ಪ್ರಣಬ್ ಮುಖರ್ಜಿ ವಿಧಿವಶ: ಮಾಜಿ ರಾಷ್ಟ್ರಪತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಜ್ಯ ಕಾಂಗ್ರೆಸ್ ನಾಯಕರು

ಅಗಲಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಅಗಲಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. 

ಪ್ರಣಬ್ ಮುಖರ್ಜಿ ಅವರು ದೇಶ ಕಂಡ ಅತ್ಯುನ್ನತ ಬುದ್ಧಿಜೀವಿಗಳಲ್ಲಿ ಒಬ್ಬರು. ಸುದೀರ್ಘ ಕಾಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಅವರು ಅಜಾತಶತ್ರುವಾಗಿ ಬದುಕಿದವರು. ಅವರ ನಿಧನದಿಂದ ಇಂದು ದೇಸಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕರು ಸಂತಾಪ ವ್ಯಕ್ತಪಡಿಸಿದರು. 

ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಪ್ರಣಬ್ ಒಬ್ಬ ದೊಡ್ಡ ವಿಚಾರವಾದಿ. 1977ರಲ್ಲಿಯೇ ನನಗೆ ಅವರ ಪರಿಚಯವಾಗಿತ್ತು. ಸುದೀರ್ಘ ಸೇವೆಯೊಂದಿಗೆ ಕಾಂಗ್ರೆಸ್ ಪಕ್ಷವನ್ನು ಎತ್ತರಕ್ಕೇರಿಸಿದವರು ಅವರ ನಿಧನ ಸಾಕಷ್ಟು ನೋವು ತಂದಿದೆ ಎಂದು ದುಃಖಿಸಿದರು. 

ಆದರೆ, ಕಾಂಗ್ರೆಸ್ ನಲ್ಲಿ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿದ ಪ್ರಣಬ್ ಮುಖರ್ಜಿ ಅವರು ಕೊನೆಯಲ್ಲಿ ಆರ್'ಎಸ್ಎಸ್'ಗೆ ಹೋಗಿ ಭಾಷಣ ಮಾಡಿದ್ದು ಹೇಗೆ ಎಂಬುದೇ ನಮಗೆ ಇಂದಿಗೂ ಯಕ್ಷ ಪ್ರಶ್ನೆಯಾಗಿದೆ ಎಂದು ನಾಯಕರು ಅಚ್ಚರಿ ವ್ಯಕ್ತಪಡಿಸಿದರು. 

ಪ್ರಣಬ್ ಮುಖರ್ಜಿ 1969ರಲ್ಲಿ ಕಾಂಗ್ರೆಸ್ ಸೇರಿ ನಂತರ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಹುದ್ದೆಗಳನ್ನು ಅವರು ನಿಭಾಯಿಸಿದ್ದರು. ಕೊನೆಗೆ ರಾಷ್ಟ್ರಪತಿ ಸ್ಥಾನದಂತಹ ಅತ್ಯುನ್ನತ ಹುದ್ದೆಯವರೆಗೆ ಎಲ್ಲವನ್ನೂ ನಿಭಾಯಿಸಿದರು. ಇಂತಹ ಮೇಧಾವಿ ಕೊನೆಗೆ ನಾಗಪುರದಲ್ಲಿ ಕಳೆದ ವರ್ಷ ನಡೆದ ಆರ್'ಎಸ್ಎಸ್ ಸಭೆಗೆ ಯಾಕೆ ಹೋದರು ಅನ್ನೋದು ಈಗಲೂ ನಿಗೂಢ. ಇದರ ಬಗ್ಗೆ ಅವರ ಜೊತೆ ನಾನು ಮಾತನಾಡಬೇಕಿತ್ತು. ಆದರೆ, ಕೊನೆಗೆ ಒನ್ ಟು ಒನ್ ಮಾತನಾಡಲು ಅವಕಾಶ ಸಿಗಲೇ ಇಲ್ಲ ಎಂದರು.
 
ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಆರ್'ಎಸ್ಎಸ್'ಗೆ ಹೋಗುತ್ತಿರುವುದರಿಂದ ನಿಮ್ಮ ಹೆಸರಿಗೆ ಕಳಂಕ ಬರುವುದಿಲ್ಲವೇ ಎಂದು ಅರ್ಧ ಗಂಟೆ ಕಾಲ ಮಾತನಾಡಿದ್ದೆ. ಆ ಬಗ್ಗೆ ಸಂದರ್ಭ ಬಂದಾಗ ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದರು ಎಂದು ಹೇಳಿದರು. 

ಮಾಜಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅವರು ಆರ್'ಎಸ್ಎಸ್ ಸಭೆಗೆ ಹೋಗಿದ್ದೇ ಇಂದಿಗೂ ಯಕ್ಷಪ್ರಶ್ನೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com