ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ನಿರೀಕ್ಷಿತ 1.52 ಲಕ್ಷ ತಾಯಂದರಿಗೆ ಆರ್ಥಿಕ ನೆರವು- ಆರೋಗ್ಯ ಇಲಾಖೆ

ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ನಿರೀಕ್ಷಿತ  1 ಲಕ್ಷದ 52 ಸಾವಿರ  ತಾಯಂದರಿಗೆ ಏಪ್ರಿಲ್ ನಿಂದ ಜುಲೈ ವರೆಗೂ ಜನನಿ ಸುರಕ್ಷಾ ಯೋಜನೆಯಡಿ ಆರ್ಥಿಕ ನೆರವನ್ನು ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ನಿರೀಕ್ಷಿತ  1 ಲಕ್ಷದ 52 ಸಾವಿರ  ತಾಯಂದರಿಗೆ ಏಪ್ರಿಲ್ ನಿಂದ ಜುಲೈ ವರೆಗೂ ಜನನಿ ಸುರಕ್ಷಾ ಯೋಜನೆಯಡಿ ಆರ್ಥಿಕ ನೆರವನ್ನು ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಈ ಯೋಜನೆಯಡಿ ಗ್ರಾಮಾಂತರ ಪ್ರದೇಶದಲ್ಲಿ 700 ಹಾಗೂ ನಗರ ಪ್ರದೇಶದಲ್ಲಿ 600 ರೂಪಾಯಿ ನೀಡಲಾಗಿದ್ದು, ಶಿಶುಗಳು ಹಾಗೂ ತಾಯಿಯ ಮರಣ ಪ್ರಮಾಣ ಕಡಿಮೆಯಾಗಿದೆ. ರಾಜ್ಯಾದ್ಯಂತ ಒಟ್ಟಾರೇ 1 ಲಕ್ಷದ 91 ಸಾವಿರದ 490 ನಿರೀಕ್ಷಿತ ತಾಯಂದಿರ ಪೈಕಿಯಲ್ಲಿ 1 ಲಕ್ಷದ 52 ಲಕ್ಷ ತಾಯಂದರಿಗೆ ಆರ್ಥಿಕ ನೆರವು ನೀಡುವ ಮೂಲಕ ಶೇ.79 ರಷ್ಟು ನಿರೀಕ್ಷಿತ  ಗುರಿಯನ್ನು ತಲುಪಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಗರ್ಭಿಣಿಯರು ಶಿಶುಗಳಿಗೆ ಜನ್ಮ ನೀಡುವಾಗ ರಕ್ತಸ್ರಾವದಂತಹ ಸಮಸ್ಯೆಗಳು ಆಗುತ್ತವೆ. ಆದ್ದರಿಂದ ಮನೆಯ ಬದಲು ಆಸ್ಪತ್ರೆಗೆ ತೆರಳುವವರಿಗೆ ಆರ್ಥಿಕ ನೆರವನ್ನು ನೀಡಲಾಗುತ್ತಿದೆ ಎಂದು ತಾಯಿ ಆರೋಗ್ಯ ಯೋಜನೆ ಉಪ ನಿರ್ದೇಶಕ ಡಾ.ಎನ್. ರಾಜ್ ಕುಮಾರ್ ತಿಳಿಸಿದ್ದಾರೆ.

ಮನೆಯಲ್ಲಿ ಪರಿಸ್ಥಿತಿ ಸರಿಯಿಲ್ಲದಿದ್ದಾಗ ಪ್ರಸವಾ ನಂತರದ ರಕ್ತಸ್ರಾವದ ಹೊರತಾಗಿ,  ಅಧಿಕ ರಕ್ತದೊತ್ತಡ, ಸೆಳೆತ ಮತ್ತಿತರ ಕಾರಣಗಳಿಂದ ತಾಯಿಯ ಮರಣ ಸಂಭವಿಸಬಹುದೆಂದು ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನ ಕಮ್ಯೂನಿಟಿ ಮೆಡಿಸನ್ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಬಿ.ಎಸ್. ನಂದ ಕುಮಾರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಅತಿ ಹೆಚ್ಚು 17,087 ಫಲಾನುಭವಿಗಳಿದ್ದರೆ ಬಳ್ಳಾರಿಯಲ್ಲಿ 10, 594, ಮೈಸೂರಿನಲ್ಲಿ 9,639, ವಿಜಯಪುರದಲ್ಲಿ 8,882, ಮತ್ತು ತುಮಕೂರಿನಲ್ಲಿ 7,626 ಫಲಾನುಭವಿಗಳಿದ್ದಾರೆ. ಆದರೆ, ಬೆಂಗಳೂರು ನಗರದಲ್ಲಿ ಕೇವಲ 6004 ಮಹಿಳಾ ಫಲಾನುಭವಿಗಳಿದ್ದಾರೆ. ಏಪ್ರಿಲ್ ನಿಂದ ಜುಲೈವರೆಗೂ ಬೆಂಗಳೂರು ಕೇವಲ ಶೇ.24, 34, 42 ಮತ್ತು 19 ರಷ್ಟು ಗುರಿ ಸಾಧಿಸಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com