ಕೇಂದ್ರದಿಂದ ಜಿಎಸ್‌ಟಿ ಪರಿಹಾರದ ಬದಲು-ಆರ್ಬಿಐ ಯಿಂದ ಸಾಲ ಪಡೆಯಲು ತೀರ್ಮಾನಿಸಿದ ರಾಜ್ಯ ಸರ್ಕಾರ!

ಕೇಂದ್ರ ಸರ್ಕಾರ ಜಿಎಸ್ ಟಿ ಪರಿಹಾರವನ್ನು ರಾಜ್ಯಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸುವ ಮೂಲಕ ಸಾಲದ ಅವಕಾಶವನ್ನು ರಾಜ್ಯಗಳ ವಿವೇಚನೆಗೆ ಬಿಟ್ಟಿತ್ತು. ಸಾಲ ಪಡೆ ಯಲು ಎರಡು ಆಯ್ಕೆಗಳನ್ನು ರಾಜ್ಯಗಳ ಮುಂದಿಟ್ಟಿತ್ತು.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ಕೇಂದ್ರ ಸರ್ಕಾರ ಜಿಎಸ್ ಟಿ ಪರಿಹಾರವನ್ನು ರಾಜ್ಯಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸುವ ಮೂಲಕ ಸಾಲದ ಅವಕಾಶವನ್ನು ರಾಜ್ಯಗಳ ವಿವೇಚನೆಗೆ ಬಿಟ್ಟಿತ್ತು. ಸಾಲ ಪಡೆ ಯಲು ಎರಡು ಆಯ್ಕೆಗಳನ್ನು ರಾಜ್ಯಗಳ ಮುಂದಿಟ್ಟಿತ್ತು. ಇದರಲ್ಲೇ ಒಂದು ಆಯ್ಕೆಯನ್ನು ಆಯ್ದುಕೊಂಡಿರುವ ಕರ್ನಾಟಕ ಸರಕಾರ, ಸೆಸ್ ಹಾಗೂ ಸಾಲ ಪಡೆದುಕೊಳುವ ಆಯ್ಕೆಯನ್ನು ಮಾಡಿಕೊಳ್ಳುವ ಮೂಲಕ ತಮ್ಮ ರಾಜ್ಯಕ್ಕಾಗುವ ಅನ್ಯಾಯವನ್ನು ಸಹಿಸಿಕೊಳ್ಳುವ ಅನಿವಾರ್ಯತೆಗೆ ಮುಂದಾಗಿದೆ.  

ಈ ಬಗ್ಗೆ ಪ್ರತ್ರಿಕಾ ಪ್ರಕಟಣೆ ನೀಡಿರುವ ರಾಜ್ಯ ಸರ್ಕಾರದ ಮೊದಲನೇ ಆಯ್ಕೆಯಲ್ಲಿ ಕರ್ನಾಟಕ ಸರಕಾರ 18, 289 ಕೋಟಿ ರೂ.ಜಿಎಸ್ ಟಿ ಪರಿಹಾರಕ್ಕೆ ಅರ್ಹವಾಗಿತ್ತು. ಇದರಲ್ಲಿ 6,969 ಕೋಟಿ ರೂ.ಸೆಸ್ ನಿಂದ ಬರಲಿದೆ. ಉಳಿದ 11,324 ಕೋಟಿ ರೂಪಾಯಿಗಳನ್ನು ವಿಶೇಷ ವಿಂಡೋ ಮೂಲಕ ಆರ್ ಬಿಐನಿಂದ ಸಾಲ ಪಡೆಯಲು ಅವಕಾಶ ನೀಡುವುದಾಗಿ ಕೇಂದ್ರ ಸರಕಾರ ತಿಳಿಸಿತ್ತು. ಅದರ ಅಸಲು ಮತ್ತು ಬಡ್ಡಿಯನ್ನು ಪರಿಹಾರ ಸೆಸ್ ನಿಧಿ ಯಿಂದ ಪಾವತಿಸಲಾಗುತ್ತದೆ. ಇದಲ್ಲದೆ ರಾಜ್ಯ ಜಿಡಿಪಿಯ ಶೇ.1 ರಷ್ಟು ಅಂದರೆ 18,036 ಕೋಟಿ ರೂ. ಹೆಚ್ಚುವರಿ ಸಾಲವು ಪಡೆಯಲು ಅವಕಾಶವಿದೆ ಎಂದು ಕೇಂದ್ರ ಸರಕಾರ ರಾಜ್ಯಕ್ಕೆ ತಿಳಿಸಿತ್ತು.ಇದೇ ಆಯ್ಕೆ ಯನ್ನು ರಾಜ್ಯ ಸರಕಾರ ಆಯ್ದುಕೊಂಡಿದ್ದು 11,324 ಹಾಗೂ 18,036 ಕೋಟಿ ರೂ.ಸಾಲ ವನ್ನು ರಿಸರ್ವ್ ಬ್ಯಾಂಕ್ ನಿಂದ ಪಡೆ ದುಕೊಳ್ಳಲು ಮುಂದಾಗಿದೆ.

