ಬೆಂಗಳೂರು: ಕೊರೋನಾ ತುರ್ತು ಪರಿಸ್ಥಿತಿಗೆ ಏರ್ ಆ್ಯಂಬುಲೆನ್ಸ್ ಸೇವೆ

ಕೊರೋನಾದಿಂದ ಬಳಲುತ್ತಿದ್ದು ತುರ್ತು ಪರಿಸ್ಥಿತಿಯಲ್ಲಿರುವವರು ಇನ್ನು ಮುಂದೆ ಹೆಚ್ಚಿನ ಸಮಯ ಕಾಯುವಂತಿಲ್ಲ, ರಸ್ತೆ ಪ್ರಯಾಣದ ಬದಲು ಕೊರೋನಾ ರೋಗಿಗಳಿಗೆ ಏರ್ ಆ್ಯುಂಬಲೆನ್ಸ್ ಸೇವೆ ಒದಗಿಸಲಾಗುತ್ತಿದೆ.

Published: 01st September 2020 09:15 AM  |   Last Updated: 01st September 2020 09:15 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: ಕೊರೋನಾದಿಂದ ಬಳಲುತ್ತಿದ್ದು ತುರ್ತು ಪರಿಸ್ಥಿತಿಯಲ್ಲಿರುವವರು ಇನ್ನು ಮುಂದೆ ಹೆಚ್ಚಿನ ಸಮಯ ಕಾಯುವಂತಿಲ್ಲ, ರಸ್ತೆ ಪ್ರಯಾಣದ ಬದಲು ಕೊರೋನಾ ರೋಗಿಗಳಿಗೆ ಏರ್ ಆ್ಯುಂಬಲೆನ್ಸ್ ಸೇವೆ ಒದಗಿಸಲಾಗುತ್ತಿದೆ.

ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಜಕ್ಕೂರು ಏರ್ ಡ್ರಮ್ಸ್ ನಿಂದ ಏರ್ ಆ್ಯಂಬುಲೆನ್ಸ್ ಸೇವೆ ಅಸ್ಥಿತ್ವಕ್ಕೆ ಬರಲಿದೆ. ಸೆಪ್ಟಂಬರ್ ತಿಂಗಳಿನಿಂದ ಹಾರಾಟ ನಡೆಸಲಿದೆ,

ತುಂಬಾ ರಿಮೋಟ್ ಪ್ರದೇಶದಲ್ಲಿರುವ ಹಳ್ಳಿಗಳಿಂದ ರೋಗಿಗಳನ್ನು ತುರ್ತಾಗಿ ಕರೆ ತರಲು ಏರ್ ಆ್ಯಂಬುಲೆನ್ಸ್ ಸಹಾಯ ಮಾಡಲಿದೆ, ಈ ಹೆಲಿಕಾಪ್ಟರ್ ನಲ್ಲಿ ಒಬ್ಬರು ನರ್ಸ್ ಮತ್ತು ಇಬ್ಬರು ಪೈಲಟ್ಸ್ ಇರಲಿದ್ದಾರೆ, ಐಕಾತ್ ಕ್ಯಾತಿ ಏರ್ ಆ್ಯಂಬುಲೆನ್ಸ್ ನಿಂದ ಈ ಸೇವೆ ದೊರೆಯಲಿದೆ.

ಬೆಂಗಳೂರಿನಿಂದ ಸೇವೆ ಆರಂಭಿಸಲು ಸಿಎಂ ಯಡಿಯೂರಪ್ಪ ಅನುಮತಿ ನೀಡಿದ್ದಾರೆ ಎಂದು ಐಕಾತ್ ಮಾರ್ಕೆಟಿಂಗ್ ಮುಖ್ಯಸ್ಥ ಫಾಹಿಮ್ ಹುಸೇನ್ ತಿಳಿಸಿದ್ದಾರೆ. ಈ ಮೊದಲು  ಮುಂಬಯಿ,  ದೆಹಲಿ ಮುಂತಾದ ನಗರಗಳಲ್ಲಿ ಮಾಡುತ್ತಿದ್ದೆವು. ಈಗ ಬೆಂಗಳೂರಿನಲ್ಲಿ ಆರಂಭಿಸಿದ್ದೇವೆ. ಇದರಿಂದ ಎಮರ್ಜೆನ್ಸಿ ಇರುವ ರೋಗಿಗಳಿಗೆ ಶೀಘ್ರವಾಗಿ ಚಿಕಿತ್ಸೆ
ದೊರೆಯಲಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯದ ಡಿಜಿ ಅವರಿಂದ ಅನುಮೋದನೆ ಪಡೆದಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಏಳು ರಿಂದ ಎಂಟು ಏರ್ ಆಂಬುಲೆನ್ಸ್‌ಗಳಿವೆ, ಅಲ್ಲಿ ಚಾರ್ಟೆಡ್ ಕ್ರಾಫ್ಟ್ ಅನ್ನು ತಾತ್ಕಾಲಿಕವಾಗಿ ಏರ್ ಆಂಬ್ಯುಲೆನ್ಸ್ ಆಗಿ ಪರಿವರ್ತಿಸಲಾಗಿದೆ ಎಂದು ಹುಸೇನ್ ವಿವರಿಸಿದರು. 


 

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp