ಪೊಲೀಸರಿಗೆ ಗೊತ್ತಿಲ್ಲದೆ ಡ್ರಗ್ಸ್ ಹಾಗೂ ಕಳ್ಳತನ ದಂಧೆಗಳು ನಡೆಯುವುದಿಲ್ಲ: ಎಚ್.ವಿಶ್ವನಾಥ್ ಸ್ಪೋಟಕ ಹೇಳಿಕೆ

ಪೊಲೀಸರಿಗೆ ಗೊತ್ತಿಲ್ಲದೆ ಡ್ರಗ್ಸ್ ಹಾಗೂ ಕಳ್ಳತನ ದಂಧೆಗಳು ನಡೆಯುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಎಚ್ ವಿಶ್ವನಾಥ್
ಎಚ್ ವಿಶ್ವನಾಥ್

ಮೈಸೂರು: ಪೊಲೀಸರಿಗೆ ಗೊತ್ತಿಲ್ಲದೆ ಡ್ರಗ್ಸ್ ಹಾಗೂ ಕಳ್ಳತನ ದಂಧೆಗಳು ನಡೆಯುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

ಇದು ನಿನ್ನೆ ಮೊನ್ನೆ ಪ್ರಕರಣ ಅಲ್ಲ ಇದು.ನಮಗೆ ಅರಿವು ಇಲ್ಲದೆ ಡ್ರಗ್ಸನ್ನು ನಾವೇ ಬೆಳೆಸಿಕೊಂಡು ಬಂದಿದ್ದೇವೆ.ಹಲವು ಹಂತದಲ್ಲಿ ಬೆಳೆದು ಸೆಲೆಬ್ರಿಟಿಗಳ ಹಂತಕ್ಕೆ ಬಂದು ನಿಂತಿದೆ.ನಟನಟಿಯವರೆಗೆ ಬಂದಿರುವುದನ್ನು ಮತ್ತೊಮ್ಮೆ ನಟ,ನಿರ್ದೇಶಕ ಮಾಡಿದ್ದು ವಿಶೇಷ ಹಾಗೂ ಸೊಜಿಗ.ಪೊಲೀಸ್ ಇಲಾಖೆ  ಮಾಡಬೇಕಿದ್ದ ಕೆಲಸವನ್ನ ನಿರ್ದೇಶಕ ಮಾಡಿದ್ದಾನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ತಿಳಿಸಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​​ ಬಳಕೆಯಾಗುತ್ತಿರುವ ಬಗ್ಗೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಜಾಲ ವ್ಯವಸ್ಥಿತವಾಗಿ ಬಹಳ ವರ್ಷದಿಂದ ನಡೆದು ಬರ್ತಿದೆ. ಯಾವು ದೇ ಸರ್ಕಾರವನ್ನ ಬೊಟ್ಟು ಮಾಡಬಾರದು ಎಂದರು.ಕೋವಿಡ್ ಹೇಗೆ ಜಗತ್ತಿಗೆ ಆವರಿಸಿದೆ ಅದೆ ರೀತಿ ಡ್ರಗ್ಸ್ ಕೂಡ  ಗೊತ್ತಿಲ್ಲದಂತೆ ರಾಜ್ಯವನ್ನು ಆವರಿಸಿದೆ.ಯುವಕ,ಯುವತಿಯರು ತಮಗೆ ಅರಿವಿಲ್ಲದೆ ಈ ಪಾಪ ಕೂಪಕ್ಕೆ ಬಲಿಯಾಗುತ್ತಿದ್ದಾರೆ.ಪೊಲೀಸರು ಈಗ ತಲೆಬಾಗಿ ಸಮಾಜದ ಮುಂದೆ ನಿಲ್ಲುವ ಪರಿಸ್ಥಿತಿಗೆ ಬಂದಿದ್ದಾರೆ.ಇದು ಗಂಭೀರ ಸಮಸ್ಯೆಯನ್ನ ನಾವು ಖುಷಿ ಪಡುತ್ತಿದ್ದೇವೆ.ಈ ಗಂಭೀರ ಸಮಸ್ಯೆಯನ್ನ ಗಂಭೀರವಾಗಿ  ತೆಗೆದುಕೊಳ್ಳಬೇಕು.ನಾವೆಲ್ಲ ಈ ಬಗ್ಗೆ ಧ್ವನಿ ಎತ್ತಬೇಕು ಎನ್ನುವ ಮೂಲಕ ಡ್ರಗ್ಸ್ ದಂದೆ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ ಎಂದರು.