ಜಿಎಸ್ ಡಿಪಿಯ ಶೇ 1ರಷ್ಟು ಹೆಚ್ಚುವರಿ ಸಾಲವು ಯಾವುದೇ ಷರತ್ತಿಗೆ ಒಳಪಡೆದೆ ಲಭ್ಯವಿರುತ್ತದೆ.ಆರ್ ಬಿಐ ಆದೇಶದನ್ವಯ ನಿಗದಿತ ಸಮಯದೊಳಗೆ ಕೆಲವು ಸುಧಾರಣೆ ಮಾಡಿದಲ್ಲಿ ಇನ್ನೂ ಜಿಎಸ್ ಡಿಪಿಯ ಶೇ. 1ರಷ್ಟು ಸಾಲವನ್ನು ಮಾಡಬಹುದು.ಅಗತ್ಯವಿದ್ದರೆ ಸಾಲವನ್ನು ಮುಂದಿನ ವರ್ಷಕ್ಕೆ ಸಹ ಮುಂದುವರೆಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಎರಡನೇ ಆಯ್ಕೆಯಲ್ಲಿ ರಾಜ್ಯ ಸರಕಾರ 25,508 ಕೋಟಿ ರೂ. ಪರಿಹಾರಕ್ಕೆ ಅರ್ಹವಾಗಿದ್ದು 6,965 ಕೋಟಿ ರೂ. ಸೆಸ್ ನಿಂದ ಬರುತ್ತದೆ. ಉಳಿದ 18,543 ಕೋಟಿ ರೂ.ಗಳನ್ನು ಮಾರುಕಟ್ಟೆಯಿಂದ ಸಾಲವಾಗಿ ಪಡೆದುಕೊಳ್ಳಲು ರಾಜ್ಯಕ್ಕೆ ಅವಕಾಶವಿದೆ. ಆದರೆ ರಾಜ್ಯದ ಜಿಡಿಪಿಯ ಶೇ.1ರಷ್ಟು ಅಂದರೆ 18,036 ಸಾಲವನ್ನು ಯಾವುದೇ ಷರತ್ತಿ ಲ್ಲದೆ ಪಡೆದುಕೊಳ್ಳಲು ಅವಕಾಶವಿಲ್ಲ. ಇದರಿಂದ ರಾಜ್ಯ ಪಡೆದು ಕೊಳ್ಳಬಹುದಾದ ಸಾಲದ ಮೊತ್ತ 10,817 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗುತ್ತದೆ. ಜೊತೆಗೆ ಈ ಸಾಲದ ಬಡ್ಡಿಯ ಹಣವನ್ನೂ ರಾಜ್ಯ ಸರಕಾರವೇ ಹೊಂದಿಸಬೇಕಾಗಿದೆ.ಹೀಗಾಗಿ ಈ ಆಯ್ಕೆಯನ್ನು ಸರಕಾರ ಕೈಬಿಟ್ಟಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮೊದಲ ಆಯ್ಕೆಯನ್ನೇ ತಾನು ಆಯ್ದುಕೊಳ್ಳುವುದಾಗಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ತಿಳಿಸಲು ಉದ್ದೇಶಿಸಿ ದೆ. ಆ ಮೂಲಕ 'ಆರ್ ಬಿಐನಿಂದ ಕೇಂದ್ರ ಸರಕಾರವೇ ಸಾಲ ಪಡೆದು ರಾಜ್ಯಗಳಿಗೆ ವಿತರಿಸಲಿ' ಎಂಬ ಹಲವು ರಾಜ್ಯಗಳ ಬೇಡಿಕೆಗೆ ರಾಜ್ಯ ಸರಕಾರ ಬೆಂಬಲ ವ್ಯಕ್ತಪಡಿಸಿಲ್ಲ.ಬದಲಾಗಿ ಕೇಂದ್ರ ಹೇಳಿದ್ದಂತೆ ಸಾಲ ಪಡೆಯವು ದಾಗಿ ರಾಜ್ಯ ಸರ್ಕಾರ ಯಾವುದೇ ಪ್ರತಿರೋದ ಒಡ್ಡದೆ ಒಪ್ಪಿಗೆ ನೀಡಿದೆ. ಮೊದಲ ಆಯ್ಕೆಯನ್ನು ಆಯ್ದುಕೊಂಡಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಿದೆ.ಆ ಮೂಲಕ ರಾಜ್ಯ ಸರ್ಕಾರದ ಆದಾಯ ಹೆಚ್ಚಿಸಲು ರಾಜ್ಯ ಸರ್ಕಾರ ಇಂತಹ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com