ಹಾಸನ: ಕಾಡಾನೆ ತುಳಿತದಿಂದ ದೇವಸ್ಥಾನದ ಅರ್ಚಕ ಸಾವು

ಜಿಲ್ಲೆಯ ಸಕಲೇಶಪುರ ಹೊರವಲಯದಲ್ಲಿರುವ ಕೊಲ್ಲಹಳ್ಳಿಯಲ್ಲಿ 48 ವರ್ಷದ ವ್ಯಕ್ತಿಯನ್ನು ಕಾಡಾನೆಯೊಂದು ತುಳಿದು ಸಾಯಿಸಿದೆ.
 

Published: 01st September 2020 04:48 PM  |   Last Updated: 01st September 2020 04:48 PM   |  A+A-


Casual_Photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : UNI

ಹಾಸನ: ಜಿಲ್ಲೆಯ ಸಕಲೇಶಪುರ ಹೊರವಲಯದಲ್ಲಿರುವ ಕೊಲ್ಲಹಳ್ಳಿಯಲ್ಲಿ 48 ವರ್ಷದ ವ್ಯಕ್ತಿಯನ್ನು ಕಾಡಾನೆಯೊಂದು ತುಳಿದು ಸಾಯಿಸಿದೆ.

ಮೃತರನ್ನು ಸಕಲೇಶಪುರ ಹೊರವಲಯದ ಗುಕೇಲಮ್ಮನ್‍ ದೇವಸ್ಥಾನದ ಅರ್ಚಕ ಅಸ್ತಿಕ್‍ ಭಟ್ ಎಂದು ಗುರುತಿಸಲಾಗಿದೆ ಎಂಬುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. 

ಅರ್ಚಕರು  ಕೊಳದಿಂದ ದೇವಸ್ಥಾನಕ್ಕೆ ನೀರು ತರುತ್ತಿದ್ದಾಗ, ಕಾಡಾನೆ ದಾಳಿ ನಡೆಸಿದೆ. ಆನೆಯ ಕಾಲ್ತುಳಿತದಿಂದ ಅರ್ಚಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಸಕಲೇಶಪುರ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp