ಬೆಂಗಳೂರಿನ ಕೋವಿಡ್ ಪರಿಸ್ಥಿತಿ ಗಣನೀಯ ಸುಧಾರಣೆ:ವಾಸ್ತವಾಂಶ ಅರಿಯದೆ ಹೇಳಿಕೆ ಶೋಭೆ ತರಲ್ಲ- ಡಾ. ಕೆ. ಸುಧಾಕರ್ 

 ರಾಜಧಾನಿ ಬೆಂಗಳೂರಿನ ಕೋವಿಡ್ ಪರಿಸ್ಥಿತಿ ಗಣನೀಯ ಸುಧಾರಣೆ ಕಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೋವಿಡ್ ಪರಿಸ್ಥಿತಿ ಗಣನೀಯ ಸುಧಾರಣೆ ಕಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಜುಲೈ ತಿಂಗಳಿನಲ್ಲಿ ಶೇ. 1.85 ರಷ್ಟಿದ್ದ ಮರಣ ಪ್ರಮಾಣ ಶೇ. 1.50ಕ್ಕೆ  ಇಳಿಕೆಯಾಗಿದೆ. ಜುಲೈ ತಿಂಗಳಲ್ಲಿ ಶೇ. 24 ಇದ್ದ ಪಾಸಿಟಿವ್ ದರ ಶೇ. 14.74ಕ್ಕೆ ಇಳಿಕೆಯಾಗಿದೆ. ಜುಲೈ ಆರಂಭದಲ್ಲಿ ಪ್ರತೀ ದಿನ ನಡೆಸುತ್ತಿದ್ದ 4,000 ಟೆಸ್ಟಿಂಗ್ ಸಂಖ್ಯೆ ಈಗ 25,000ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎಚ್.ಕೆ. ಪಾಟೀಲ್ ಅವರೆ, ತಾವು ಹಿರಿಯರಿದ್ದೀರಿ. ವಾಸ್ತವಾಂಶ ಅರಿಯದೆ ಜನರ ದಿಕ್ಕು ತಪ್ಪಿಸುವ ಹೇಳಿಕೆ ಕೊಡುವುದು ನಿಮಗೆ ಶೋಭೆ ತರುವುದಿಲ್ಲ. ಕರ್ನಾಟಕದ ಕೋವಿಡ್ ಮರಣ ಪ್ರಮಾಣ 1.64% ಮತ್ತು ಬೆಂಗಳೂರಿನ ಕೋವಿಡ್ ಮರಣ ಪ್ರಮಾಣ 1.50%ರಷ್ಟಿದ್ದು, ರಾಷ್ಟ್ರೀಯ ಮರಣ ಪ್ರಮಾಣ ಶೇ. 1.76ಕ್ಕಿಂತ ಕಡಿಮೆಯಿದೆ (1/2) ಎಂದು ಡಾ. ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com