ಕೋವಿಡ್-19 ಸೋಂಕಿನ ಭೀತಿ ನಡುವೆಯೇ 5 ತಿಂಗಳ ಬಳಿಕ ಮಂಗಳೂರಿನಲ್ಲಿ ಮೀನುಗಾರಿಕೆ ಆರಂಭ

ಕೋವಿಡ್ ಸೋಂಕು ನಿಯಂತ್ರಣ ಉದ್ದೇಶದಿಂದ ಕಳೆದ ಐದು ತಿಂಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಚಟುವಟಿಕೆ ಇಂದಿನಿಂದ ಪುನಾರಂಭಗೊಂಡಿದೆ.
ಮಂಗಳೂರು ಬಂದರು
ಮಂಗಳೂರು ಬಂದರು

ಮಂಗಳೂರು: ಕೋವಿಡ್ ಸೋಂಕು ನಿಯಂತ್ರಣ ಉದ್ದೇಶದಿಂದ ಕಳೆದ ಐದು ತಿಂಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಚಟುವಟಿಕೆ ಇಂದಿನಿಂದ ಪುನಾರಂಭಗೊಂಡಿದೆ.

ಹೌದು.. ಮಂಗಳೂರಿನಲ್ಲಿ ಇಂದಿನಿಂದ ಮೀನುಗಾರಿಕೆ ಚಟುವಟಿಕೆ ಆರಂಭವಾಗಿದ್ದು, ಕೊರೋನಾ ಸೋಂಕಿನ ಭೀತಿ ನಡುವೆಯೇ ಮೀನುಗಾರರು ಕೆಲ ನಿರ್ಬಂಧಗಳ ಮೇರೆಗೆ ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ಇಳಿದಿದ್ದಾರೆ. ಪ್ರತಿ ವರ್ಷ ಮೇ ಅಂತ್ಯಕ್ಕೆ ಮೀನುಗಾರಿಕಾ ಋತು ಮುಕ್ತಾಯಗೊಂಡರೆ ಈ ಬಾರಿ  ಎರಡು ತಿಂಗಳ ಮೊದಲೆ ಸ್ಥಗಿತವಾಗಿತ್ತು. ಪ್ರತಿ ವರ್ಷ ಆಗಸ್ಟ್ 1ಕ್ಕೆ ಮೀನುಗಾರಿಕೆ ಆರಂಭವಾದರೆ ಕೋವಿಡ್ ಹಿನ್ನೆಲೆಯಲ್ಲಿ ಮೀನುಗಾರ ಮುಖಂಡರು ಮತ್ತು ಸರಕಾರ ನಿರ್ಧರಿಸಿದಂತೆ ಸೆಪ್ಟೆಂಬರ್ 1 ಅಂದರೆ ಇಂದಿನಿಂದ ಚಾಲನೆ ದೊರೆತಿದೆ.

ಮೀನುಗಾರಿಕೆ ಆರಂಭವಾಗಿರುವುದರಿಂದ ಮಂಗಳೂರು ಬಂದರುವಿನಲ್ಲಿ ಚಟುವಟಿಕೆ ಗರಿಗೆದರಿದೆ. ಕೇರಳ, ತಮಿಳುನಾಡು, ಒರಿಸ್ಸಾ, ಆಂಧ್ರಪ್ರದೇಶದ ಕಾರ್ಮಿಕರು ಮಂಗಳೂರಿನಿಂದ ಹೊರಡುವ ಮೀನುಗಾರಿಕಾ ಬೋಟ್‍ನಲ್ಲಿ ದುಡಿಯುತ್ತಿದ್ದಾರೆ. ಈ ಬಾರಿ ಸಾರಿಗೆ ವ್ಯವಸ್ಥೆ ಸಮಸ್ಯೆಯಿಂದ ಬೋಟ್ ಮಾಲಿಕರೇ  ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದಾರೆ. ಮೀನುಗಾರರು ತಂಡೋಪತಂಡವಾಗಿ ಮೀನುಗಾರಿಕೆಗೆ ತೆರಳುತ್ತಿದ್ದಾರೆ. ಕೊರೋನಾ ಭೀತಿ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮೀನುಗಾರಿಕೆಗೆ ಕೆಲ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಲ್ಲದೆ ಎಚ್ಚರಿಕೆ ವಹಿಸುವಂತೆ ಮೀನುಗಾರರಿಗೆ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com