಟೆಬಲ್ ಗಳಾದ ವೈ.ಶಂಕರ್ ಮತ್ತು ಎನ್. ಪ್ರಕಾಶ್ ಅವರ ತಂಡ ವಿಶೇಷ‌ ಪದಕಕ್ಕೆ‌ ಭಾಜನವಾಗಿದೆ.

2019ರ ಡಿಸೆಂಬರ್ 21ರಿಂದ 2020ರ ಜನವರಿ 20ರವರೆಗೆ ನಡೆದಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಈ ಸಿಬ್ಬಂದಿ ಭಾಗವಹಿಸಿದ್ದರು ಎಂದು ಕೇಂದ್ರದ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಡಿ.ಕೆ. ಘೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

ರಾಜ್ಯದ‌ ಸಿಬ್ಬಂದಿ ಅಲ್ಲದೆ, ದೆಹಲಿ,ಗುಜರಾತ್, ತಮಿಳುನಾಡು ಮತ್ತು ಕೇರಳದ ಪೊಲೀಸ್ ಸಿಬ್ಬಂದಿಯನ್ನೂ ಪದಕಕ್ಕೆ ಈ ಆಯ್ಕೆ‌ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com