ಪೊಲೀಸರಿಗೆ ಎಲ್ಲವು ಗೊತ್ತಿದೆ. ಎಲ್ಲಿ ಕಳ್ಳತನ ಆಗುತ್ತೆ ಎಲ್ಲಿ ಕಳ್ಳರಿದ್ದಾರೆ.ದಂಡುಪಾಳ್ಯದವರು ಏನ್ ಮಾಡುತ್ತಿದ್ದಾರೆ ಎನ್ನುವುದು ಸಹ ಅವರಿಗೆ ಗೊತ್ತಿದೆ. ಪೊಲೀಸರಿಗೆ ಗೊತ್ತಿಲ್ಲದೆ ಏನೂ ನಡೆಯುವುದಿಲ್ಲ.ಆದರೂ ಅವರು ಗೊತ್ತಿಲ್ಲದರ ರೀತಿ ಇದ್ದಾರೆ.ಪಂಜಾಬ್ ರಾಜ್ಯ ಡ್ರಗ್ಸ್ ದಂಧೆಯಿಂದ ಹಾಳಾಗಿ ಹೋಗಿದೆ. ಅಲ್ಲಿನ  ಮುಖ್ಯಮಂತ್ರಿ ಹಾಗು ರಾಜ್ಯ ಸರ್ಕಾರ ನಲುಗಿ ಹೋಗಿದೆ.ಇದೀಗ ನಮ್ಮ ರಾಜ್ಯದಲ್ಲೂ ಅದೆ ರೀತಿ ವಾತಾವರಣ ನಿರ್ಮಾಣ ಆಗಿದೆ. ಡ್ರಗ್ಸ್ ಬಗ್ಗೆ ಮಾತನಾಡಲು ಮಡಿವಂತಿಕೆ ಬೇಡ ಎಂದಿದ್ದಾರೆ. 

ಡ್ರಗ್ಸ್ ಮಾಫಿಯಾ ಮಟ್ಟಹಾಕಲು ಈಗ ಸಮಯ ಬಂದಿದೆ
ಕೋವಿಡ್ ಹೇಗೆ ಜಗತ್ತಿನ್ನು ಆವರಿಸಿದೆಯೋ, ಅದೇ ರೀತಿ ಡ್ರಗ್ಸ್ ದಂಧೆ ಕೂಡ ಗೊತ್ತಿಲ್ಲದೆ ಆವರಿಸಿದೆ. ಇಂದಿನ ಯುವಕ, ಯುವತಿಯರು ಅರಿವಿಲ್ಲದೆ ಅದಕ್ಕೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಜಾಲ ವ್ಯವಸ್ಥಿತವಾಗಿ ಬಹಳ ವರ್ಷದಿಂದ ನಡೆದು‌ ಬರುತ್ತಿದ್ದು, ಯಾವುದೇ ಸರ್ಕಾರವನ್ನು ಬೊಟ್ಟು ಮಾಡಬಾರದು. ಇದು ನಿನ್ನೆ  ಮೊನ್ನೆ ಪ್ರಕರಣ ಅಲ್ಲ‌. ನಮಗೆ ಅರಿವು ಇಲ್ಲದೆ ನಾವೇ ಬೆಳೆಸಿಕೊಂಡು ಬಂದಿದ್ದೇವೆ. ಡ್ರಗ್ಸ್ ಮಾಫಿಯಾ ಹಲವು‌ ಹಂತದಲ್ಲಿ‌ ಬೆಳೆದು ಸೆಲೆಬ್ರಿಟಿಗಳವರೆಗೂ ಬಂದು ನಿಂತಿದೆ. ಒಬ್ಬ ಸೆಲೆಬ್ರಿಟಿಯೇ ಅದನ್ನು ಬಯಲು ಮಾಡಿದ್ದು ವಿಶೇಷ ಹಾಗೂ ಸೂಜಿಗ. ಪೊಲೀಸ್ ಇಲಾಖೆ ಮಾಡಬೇಕಿದ್ದ ಕೆಲಸವನ್ನು ಆ ಸೆಲೆಬ್ರಿಟಿ  ಮಾಡಿದ್ದಾನೆ. ಡ್ರಗ್ಸ್ ದಂಧೆಯನ್ನ ಹತ್ತಿಕ್ಕಲೇಬೇಕು, ಯಾರ್ಯಾರು ಇದ್ದಾರೆ ಅನ್ನೋದು ಬಹಿರಂಗವಾಗಬೇಕು. ರಾಜಕಾರಣಿಗಳ, ಚಿತ್ರರಂಗದವರ, ಉದ್ಯಮಿಗಳ ಮಕ್ಕಳ‌ ದೌಲು ಎಲ್ಲರಿಗೂ ತಿಳಿಯಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com